ಬೆಂಗಳೂರು, ಮೇ 25: ರಾಜ್ಯದಲ್ಲಿ ದುಶ್ಚಟಗಳಿಗೆ ಅಪ್ರಾಪ್ತರೆ (Minors) ಹೆಚ್ಚು ಟಾರ್ಗೆಟ್ ಆಗುತ್ತಿದ್ದು, ತಂಬಾಕು ಉತ್ಪನ್ನಗಳಿಗೆ (tobacco products) ದಾಸರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ತಂಬಾಕು ಉತ್ಪನ್ನಗಳು ಆನ್ಲೈನ್ ಆ್ಯಪ್ಗಳಲ್ಲಿ ಯುವಕರು, ಮಕ್ಕಳಿಗೆ ಸುಲಭವಾಗಿ ಸಿಗುತ್ತಿವೆ. ಹಾಗಾಗಿ ನಿಷೇಧ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಆನ್ಲೈನ್ ಹೋಮ್ ಡೆಲಿವರಿ ಆ್ಯಪ್ಗಳ ವಿರುದ್ಧ ಕ್ರಮಕ್ಕೆ ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಪತ್ರ ಬರೆದಿದ್ದಾರೆ.
ಬ್ಲಿಂಕಿಟ್, ಝೊಮಾಟೋ, ಸ್ವಿಗ್ಗಿ, ಜೆಪ್ಟೋ, ಬಿಗ್ ಬ್ಯಾಸ್ಕೆಟ್ ಸೇರಿ ಹಲವು ಹೋಮ್ ಡೆಲಿವರಿ ಆ್ಯಪ್ಗಳಿಂದ COTPA-2003 ಕಾಯ್ದೆ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಇದರಿಂದ ಅನೇಕ ದೂರುಗಳು ಕೂಡ ದಾಖಲಾದ ಹಿನ್ನೆಲೆ ಇ-ವಾಣಿಜ್ಯ ವೆಬ್ಸೈಟ್ ಮೇಲೆ ಕಾನೂನು ಕ್ರಮಕ್ಕೆ ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಇ-ವಾಣಿಜ್ಯ ವೆಬ್ ಸೈಟ್ ಮೂಲಕ ಆರೋಗ್ಯ ಎಚ್ಚರಿಕೆ ಸಂದೇಶಗಳಿಲ್ಲದೆ ತಂಬಾಕು ಉತ್ಪನ್ನಗಳನ್ನು ವ್ಯಾಪಾರ ನಡೆಸುವುದರ ಮೂಲಕ ಸಾರ್ವಜನಿಕರಲ್ಲಿ ಅದರಲ್ಲೂ ಮುಖ್ಯವಾಗಿ ಯುವಕರನ್ನು ದುಶ್ಚಟಕ್ಕೆ ಒಳಗಾಗುವಂತೆ ಮಾಡುತ್ತಿರುವುದರ ಬಗ್ಗೆ ದೂರು ಸ್ವೀಕೃತವಾಗಿದೆ.
ಇದನ್ನೂ ಓದಿ: ಪೊಲೀಸ್ ಅಪ್ಪನ ಭಯಕ್ಕೆ ಕಿಡ್ನಾಪ್ ಕಥೆ ಕಟ್ಟಿದ ಮಗ; ಶೇವಿಂಗ್ ಬ್ಲೇಡ್ನಲ್ಲಿ ಕೈ ಕೊಯ್ದುಕೊಂಡು ನಾಟಕ
The Cigarettes and Other Tobacco Products Act (COTPA) 2003 ಕಾಯ್ದೆ ಉಲ್ಲಂಘನೆ ಆಗಿದೆ. ಬ್ಲಿಂಕಿಟ್, ಝೊಮಾಟೋ, ಸ್ವಿಗ್ಗಿ, ಜೆಪ್ಟೋ, ಬಿಗ್ ಬ್ಯಾಸ್ಕೆಟ್ ಸೇರಿ ಹಲವು ಆ್ಯಪ್ಗಳು ಆರೋಗ್ಯ ಎಚ್ಚರಿಕೆ ಸಂದೇಶಗಳಿಲ್ಲದೆ ಮಾರಾಟವಾಗುತ್ತಿದ್ದು ಇದರಿಂದ ಅಪ್ರಾಪ್ತ ಮಕ್ಕಳು ವಿಷಕಾರಿ ಕ್ಯಾನ್ಸರ್ ಕಾರಕ ತಂಬಾಕು ಉತ್ಪನ್ನಗಳನ್ನು ಸೇವಿಸಲು ಉತ್ತೇಜಿಸಿದಂತಾಗುವುದಲ್ಲದೆ ಸುಲಭ ಲಭ್ಯತೆಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ.
ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಲ್ಲಿ ಫೇಕ್ ವಾಟ್ಸಾಪ್: ಸೈಬರ್ ಕ್ರೈಂಗೆ ತುಷಾರ್ ಗಿರಿನಾಥ್ ದೂರು
ಆದ್ದರಿಂದ ಇಂತಹ ಕಾನೂನು ಬಾಹಿರ ರೀತ್ಯಾ ಆನ್ ಲೈನ್ (e-commerce) ವೆಬ್ ಸೈಟ್ಗಳ ಮೇಲೆ ತುರ್ತಾಗಿ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ. ಈ ಬಗ್ಗೆ, ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿಯನ್ನು ರಾಜ್ಯ ತಂಬಾಕು ನಿಯಂತ್ರಣ ಘಟಕಕ್ಕೆ ಕಳುಹಿಸಲು ಕೋರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 pm, Sat, 25 May 24