Crime News: ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪೊಲೀಸ್ ಪೇದೆ ಮಗನ ಬರ್ಬರ ಕೊಲೆ

| Updated By: ಆಯೇಷಾ ಬಾನು

Updated on: Nov 08, 2021 | 7:47 AM

ಕಲಬುರಗಿ ನಗರದ ವಿದ್ಯಾ ನಗರದ ನಿವಾಸಿ ಅಭಿಷೇಕ್ನನ್ನು ದುಷ್ಕರ್ಮಿಗಳು ಬಸ್ ನಿಲ್ದಾಣದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Crime News: ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪೊಲೀಸ್ ಪೇದೆ ಮಗನ ಬರ್ಬರ ಕೊಲೆ
ಕೊಲೆ
Follow us on

ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಯುವಕನ ಬರ್ಬರ ಕೊಲೆ ನಡೆದಿದೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಅಭಿಷೇಕ್(25) ಕೊಲೆಯಾದ ಯುವಕ.

ಕಲಬುರಗಿ ನಗರದ ವಿದ್ಯಾ ನಗರದ ನಿವಾಸಿ ಅಭಿಷೇಕ್ನನ್ನು ದುಷ್ಕರ್ಮಿಗಳು ಬಸ್ ನಿಲ್ದಾಣದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಅಭಿಷೇಕ್​ ಪೊಲೀಸ್ ಕಾನ್ಸ್ಟೇಬಲ್ ಪುತ್ರ. ಅಭಿಷೇಕ್ ತಂದೆ ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಾರೆ. ಕೊಲೆಯಾದ ಅಭಿಷೇಕ್ ಕೂಡಾ ರೌಡಿ ಸೀಟರ್. ಕಲಬುರಗಿ ನಗರದ ಅಶೋಕ ನಗರ ಸೇರಿದಂತೆ ಅನೇಕ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಕೇಸ್​ಗಳು ಅಭಿಷೇಕ್​ ಮೇಲಿದೆ.

2020 ರಲ್ಲಿ ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ಸಾಗರ್ ಅನ್ನೋ ಯುವಕನ ಮೇಲೆ ಅಭಿಷೇಕ್ ಮತ್ತು ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಇಂದು ಅದೇ ಸಾಗರ್ ಮತ್ತು ಆತನ ಗ್ಯಾಂಗ್ ನಿಂದ ಬರ್ಬರ ಕೊಲೆ ನಡೆದಿದೆ. ಕೊಲೆಯಾದ ಅಭಿಷೇಕ್ ಮುಂಜಾನೆ ಜಿಮ್​ಗೆ ಹೋಗಲು ಮನೆಯಿಂದ ಹೊರ ಬಂದಿದ್ದ. ಮೊದಲು ಪಲ್ಸರ್ ಬೈಕ್ ನಿಂದ ಡಿಕ್ಕಿ ಹೊಡೆಸಿ ಬಳಿಕ ಅಟ್ಟಾಡಿಸಿಕೊಂಡು ಸಾಗರ್ ಮತ್ತು ಗ್ಯಾಂಗ್ ಅಭಿಷೇಕ್​ನನ್ನು ಕೊಲೆ ಮಾಡಿದ್ದಾರೆ. ನೂರಾರು ಜನರ ನಡುವೆ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ, 6 ಜನರ ಬಂಧನ
ಇನ್ನು ಮತ್ತೊಂದೆಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೆದ್ದಲಹಳ್ಳಿ ಬಳಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು 6 ಜನರನ್ನು ಬಂಧಿಸಿದ್ದಾರೆ. ಫಯಾಜ್ ಖಾನ್, ಇಮ್ತಿಯಾಜ್ ಅಹ್ಮದ್, ರಾಮಯ್ಯ, ಗಂಗರಾಜು ಸೇರಿದಂತೆ 6 ಜನರನ್ನು ಬಂಧಿಸಿದ್ದು ಬಂಧಿತರಿಂದ 20 ಸಾವಿರ ರೂ. ಜಪ್ತಿ ಮಾಡಲಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಧದ ಮರ ಕಳ್ಳತನಕ್ಕೆ ಬಂದಿದ್ದ ಖದೀಮರು ಎದ್ನೋ ಬಿದ್ನೋ ಅಂತ ಓಡುದ್ರು
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಿಡಬ್ಲ್ಯೂಡಿ ಕ್ವಾಟ್ರಾಸ್ಗೆ ನುಗ್ಗಿದ್ದ ಖದೀಮರು ಬಂದ ಕೆಲಸ ಅರ್ಧಕ್ಕೆ ಬಿಟ್ಟು ಓಡಿ ಹೋಗಿದ್ದಾರೆ. ಗಂಧದ ಮರಗಳ ಕಳುವಿಗೆ ಯತ್ನಿಸುತ್ತಿದ್ದಾಗ ಮನೆಯವರು ಬಂದ ಕೂಡಲೇ ಅರ್ಧದಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪಿಡಬ್ಲ್ಯೂಡಿ ಕ್ವಾಟ್ರಾಸ್ ಸರ್ಕಾರಿ ನಿವಾಸದ ಅಂಗಳದಲ್ಲೇ 3 ಗಂಧದ ಮರಗಳು ಬೆಳೆದು ನಿಂತಿವೆ. 5 ಜನರ ದುಷ್ಕರ್ಮಿಗಳ ತಂಡ ಒಂದು ಮರವನ್ನ ಕಡಿದು ಉರುಳಿಸಿತ್ತು. ಮರ ಕಡಿಯುವ ಶಬ್ಧಕ್ಕೆ ಎಚ್ಚರಗೊಂಡ ಮನೆಯವರು ಆಚೆ ಬಂದು ನೋಡಿದಾಗ ದುಷ್ಕರ್ಮಿಗಳು ಕಡಿದ ಮರವನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೂಟೆಕಟ್ಟಿ ಕಾಲುವೆಗೆ ಎಸೆದ ಕೊಲೆಗಾರ, ರಾಜ ಕಾಲುವೆಯಲ್ಲಿ ಚೀಲದೊಳಗೆ ಶವ ಪತ್ತೆ

Published On - 8:18 am, Thu, 4 November 21