Deepavali 2021: ಹಬ್ಬದ ಸಮಯದಲ್ಲಿ ಮಧುಮೇಹಿಗಳು ಅನುಸರಿಸಬೇಕಾದ ಮಾರ್ಗಗಳು
Diabetes: ಹಬ್ಬದ ಸಮಯದಲ್ಲಿ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನೀವು ಹೇಗೆ ನಿಯಂತ್ರಿಸಬಹುದು ಮತ್ತು ಮಧುಮೇಹ ಸ್ಥಿತಿಯಲ್ಲಿಯೂ ಸಹ ಆರೋಗ್ಯವಾಗಿರುವುದು ಹೇಗೆ ಎಂಬುದರ ಕುರಿತಾಗಿ ಕೆಲವು ಟಿಪ್ಸ್ಗಳಿವೆ. ಇವುಗಳನ್ನು ನೆನಪಿನಲ್ಲಿಡಿ.
ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಆಹಾರ ಕ್ರಮ ಬಹಳ ಮುಖ್ಯ. ನೀವು ಸೇವಿಸುವ ಆಹಾರದ ಮೇಲೆ ನಿಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಹಾಗಿರುವಾಗ ಹಬ್ಬದ ಸಮಯದಲ್ಲಿ ನಿಮ್ಮ ಆಹಾರ ವ್ಯವಸ್ಥೆಯ ಬಗ್ಗೆ ಹೆಚ್ಚು ಗಮನವಿರಲಿ. ಅದರಲ್ಲಿಯೂ ಮುಖ್ಯವಾಗಿ ಮಧುಮೇಹಿಗಳು ಆಹಾರ ಕ್ರಮದ ಬಗ್ಗೆ ನಿಗಾವಹಿಸಲೇಬೇಕು. ಹಬ್ಬದ ಸಮಯದಲ್ಲಿ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನೀವು ಹೇಗೆ ನಿಯಂತ್ರಿಸಬಹುದು ಮತ್ತು ಮಧುಮೇಹ ಸ್ಥಿತಿಯಲ್ಲಿಯೂ ಸಹ ಆರೋಗ್ಯವಾಗಿರುವುದು ಹೇಗೆ ಎಂಬುದರ ಕುರಿತಾಗಿ ಕೆಲವು ಟಿಪ್ಸ್ಗಳಿವೆ. ಇವುಗಳನ್ನು ನೆನಪಿನಲ್ಲಿಡಿ.
ಸರಿಯಾದ ಆಹಾರ ಸೇವನೆ ಜೊತೆಗೆ ವ್ಯಾಯಾಮ ನೀವು ಮಧುಮೇಹದಿಂದ ಬಳಲುತ್ತಿದ್ದರೆ ಆಹಾರದಲ್ಲಿ ಆಯ್ಕೆ ತುಂಬಾ ಮುಖ್ಯ. 2 ರಿಂದ 3 ಗಂಟೆಗಳಿಗೊಮ್ಮೆ ಆಗಾಗ ಹೊಟ್ಟೆಗೆ ಏನನ್ನಾದರೂ ಹಾಕುತ್ತಾ ಇರಿ. ಸರಿಯಾದ ಸಮಯಕ್ಕೆ ಊಟ ಮಾಡಿ ಮತ್ತು ತಿಂಡಿ ತಿನ್ನುವುದು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಸಾಮಾನ್ಯವಾಗು ಗೋಧಿ, ಕಂದು ಅಕ್ಕಿ, ಓಟ್ಸ್ ಈ ರೀತಿಯ ಆಹಾರಗಳನ್ನು ಸೇವಿಸಿ. ಬಿಳಿ ಬ್ರಡ್, ನೂಡಲ್ಸ್, ಬಿಳಿ ಅಕ್ಕಿ ಮುಂತಾದ ಆಹಾರ ಪದಾರ್ಥಗಳು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ನಿಯಮಿತವಾದ ದೈಹಿಕ ವ್ಯಾಯಾಮ ನಿಮ್ಮದಾಗಿರಲಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನಿಯಮಿತವಾದ ವ್ಯಾಯಾಮ ಅತಿ ಅವಶ್ಯಕ.
ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಮಧುಮೇಹವು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಧುಮೇಹದ ಸಾಮಾನ್ಯ ತೊಡಕುಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಫಾಸ್ಟ್ ಫುಡ್, ಬರ್ಗರ್, ಪಿಜ್ಜಾ, ಕರಿದ ತಿಂಡಿಗಳು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ ಮಧುಮೇಹ ಹೊಂದಿರುವವರು ತಮ್ಮ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಜೊತೆಗೆ ಆಹಾರದಲ್ಲಿ ಗಮನವಹಿಸುವುದು ಉತ್ತಮ. ನಿಯಮಿತವಾಗಿ ವೈದ್ಯರಲ್ಲಿ ಆರೋಗ್ಯದ ಬಗ್ಗೆ ಪರೀಕ್ಷಿಸಿಕೊಳ್ಳುವುದು ಉತ್ತಮ.
ಔಷಧಗಳನ್ನು ಸರಿಯಾಗಿ ಸೇವಿಸಿ ಉತ್ತಮ ಮಧುಮೇಹ ನಿಯಂತ್ರಣವನ್ನು ಹೊಂದಲು ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು. ಜೊತೆಗೆ ಉತ್ತಮ ಆಹಾರ ಪದ್ಧತಿ ನಿಮ್ಮದಾಗಿರಬೇಕು. ನೀವು ಸೇವಿಸುವ ಆಹಾರ ವ್ಯವಸ್ಥೆ ಆರೋಗ್ಯವನ್ನು ಸುಧಾರಿಸಲು ಮತ್ತು ಸಮಸ್ಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
Health Tips: ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು
ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಸೂಕ್ತವಾದ ಮಧ್ಯಾಹ್ನದ ಊಟ ಯಾವುದು? ಇಲ್ಲಿದೆ ವಿವರ