Deepavali 2021: ದೀಪಾವಳಿ ಹಬ್ಬದ ಸಮಯದಲ್ಲಿ ಸಿಡಿಸುವ ಪಟಾಕಿ ಹೊಗೆಯಿಂದ ಶ್ವಾಸಕೋಶ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿದೆ 10 ಮಾರ್ಗಗಳು

Diwali 2021: ಪಟಾಕಿಗಳಿಂದ ಹೊರಸೂಸುವ ಹೊಗೆ ಮತ್ತು ಮಾಲಿನ್ಯವು ಅಸ್ತಮಾ ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಕೆಮ್ಮುವುದು, ಉಬ್ಬಸ, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆ ರೋಗಲಕ್ಷಣಗಳಿಗೆ ಕಾರಣವಾಗಬಹುದು.

Deepavali 2021: ದೀಪಾವಳಿ ಹಬ್ಬದ ಸಮಯದಲ್ಲಿ ಸಿಡಿಸುವ ಪಟಾಕಿ ಹೊಗೆಯಿಂದ ಶ್ವಾಸಕೋಶ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿದೆ 10 ಮಾರ್ಗಗಳು
ಸಂಗ್ರಹ ಚಿತ್ರ
Follow us
| Updated By: shruti hegde

Updated on: Nov 03, 2021 | 9:14 AM

ದೀಪಾವಳಿ ಹೆಸರೇ ಸೂಚಿಸುವಂತೆ ದೀಪಗಳ ಹಬ್ಬ. ಭಾರತೀಯರು ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಇದೂ ಒಂದು. ಹಬ್ಬದ ಸಂಭ್ರಮದಲ್ಲಿ ಸಿಡಿಸುವ ಪಟಾಕಿ ಪರಿಸರ ಮಾಲಿನ್ಯದ ಜೊತೆಗೆ ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದೆ. ಪಟಾಕಿಯಿಂದ ಹೊರ ಬರುವ ವಿಷಕಾರಿ ಹೊಗೆಯಿಂದ ಆಸ್ತಮಾ, ಉಸಿರಾಟದ ತೊಂದರೆಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟಾಗಬಹುದು. ಅದರಲ್ಲಿಯೂ ಪಟಾಕಿ ಹೊಗೆಯು ದೀರ್ಘಕಾಲದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ. ಹಾಗಿರುವಾಗ ಪಟಾಕಿಗಳಿಂದ ದೂರವಿರಿ ಜೊತೆಗೆ ನೀವು ಅನುಸರಿಸಬೇಕಾದ ಕೆಲವು ಮಾರ್ಗಗಳು ಈ ಕೆಳಗಿನಂತಿದೆ ತಿಳಿಯಿರಿ.

ಕೊವಿಡ್ 19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡವರಲ್ಲಿ ವಿಷಕಾರಿ ಹೊಗೆಯಿಂದ ಉಸಿರಾಟ ಸಂಬಂಧಿತ ಸಮಸ್ಯೆಗಳು ಅಪಾಯವನ್ನುಂಟು ಮಾಡಬಹುದು. ಹಾಗಿರುವಾಗ ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಕಾರ್ಡಿಯೋವಾಸ್ಕುಲರ್ ರಿಸರ್ಚ್ ಜರ್ನಲ್​ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಕೊವಿಡ್ 19 ಲಕ್ಷಣಗಳ ಅಪಾಯಗಳು ಹೆಚ್ಚಬಹುದು ಎಂಬುದು ತಿಳಿದು ಬಂದಿದೆ.

ಪಟಾಕಿಗಳಿಂದ ಹೊರಸೂಸುವ ಹೊಗೆ ಮತ್ತು ಮಾಲಿನ್ಯವು ಅಸ್ತಮಾ ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಕೆಮ್ಮುವುದು, ಉಬ್ಬಸ, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆ ರೋಗಲಕ್ಷಣಗಳಿಗೆ ಕಾರಣವಾಗಬಹುದು. ವಾಯು ಮಾಲಿನ್ಯದಿಂದ ನಿಮ್ಮ ಶ್ವಾಸಕೋಶವನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತಾಗಿ ಡಾ. ಫರಾ ಹೇಳಿಕೆಯನ್ನು ಇಂಡಿಯಾ ಡಾಟ್ ಕಾಮ್​ನಲ್ಲಿ ಉಲ್ಲೇಖಿಸಲಾಗಿದೆ.

ದೀಪಾವಳಿ ಸಮಯದಲ್ಲಿ ನಿಮ್ಮ ಆರೋಗ್ಯ ರಕ್ಷಣೆಗೆ ನೀವು ಪಾಲಿಸಬೇಕಾದ ಮಾರ್ಗಗಳು ಇಲ್ಲಿವೆ ಮೇಣದ ಬತ್ತಿಗಳು ಮತ್ತು ದೀಪಗಳನ್ನು ಮನೆಯ ಒಳಗೆ ಹಚ್ಚುವುದನ್ನು ಆದಷ್ಟು ತಪ್ಪಿಸಿ. ಇದು ಮನೆಯೊಳಗೆ ಹೊಗೆಯನ್ನು ಹೊರ ಸೂಸುವುದರಿಂದ ಮಾಲಿನ್ಯದಿಂದ ಒತ್ತಡ ಉಂಟಾಗುತ್ತದೆ. ಉಸಿರಾಟ ಸಂಬಂಧಿತ ಸಮಸ್ಯೆ ಇರುವವರಿಗೆ ಉಸಿರಾಟಕ್ಕೆ ತೊಂದರೆ ಉಂಟಾಗಬಹುದು.

ಜನರು ಪಟಾಕಿ ಹಚ್ಚುತ್ತಿರುವ ಸ್ಥಳಗಳಲ್ಲಿ ನಿಲ್ಲಬೇಡಿ. ರಾಸಾಯನಿಕ ಹಾನಿಕಾರಕ ಹೊಗೆ ಪಟಾಕಿಯಿಂದ ಹೊರಬರುತ್ತದೆ.

ಹೊರಗೆ ಹೋಗುವಾಗ ಫೇಸ್ ಮಾಸ್ಕ್ ಧರಿಸಿ. ವಿಷಕಾರಿ ಹೊಗೆ ನಿಮ್ಮ ದೇಹಕ್ಕೆ ಪ್ರವೇಶಿಸದಂತೆ ನೋಡಿಕೊಳ್ಳಿ.

ಪಟಾಕಿ ಸಿಡಿಸುತ್ತಿದ್ದರೆ ಆದಷ್ಟು ಮನೆಯೊಳಗೇ ಇರಲು ಪ್ರಯತ್ನಿಸಿ.

ಮೊದಲಿನಿಂದಲೇ ಉಸಿರಾಟದ ಸಮಸ್ಯೆ ಇರುವವರು ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ ಮತ್ತು ಆಹಾರದ ಬಗ್ಗೆಯೂ ಹೆಚ್ಚು ಲಕ್ಷ್ಯವಿರಲಿ.

ನೀವು ಅಸ್ತಮಾ ಅಥವಾ ಉಸಿರಾಟ ಕಾಯಿಲೆಯಿಂದ ಬಳಲುತ್ತಿದ್ದರೆ ಯಾವಾಗಲೂ ಇನ್ಹೇಲರ್​ಅನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳಿ.

ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳಿರುವ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ. ಆರೋಗ್ಯವನ್ನು ಸುಧಾರಿಸಿಕೊಳ್ಳಿ.

ಹೈಪರ್ ಆಸಿಡಿಟಿಯನ್ನು ತಡೆಯಲು ಮತ್ತು ಹೈಡ್ರೇಟ್ ಆಗಿರಲು ಸಾಕಷ್ಟು ನೀರು ಕುಡಿಯಿರಿ

ನಿರಂತರ ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದಿರಿ.

ಈ ಬಾರಿಯ ದೀಪಾವಳಿಯಂದು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಹಬ್ಬವನ್ನು ಆಚರಿಸೋಣ. ಪಟಾಕಿಯನ್ನು ಬಿಟ್ಟು ಮನೆಯಲ್ಲಿ ದೀಪಗಳನ್ನು ಬೆಳಗಿ ಸಂತೋಷದಿಂದ ಹಬ್ಬ ನಡೆಸೋಣ. ಇದು ನಿಮ್ಮ ಆರೋಗ್ಯದ ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Deepavali 2021: ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಮರಳು ಕಲೆಯಲ್ಲಿ ರಂಗೋಲಿ ಚಿತ್ರಿಸಿದ ವಿದ್ಯಾರ್ಥಿಗಳು; ಫೋಟೊ ನೋಡಿ

WhatsApp Pay Cashback: ದೀಪಾವಳಿಗೆ ಆಫರ್; ವಾಟ್ಸಾಪ್ ಪೇ ಮೂಲಕ ಪಾವತಿಗೆ ರೂ. 51 ಕ್ಯಾಶ್​ಬ್ಯಾಕ್