Coriander leaves: ಅಡುಗೆಯಲ್ಲಿ ರುಚಿ ಹೆಚ್ಚಿಸಲು ಮಾತ್ರವಲ್ಲ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೂ ಉತ್ತಮ

ಕೊತ್ತಂಬರಿ ಸೊಪ್ಪು ಅಡುಗೆಯಲ್ಲಿ ರುಚಿ ಹೆಚ್ಚಿಸುವುದೊಂದೇ ಅಲ್ಲ. ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಿರುವಾಗ ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ.

Coriander leaves: ಅಡುಗೆಯಲ್ಲಿ ರುಚಿ ಹೆಚ್ಚಿಸಲು ಮಾತ್ರವಲ್ಲ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೂ ಉತ್ತಮ
ಕೊತ್ತಂಬರಿ ಸೊಪ್ಪು
Follow us
TV9 Web
| Updated By: shruti hegde

Updated on: Nov 02, 2021 | 9:06 AM

ಭಾರತೀಯ ಆಹಾರ ವ್ಯವಸ್ಥೆಯಲ್ಲಿ ಹೆಚ್ಚು ರುಚಿಯೂ ಇದೆ, ಆರೋಗ್ಯಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತದೆ. ಅಂಥಹ ಆಹಾರದಲ್ಲಿ ಬಳಸುವ ಕೆಲವು ಪದಾರ್ಥಗಳು ನಿಮ್ಮ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಜೀರಿಗೆ, ಅರಿಶಿಣ, ಲವಂಗ, ದಾಲ್ಚಿನ್ನಿ ಸೇರಿದಂತೆ ಬೇವಿನ ಎಲೆ, ಒಗ್ಗರಣೆ ಎಲೆ ಮತ್ತು ಕೊತ್ತಂಬರಿ ಸೊಪ್ಪು ಇಂತಹ ಪದಾರ್ಥಗಳೂ ಸಹ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಿರುವಾಗ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿಯೋಣ.

ಕೊತ್ತಂಬರಿ ಸೊಪ್ಪು ಅಡುಗೆಯಲ್ಲಿ ರುಚಿ ಹೆಚ್ಚಿಸುವುದೊಂದೇ ಅಲ್ಲ. ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಮೆಗ್ನೀಶಿಯಂ, ವಿಟಮಿನ್ ಎ, ಬಿ, ಸಿ, ಕೆ, ರಂಜಕ, ಪೊಟ್ಯಾಷಿಯಂ, ಸೋಡಿಯಂ ಮತ್ತು ಕ್ಯಾಲ್ಸಿಯಂ ಸಮೃದ್ಧ ಮೂಲವಾಗಿದೆ.

ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಹೃದ್ರೋಗ ಹೆಚ್ಚಾಗಿ ಅಧಿಕ ರಕ್ತದೊತ್ತಡ ಅಥವಾ ಅಧಿಕ ಕೊಲೆಸ್ಟ್ರಾಲ್ ಮಟ್ಟದಿಂದ ಕಾಣಿಸಿಕೊಳ್ಳುವ ಸಮಸ್ಯೆ. ಕೊತ್ತಂಬರಿ ಸೊಪ್ಪು ಸೇವನೆಯು ನಿಮ್ಮ ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ರಕ್ತದೊತ್ತಡ ಹೆಚ್ಚಾಗಲು ಕಾರಣವಾಗಿರುವ ಸೋಡಿಯಂ ಪ್ರಮಾಣವನ್ನು ದೇಹದಲ್ಲಿ ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ನಮ್ಮಲ್ಲಿ ರೋಗಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಮುಖ್ಯ. ಕೊತ್ತಂಬರಿಯಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಸ್​ಗಲ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸಿ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕ ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಷ್ಟದ ಸಂಗತಿ. ಆಹಾರದಲ್ಲಿನ ಬದಲಾವಣೆ, ಜೀವನ ಶೈಲಿಯಲ್ಲಿನ ಬದಲಾವಣೆಯಿಂದ ಮಾತ್ರ ಸಾಧ್ಯ. ಕೊತ್ತಂಬರಿಯನ್ನು ಆಹಾರದಲ್ಲಿ ಅಳವಡಿಕೆ ಮಾಡಿಕೊಳ್ಳುವ ಮೂಲಕ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದಾಗಿದೆ.

ಉತ್ತಮ ದೃಷ್ಟಿ ಕೊತ್ತಂಬರಿ ಎಲೆಗಳು ವಿಟಮಿನ್ ಎ ಯ ಸಮೃದ್ದ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕಗಳೊಂದಿಗೆ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಅಸ್ವಸ್ಥತೆ ಮತ್ತು ದೃಷ್ಟಿ ಅಸ್ವಸ್ಥತೆಯಿಂದ ಬಳಲುತ್ತಿರುವವರ ಆರೋಗ್ಯ ಸುಧಾರಣೆಗೆ ಕೊತ್ತಂಬರಿ ಸೇವನೆ ಒಳ್ಳೆಯದು.

ಕರುಳು ಮತ್ತು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ ಕೊತ್ತಂಬರಿ ಸೊಪ್ಪು ಅಥವಾ ಬೀಜಗಳಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯ ಮತ್ತು ಕಿಬ್ಬೊಟ್ಟೆಯ ಅಸ್ವಸ್ಥತೆಯಿಂದ ಪರಿಹಾರ ಕಂಡುಕೊಳ್ಳಲು ಕೊತ್ತಂಬರಿ ಸೇವನೆ ಒಳ್ಳೆಯದು.

ಇದನ್ನೂ ಓದಿ:

Health Benefits: ಕೊತ್ತಂಬರಿ ಕಾಳಿನ ವಿಶೇಷತೆಯ ಬಗ್ಗೆ ನೀವು ತಿಳಿದರೆ, ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳುವಿರಿ

Health Tips: ಕೊತ್ತಂಬರಿ ನೆನೆಸಿದ ನೀರು ಕುಡಿದ್ರೆ ಸಿಗುವ ಆರೋಗ್ಯಕರ ಪ್ರಯೋಜನ ಒಂದಾ ಎರಡಾ..!