ಶವರ್​ನಲ್ಲಿ ಸ್ನಾನ ಮಾಡುವ ಅಭ್ಯಾಸ ಇದೆಯೇ? ಬಿಸಿ ಮತ್ತು ತಣ್ಣೀರಿನಲ್ಲಿ ಯಾವುದು ಉತ್ತಮ ತಿಳಿಯಿರಿ

ಉತ್ತಮ ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಇದು ನೀಡುತ್ತದೆ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಪೂರೈಕೆ ಸರಾಗವಾಗಿ ಆಗುತ್ತದೆ. ಸುಂದರವಾದ ಚರ್ಮ ಹೊಂದಲು ಸಹಕಾರಿಯಾಗುತ್ತದೆ. ಹಲವು ಅಧ್ಯಯನಗಳ ನಂತರ ವಿಜ್ಞಾನಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶವರ್​ನಲ್ಲಿ ಸ್ನಾನ ಮಾಡುವ ಅಭ್ಯಾಸ ಇದೆಯೇ? ಬಿಸಿ ಮತ್ತು ತಣ್ಣೀರಿನಲ್ಲಿ ಯಾವುದು ಉತ್ತಮ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shruti hegde

Updated on: Nov 02, 2021 | 9:19 AM

ಶವರ್​ನಲ್ಲಿ ಸ್ನಾನ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಅದರಲ್ಲೂ ಶವರ್​ನಲ್ಲಿ ಬಿಸಿ ನೀರಿಗೆ ಬದಲಾಗಿ ತಣ್ಣೀರಿನಲ್ಲಿ ಸ್ನಾನ ಮಾಡುವವರು ಇರುತ್ತಾರೆ. ಹೀಗೆ ಸ್ನಾನ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಉತ್ತಮ ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಇದು ನೀಡುತ್ತದೆ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಪೂರೈಕೆ ಸರಾಗವಾಗಿ ಆಗುತ್ತದೆ. ಸುಂದರವಾದ ಚರ್ಮ ಹೊಂದಲು ಸಹಕಾರಿಯಾಗುತ್ತದೆ. ಹಲವು ಅಧ್ಯಯನಗಳ ನಂತರ ವಿಜ್ಞಾನಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆರಂಭದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೂ, ಕೊನೆಯಲ್ಲಿ 30 ಸೆಕೆಂಡುಗಳ ಕಾಲ ತಣ್ಣೀರು ನೆತ್ತಿಯ ಮೇಲೆ ಸುರಿದುಕೊಳ್ಳುವುದರಿಂದ ಆರೋಗ್ಯ ಪ್ರಯೋಜನಗಳು ಹೆಚ್ಚಾಗುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ ದೇಹವು ತಂಪಾಗಿರುವಾಗ, ಹೆಚ್ಚಿನ ಬಿಳಿ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ ಎಂದು ಅಧ್ಯಯನಗಳು ತಿಳಿಸಿವೆ. ಇದರಿಂದ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯೂ ಹೆಚ್ಚುತ್ತದೆ. ಬಿಸಿನೀರಿನಿಂದ ಸ್ನಾನ ಮಾಡಿದ ನಂತರ ಕೊನೆಯಲ್ಲಿ 30 ಸೆಕೆಂಡ್ ತಣ್ಣೀರಿನಿಂದ ಸ್ನಾನ ಮಾಡಿದರೆ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ.

ಖಿನ್ನತೆಯನ್ನು ನಿವಾರಿಸಬಹುದು ತಣ್ಣೀರು ಚರ್ಮದಲ್ಲಿ ನರ ಗ್ರಾಹಕಗಳನ್ನು ಉತ್ತೇಜಿಸುತ್ತದೆ. ಆ ಮೂಲಕ ಮೆದುಳಿನ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಇದು ಖಿನ್ನತೆಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವೈದ್ಯರಾದ ಮಿಚೆಲ್ ಗ್ರೀನ್ ಹೇಳಿದ್ದಾರೆ.

ದಿನವಿಡಿ ಉತ್ಸಾಹದಿಂದ ಇರಲು ಸಹಕಾರಿ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದೇಹವು ಹೆಚ್ಚು ಚೈತನ್ಯದಿಂದ ಕೂಡಿರುತ್ತದೆ. ಇದು ನರಮಂಡಲವನ್ನು ಪ್ರಚೋದಿಸುತ್ತದೆ. ಪರಿಣಾಮವಾಗಿ ವ್ಯಕ್ತಿಯು ದಿನವಿಡೀ ಹರ್ಷಚಿತ್ತದಿಂದ ಮತ್ತು ಉತ್ಸಾಹದಿಂದ ಇರುತ್ತಾನೆ.

ಕೂದಲು ಆರೋಗ್ಯಕರವಾಗಿರುತ್ತದೆ ಕೂದಲ ರಕ್ಷಣೆಗೆ ಬಿಸಿ ನೀರಿಗಿಂತ ತಣ್ಣೀರು ಉತ್ತಮ ಎಂದು ಡಾ. ದೇಬ್ರಾ ಜಾಲಿಮಾನ್ ಹೇಳಿದ್ದಾರೆ. ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಕೂದಲಿನ ಹೊಳಪು, ನೈಸರ್ಗಿಕ ಕಾಂತಿ ಕಡಿಮೆಯಾಗುತ್ತದೆ. ಇದರಿಂದ ಕೂದಲು ಉದುರುವ ಅಪಾಯವಿದೆ. ಅದೇ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಕೂದಲು ಹೊಳೆಯುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಒಣ ಚರ್ಮದಿಂದ ಪರಿಹಾರ ಕೆಲವರಿಗೆ ತೆಳು, ಬಿರುಕು ಬಿಟ್ಟ ಚರ್ಮವಿರುತ್ತದೆ. ಇಂತಹ ವಿಷಯಗಳಿಂದ ಪರಿಹಾರ ಪಡೆಯಲು ವಿಶೇಷವಾಗಿ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ನಿಲ್ಲಿಸಬೇಕು. ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದರಿಂದ ತ್ವಚೆ ಒಣಗುವುದಿಲ್ಲ ಮತ್ತು ಮುಖವು ಕಾಂತಿಯುತವಾಗಿ ಕಾಣುತ್ತದೆ. ಇದಲ್ಲದೆ, ಇದು ಮುಖದ ಮೇಲೆ ಉರಿಯೂತ, ಗುಳ್ಳೆ ಕಡಿಮೆ ಮಾಡುತ್ತದೆ.

ವ್ಯಾಯಾಮದ ನಂತರ ತಣ್ಣೀರು ಸ್ನಾನ ಶ್ರಮದಾಯಕ ವ್ಯಾಯಾಮದ ನಂತರ ಸ್ನಾಯುಗಳು ದಣಿದಿರುತ್ತದೆ. ತಣ್ಣೀರಿನಿಂದ ಸ್ನಾನ ಮಾಡುವುದು ಇಂತಹ ಸ್ಥಿತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದರಿಂದ ಆಯಾಸ ಕಡಿಮೆಯಾಗುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.

ತಣ್ಣೀರಿನಿಂದ ಸ್ನಾನ ಮಾಡಿದರೆ ಅಪಾಯ ಕೂಡ ಇದೆ! ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ ಇರುವವರು ತಣ್ಣೀರಿನಿಂದ ಸ್ನಾನ ಮಾಡುವ ಮುನ್ನ ಎಚ್ಚರ ವಹಿಸಬೇಕು ಎನ್ನುತ್ತಾರೆ ತಜ್ಞರು. ಬಿಸಿ ನೀರಿನಿಂದ ಸ್ನಾನ ಮಾಡಿ ಕೊನೆಗೆ 30 ಸೆಕೆಂಡ್ ತಣ್ಣೀರಿನಿಂದ ಸ್ನಾನ ಮಾಡಿದರೆ ಅಪಾಯಕಾರಿ ಎದುರಾಗಬಹುದು. ಹೃದ್ರೋಗ ಹೊಂದಿರುವ ಜನರು 10 C ಗಿಂತ ಕಡಿಮೆ ಇರುವ ನೀರಿನಲ್ಲಿ ಸ್ನಾನ ಮಾಡಬಾರದು ಮತ್ತು ಹಾಗೆ ಮಾಡಲು ಬಯಸಿದರೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: Health Tips: ದಾಲ್ಚಿನ್ನಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯಕ

ಕಡಿಮೆ ನೀರು ಕುಡಿಯುತ್ತಿದ್ದೀರಾ? ಆರೋಗ್ಯದಲ್ಲಿನ ಈ ಬದಲಾವಣೆ ಬಗ್ಗೆ ಇರಲಿ ಎಚ್ಚರ

ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ