ಕರಾವಳಿಯಲ್ಲಿ ದೀಪಾವಳಿ ಸಂಭ್ರಮ: ಜಾತಿ, ಧರ್ಮ ಬೇಧ ಮರೆತು ಖಾಸಗಿ ಕಾಲೇಜು ವಿದ್ಯಾರ್ಥಿನಿಯರಿಂದ ಹಬ್ಬ ಆಚರಣೆ
ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಕಡಲನಗರಿ ಮಂಗಳೂರಿನ ಹೊರವಲಯದ ಖಾಸಗಿ ಕಾಲೇಜು ವಿದ್ಯಾರ್ಥಿನಿಯರು ತುಂಬ ಡಿಫರೆಂಟ್ ಆಗಿ ದೀಪಾವಳಿ ಹಬ್ಬವನ್ನು ಆಚರಿಸಿದ್ರು. ರಂಗೋಲಿ ಹಾಕಿ, ದೀಪ ಬೆಳಗಿ ಪಟಾಕಿ ಹಚ್ಚಿ ಸಂಭ್ರಮಿಸಿದ್ರು.
ಮಂಗಳೂರು: ಮಂಗಳೂರಿನ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿನ್ನೆ ರಾತ್ರಿಯಿಂದ್ಲೇ ದೀಪದ ಹಬ್ಬ ಆರಂಭವಾಗಿದೆ. ವಿದ್ಯಾರ್ಥಿಗಳು ಡಿಫರೆಂಟ್ ಆಗಿ ದೀಪಗಳ ಹಬ್ಬ ಆಚರಿಸುತ್ತಿದ್ದಾರೆ. ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಮನೆಯಲ್ಲಿ ಹಬ್ಬ ಆಚರಿಸೋದು ಕಾಮನ್. ಆದ್ರೆ ಕಾಲೇಜಿನಲ್ಲಿ ಜಾತಿ ಬೇಧ, ಧರ್ಮ ಬೇಧ ಮರೆತು ಹಬ್ಬವನ್ನು ಅದ್ಧೂರಿಯಾಗಿ ವಿದ್ಯಾರ್ಥಿಗಳು ಆಚರಿಸಿದ್ರು. ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದ ಜೊತೆಗೇ ಒಳಾಂಗಣದಲ್ಲಿ, ಯಾವ ಕಡೆ ನೋಡಿದ್ರು ಬೆಳಕಿನ ಚಿತ್ತಾರ ಮೂಡಿಸುವ ಹೂವು, ರಂಗೋಲಿಗಳ ಮಧ್ಯೆ ದೀಪಗಳು ತುಂಬಿದ್ದವು.
ಕರುನಾಡಿನಲ್ಲಿ ಕಲಿಯುತ್ತಿರುವ ದೇಶ, ವಿದೇಶಗಳಿಂದ ಬಂದ ವಿದ್ಯಾರ್ಥಿಗಳು ಬೆಳಕಿನ ಹಬ್ಬವನ್ನ ಎಂಜಾಯ್ ಮಾಡಿದ್ರು. ಇನ್ನು ಹಬ್ಬಕ್ಕೆ ಊರಿಗೆ ಹೋಗದಿರುವ ವಿದ್ಯಾರ್ಥಿಗಳ ಪಾಲಿನ ದೀಪಾವಳಿ ಕಾಲೇಜು ಕ್ಯಾಂಪಸ್ನಲ್ಲಿಯೇ ಅಡ್ವಾನ್ಸ್ ಆಗಿ ಮುಗಿಯಿತು. ಕಾಲೇಜು ಕ್ಯಾಂಪಸ್ ಪೂರ್ತಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಈ ಮಧ್ಯೆ ಫ್ಯಾಶನ್ ಶೋ ಕೂಡ ನಡೆಯಿತು. ವಿದ್ಯಾರ್ಥಿನಿಯರ ನೃತ್ಯ ನೋಡುಗರ ಗಮನ ಸೆಳೆಯಿತು. ಬಳಿಕ ಒಂದಿಷ್ಟು ಪಟಾಕಿ ಸಿಡಿಸಿ ವಿದ್ಯಾರ್ಥಿಗಳು ಸಂಭ್ರಮಪಟ್ಟರು. ಮನೆಗೆ ಹೋಗುವುದಕ್ಕೆ ಸಾಧ್ಯವಾಗದೇ ಇದ್ರೂ ಕಾಲೇಜ್‌ನಲ್ಲೇ ದೀಪಾವಳಿ ಆಚರಿಸುವ ಅವಕಾಶ ಸಿಕ್ಕಿದಕ್ಕೆ ವಿದ್ಯಾರ್ಥಿನಿಯರು ಸಿಕ್ಕಾಪಟ್ಟೆ ಖುಷಿಪಟ್ಟರು.
ಒಟ್ನಲ್ಲಿ ಕೊರೊನಾ ಬಳಿಕ ಕರಾವಳಿಯಲ್ಲಿ ದೀಪಾವಳಿ ಸಂಭ್ರಮಕ್ಕೆ ವಿದ್ಯಾರ್ಥಿಗಳು ಸಾಕ್ಷಿಯಾದರು. ಮುಂದೆ ಯಾವುದೇ ವಿಘ್ನಗಳು ಬಾರದೇ ಇರಲಿ ಅಂತಾ ವಿದ್ಯಾರ್ಥಿಗಳು ದೇವರ ಬಳಿ ಪ್ರಾರ್ಥಿಸಿಕೊಂಡ್ರು.
ಲೇಖನ: ಪೃಥ್ವಿರಾಜ್, ಟಿವಿ9 ಮಂಗಳೂರು
ಇದನ್ನೂ ಓದಿ: Deepavali 2021: ಹಬ್ಬದ ಸಮಯದಲ್ಲಿ ಮಧುಮೇಹಿಗಳು ಅನುಸರಿಸಬೇಕಾದ ಮಾರ್ಗಗಳು