ಪಾದರಾಯನಪುರದಲ್ಲಿ ಸಂಘಟಿತ ಗೂಂಡಾಗಿರಿ: ಶಾಸಕ ಜಮೀರ್ ಗಪ್ ಚುಪ್! ಎಲ್ಲಿದ್ದೀರಾ ಜಮೀರ್ ಖಾನ್?

ಪಾದರಾಯನಪುರದಲ್ಲಿ ಸಂಘಟಿತ ಗೂಂಡಾಗಿರಿ: ಶಾಸಕ ಜಮೀರ್ ಗಪ್ ಚುಪ್! ಎಲ್ಲಿದ್ದೀರಾ ಜಮೀರ್ ಖಾನ್?

ಬೆಂಗಳೂರು: ಪಾದರಾಯನಪುರದಲ್ಲಿ ಸಂಘಟಿತ ಗೂಂಡಾಗಿರಿ ನಡೆದಿರುವಾಗ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಎಲ್ಲಿ ಅವಿತಿಟ್ಟುಕೊಂಡಿದ್ದಾರೆ? ಏನು ಮಾಡುತ್ತಿದ್ದಾರೆ? ಪೊಲೀಸರ ಮೇಲೆ ಅಕ್ಷಮ್ಯ ಗೂಂಡಾಗಿರಿ ನಡೆಸಿರುವ ಜನರ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ನೀಡದೆ, ಆ ದುರ್ಬುದ್ಧಿಯ ಜನರಿಗೆ ಬುದ್ಧಿವಾದ ಹೇಳದಷ್ಷು ಅಸಹಾಯಕರಾದರೆ ಜಮೀರ್? ಎಂದು ಬೆಂಗಳೂರಿನ ಜನ ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ. ಖಬರಸ್ತಾನದಲ್ಲಿ ಜಮೀರ್ ಪ್ರತ್ಯಕ್ಷ: ವಾಸ್ತವಾಗಿ ನಿನ್ನೆ ರಾತ್ರಿ ಇದೇ ಜಮೀರ್ ಅಹಮದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಪಾದರಾಯನಪುರದಲ್ಲಿ ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ […]

sadhu srinath

|

Apr 20, 2020 | 9:14 AM

ಬೆಂಗಳೂರು: ಪಾದರಾಯನಪುರದಲ್ಲಿ ಸಂಘಟಿತ ಗೂಂಡಾಗಿರಿ ನಡೆದಿರುವಾಗ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಎಲ್ಲಿ ಅವಿತಿಟ್ಟುಕೊಂಡಿದ್ದಾರೆ? ಏನು ಮಾಡುತ್ತಿದ್ದಾರೆ? ಪೊಲೀಸರ ಮೇಲೆ ಅಕ್ಷಮ್ಯ ಗೂಂಡಾಗಿರಿ ನಡೆಸಿರುವ ಜನರ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ನೀಡದೆ, ಆ ದುರ್ಬುದ್ಧಿಯ ಜನರಿಗೆ ಬುದ್ಧಿವಾದ ಹೇಳದಷ್ಷು ಅಸಹಾಯಕರಾದರೆ ಜಮೀರ್? ಎಂದು ಬೆಂಗಳೂರಿನ ಜನ ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ.

ಖಬರಸ್ತಾನದಲ್ಲಿ ಜಮೀರ್ ಪ್ರತ್ಯಕ್ಷ: ವಾಸ್ತವಾಗಿ ನಿನ್ನೆ ರಾತ್ರಿ ಇದೇ ಜಮೀರ್ ಅಹಮದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಪಾದರಾಯನಪುರದಲ್ಲಿ ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜಮೀರ್ ಈ ಕುರಿತು ಒಂದಲ್ಲ ಹತ್ತು ವಿಡಿಯೋ ಚಿತ್ರಗಳನ್ನು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ, ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

ಅದಾದ ಮೇಲೆ ಶಾಸಕ ಜಮೀರ್ ಗಪ್ ಚುಪ್ ಆಗುತ್ತಾರೆ. ಅದೇ ವೇಳೆ ಪಾದರಾಯನಪುರದಲ್ಲಿ ನೂರಾರು ಮಂದಿ ಪೊಲೀಸರ ಮೇಲೆ ಗೂಂಡಾಗಿರಿಗೆ ಇಳಿಯುತ್ತಾರೆ. ಆದರೆ ಇದುವರೆಗೂ ಶಾಸಕ ಜಮೀರ್ ಮಾತ್ರ ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇಷ್ಟೆಲ್ಲಾ ಅನಾಹುತಗಳು ನಡೆದಿದ್ದರೂ ಅವರ ಫೇಸ್ ಬುಕ್ ಸಹ ಸೈಲೆಂಟಾಗಿದೆ! ಬೆಂಗಳೂರಿನ ಜನತೆಯಲ್ಲಿ ಶಾಸಕ ಜಮೀರರ ಈ ನಡುವಳಿಕೆಯು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Follow us on

Related Stories

Most Read Stories

Click on your DTH Provider to Add TV9 Kannada