Health Benefits: ಕೊತ್ತಂಬರಿ ಕಾಳಿನ ವಿಶೇಷತೆಯ ಬಗ್ಗೆ ನೀವು ತಿಳಿದರೆ, ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳುವಿರಿ
ಅಡುಗೆ ಮನೆಯಲ್ಲಿರುವ ಕೆಲವು ಮಸಾಲೆ ಪದಾರ್ಥಗಳು ನಮ್ಮ ದೇಹದಲ್ಲಿನ ನಾನಾ ಕಾಯಿಲೆಗಳನ್ನು ದೂರ ಮಾಡುತ್ತದೆ. ಕೊತ್ತಂಬರಿ ಮಸಾಲಾ ಪದಾರ್ಥಗಳಲ್ಲಿ ಒಂದು. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹೀಗಾಗಿ ಕೊತ್ತಂಬರಿ ಕಾಳಿನ ವಿಶೇಷತೆ ಏನು ಎನ್ನುವುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಪ್ರತಿ ಸಣ್ಣ ಸಣ್ಣ ಕಾಯಿಲೆಗೂ ಔಷಧಿ ತೆಗೆದುಕೊಳ್ಳುವುದು ಅಥವಾ ವೈದ್ಯರ ಬಳಿ ಹೋಗುವುದು ಕೆಲವು ಬಾರಿ ಕಷ್ಟವಾಗುತ್ತದೆ. ಅದರಲ್ಲೂ ಆಗಾಗ ಔಷಧವನ್ನು ತೆಗೆದುಕೊಳ್ಳುವ ಅಭ್ಯಾಸ ನಮ್ಮನ್ನು ಅದಕ್ಕೆ ಒಗ್ಗಿಕೊಂಡಿರುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮನೆಯಲ್ಲಿಯೇ ಇರುವ ಔಷಧೀಯ ಗಿಡ ಮೂಲಿಕೆಗಳು, ಪದಾರ್ಥಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಅದರಲ್ಲೂ ಅಡುಗೆ ಮನೆಯಲ್ಲಿರುವ ಕೆಲವು ಮಸಾಲೆ ಪದಾರ್ಥಗಳು ನಮ್ಮ ದೇಹದಲ್ಲಿನ ನಾನಾ ಕಾಯಿಲೆಗಳನ್ನು ದೂರ ಮಾಡುತ್ತದೆ. ಕೊತ್ತಂಬರಿ ಮಸಾಲಾ ಪದಾರ್ಥಗಳಲ್ಲಿ ಒಂದು. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹೀಗಾಗಿ ಕೊತ್ತಂಬರಿ ಕಾಳಿನ ವಿಶೇಷತೆ ಏನು ಎನ್ನುವುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಅಜೀರ್ಣ ಸಮಸ್ಯೆಗೆ ಪರಿಹಾರ ಹೆಚ್ಚಿನ ಜನರು ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಅಜೀರ್ಣದಿಂದ ಬಳಲುತ್ತಿರುತ್ತಾರೆ. ಕೊತ್ತಂಬರಿ ಕಾಳು ಇಂತಹ ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ನೀರಿಗೆ ಕೊತ್ತಂಬರಿ ಪುಡಿ ಮತ್ತು ಉಪ್ಪು ಬೆರೆಸಿ ಸೇವಿಸಿ. ಹೀಗೆ ಪ್ರತಿದಿನ ಒಂದು ಚಮಚೆ ಸೇವಿಸುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ.
ನಿದ್ರಾಹೀನತೆಗೆ ಮುಕ್ತಿ ನಿದ್ರಾಹೀನತೆಯಿಂದ ಬಳಲುತ್ತಿರುವವರು ಕೊತ್ತಂಬರಿ ಕಷಾಯವನ್ನು ಸೇವಿಸಿ. ಕೊತ್ತಂಬರಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ನಿದ್ರೆ ಇಲ್ಲದೆ ತೊಂದರೆಗೀಡಾಗುವ ಸಮಸ್ಯೆ ದೂರವಾಗುತ್ತದೆ.
ಕೀಲು ನೋವು ನಿವಾರಕ ಕೊತ್ತಂಬರಿ, ಜೀರಿಗೆ, ಬೆಲ್ಲವನ್ನು ಒಟ್ಟಿಗೆ ಬೆರೆಸಿ, ಸಣ್ಣ ಉಂಡೆಗಳನ್ನಾಗಿ ಮಾಡಿ ಪ್ರತಿ ದಿನ ಸೇವಿಸುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ. ವಯಸ್ಸಾದವರು ಈ ಅಭ್ಯಾಸವನ್ನು ಮಾಡಿಕೊಂಡರೆ ಆಗಾಗ ಬರುವ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು.
ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಪ್ರತಿದಿನ ಗರ್ಭಿಣಿ ಮಹಿಳೆಯರು ತಮ್ಮ ಆಹಾರದಲ್ಲಿ ಕೊತ್ತಂಬರಿ ಸೇವಿಸುವುದರಿಂದ ಗರ್ಭಾಶಯಕ್ಕೆ ತುಂಬಾ ಒಳ್ಳೆಯದು,. ಅದರಲ್ಲೂ ವಿಶೇಷವಾಗಿ ಹೆರಿಗೆಯ ಸಮಯದಲ್ಲಿ ಹೆಚ್ಚು ಶಕ್ತಿ ನೀಡುತ್ತದೆ. ಮಹಿಳೆಯರ ಆರೋಗ್ಯದಲ್ಲಾಗುವ ಅನೇಕ ಬದಲಾವಣೆಗೂ ಕೊತ್ತಂಬರಿ ಸೇವಿಸುವುದು ಉತ್ತಮ.
ಮಲಬದ್ಧತೆ ಕಡಿಮೆ ಮಾಡುತ್ತದೆ ಅಜೀರ್ಣ, ಅತಿಸಾರ ಮತ್ತು ಮಲಬದ್ಧತೆಯಿಂದ ಬಳುತ್ತಿರುವವರು, ಕೊತ್ತಂಬರಿಯನ್ನು ಸೇವಿಸಿ. ತೊಳೆದ ಕೊತ್ತಂಬರಿ ಕಾಳನ್ನು ಹುರಿದು, ಉಪ್ಪಿನೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ಪುಡಿ ಮಾಡಿ. ಹೀಗೆ ಮಾಡಿಟ್ಟುಕೊಂಡ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ.
ತಲೆನೋವು ನಿವಾರಕ ಮಜ್ಜಿಗೆ ಮತ್ತು ಕೊತ್ತಂಬರಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದರ ಜತೆಗೆ ವಾಕರಿಕೆ ಬಂದಂತೆ ಆಗುವುದು, ಹೊಟ್ಟೆಯಲ್ಲಿ ಉರಿಯೂತ, ಹೊಟ್ಟೆ ನೋವು, ತಲೆನೋವು ಕಡಿಮೆಯಾಗುತ್ತದೆ.
ಕೆಮ್ಮಿಗೆ ಪರಿಹಾರ ಕೊತ್ತಂಬರಿಯನ್ನು ಅಕ್ಕಿ ತೊಳೆದ ನೀರಿನಿಂದ ಪುಡಿಮಾಡಿ ಸೇವಿಸುವುದರಿಂದ ಮಕ್ಕಳಲ್ಲಿ ಆಗಾಗ್ಗೆ ಉಂಟಾಗುವ ಕೆಮ್ಮು ಕಡಿಮೆಯಾಗುತ್ತದೆ. ಜತೆಗೆ ಆಯಾಸದಂತಹ ಸಮಸ್ಯೆಯೂ ದೂರವಾಗುತ್ತದೆ.
ಇನ್ನಿತರ ಸಮಸ್ಯೆಗಳಿಗೂ ರಾಮಬಾಣ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ರಾತ್ರಿಯಲ್ಲಿ ಕೊತ್ತಂಬರಿಯನ್ನು ಒಂದು ಲೋಟ ನೀರಿನಲ್ಲಿ ನೆನೆಸಿ. ನಂತರ ಬೆಳಿಗ್ಗೆ ಕೊತ್ತಂಬರಿಗೆ ಸಕ್ಕರೆ ಮತ್ತು ಅರಿಶಿಣ ಸೇರಿಸಿ ಕುಡಿಯಿರಿ. ಇನ್ನು ಸಕ್ಕರೆ ಕಾಯಿಲೆ ಮತ್ತು ಬಿಪಿ ಇರುವವರು ಕೊತ್ತಂಬರಿಯನ್ನು ಸೇವಿಸುವುದರಿಂದ ಬಿಪಿ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ: Health Tips: ಬೀಟ್ರೂಟ್ ಡಿಟಾಕ್ಸ್ ಜ್ಯೂಸ್; ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ
Health Tips: ನುಗ್ಗೆಕಾಯಿ ಮಾತ್ರವಲ್ಲ, ಸೊಪ್ಪಿನಲ್ಲೂ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ