ಗೂಂಡಾಗಿರಿಗೂ ಮುನ್ನ ಕೊರೊನಾ ವಾರಿಯರ್ಸ್​ಗೆ ಪುಂಡರ ಬೆದರಿಕೆ

|

Updated on: Apr 20, 2020 | 9:55 AM

ಬೆಂಗಳೂರು: ಪಾದರಾಯನಪುರದಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಭಯಾನಕ ಸಂಗತಿಯೊಂದು ಹೊರಬಿದ್ದಿದೆ. ಗಲಾಟೆಗೂ ಮುನ್ನ ಪುಂಡರು ಆಶಾ ಕಾರ್ಯಕರ್ತೆಯರನ್ನು ಅಟ್ಟಾಡಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ನಾಳೆಯಿಂದ ನೀವು ಕೆಲಸಕ್ಕೆ ಹೇಗೆ ಬರ್ತೀರೋ ನೋಡ್ತೀವಿ ಎಂದು ಪುಂಡರ ಗುಂಪು ಆಶಾ ಕಾರ್ಯಕರ್ತೆಯರಿಗೆ ಆವಾಜ್ ಹಾಕಿದೆ. ಪಾದರಾಯನಪುರದಲ್ಲಿ ಸೆಕೆಂಡರಿ ಕಾಂಟ್ಯಾಕ್ಟ್​ನಲ್ಲಿದ್ದ ಮಹಿಳೆಯರನ್ನು ಕ್ವಾರಂಟೈನ್​ಗೆ ಶಿಫ್ಟ್ ಮಾಡಲು ಆಶಾ ಕಾರ್ಯಕರ್ತೆಯರು ಸ್ಥಳಕ್ಕೆ ಬಂದಿದ್ದರು. ಈ ವೇಳೆ ಪುಂಡರು ಪೊಲೀಸ್ ಚೆಕ್ ಪೋಸ್ಟ್ ಕಿತ್ತೆಸೆದು ಇಬ್ಬರು ಆಶಾ ಕಾರ್ಯಕರ್ತೆಯರನ್ನು ಅಟ್ಟಾಡಿಸಿ ಹಲ್ಲೆಗೆ ಯತ್ನಿಸಿದ್ದಾರೆ. […]

ಗೂಂಡಾಗಿರಿಗೂ ಮುನ್ನ ಕೊರೊನಾ ವಾರಿಯರ್ಸ್​ಗೆ ಪುಂಡರ ಬೆದರಿಕೆ
Follow us on

ಬೆಂಗಳೂರು: ಪಾದರಾಯನಪುರದಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಭಯಾನಕ ಸಂಗತಿಯೊಂದು ಹೊರಬಿದ್ದಿದೆ. ಗಲಾಟೆಗೂ ಮುನ್ನ ಪುಂಡರು ಆಶಾ ಕಾರ್ಯಕರ್ತೆಯರನ್ನು ಅಟ್ಟಾಡಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ನಾಳೆಯಿಂದ ನೀವು ಕೆಲಸಕ್ಕೆ ಹೇಗೆ ಬರ್ತೀರೋ ನೋಡ್ತೀವಿ ಎಂದು ಪುಂಡರ ಗುಂಪು ಆಶಾ ಕಾರ್ಯಕರ್ತೆಯರಿಗೆ ಆವಾಜ್ ಹಾಕಿದೆ.

ಪಾದರಾಯನಪುರದಲ್ಲಿ ಸೆಕೆಂಡರಿ ಕಾಂಟ್ಯಾಕ್ಟ್​ನಲ್ಲಿದ್ದ ಮಹಿಳೆಯರನ್ನು ಕ್ವಾರಂಟೈನ್​ಗೆ ಶಿಫ್ಟ್ ಮಾಡಲು ಆಶಾ ಕಾರ್ಯಕರ್ತೆಯರು ಸ್ಥಳಕ್ಕೆ ಬಂದಿದ್ದರು. ಈ ವೇಳೆ ಪುಂಡರು ಪೊಲೀಸ್ ಚೆಕ್ ಪೋಸ್ಟ್ ಕಿತ್ತೆಸೆದು ಇಬ್ಬರು ಆಶಾ ಕಾರ್ಯಕರ್ತೆಯರನ್ನು ಅಟ್ಟಾಡಿಸಿ ಹಲ್ಲೆಗೆ ಯತ್ನಿಸಿದ್ದಾರೆ. ನಂತರ ಕಾರ್ಯಕರ್ತೆಯರು ಅವರಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ಸ್ವಲ್ಪದರಲ್ಲೇ ನಿನ್ನೆ ರಾತ್ರಿ ಪ್ರಾಣಾಪಾಯದಿಂದ ಆಶಾ ಕಾರ್ಯಕರ್ತೆಯರು ಪಾರಾಗಿದ್ದಾರೆ. ಈ ಬಗ್ಗೆ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಸಾಧ್ಯತೆ ಇದೆ.