ನಗರದ ಪಾದರಾಯನಪುರದಲ್ಲಿ ಗೂಂಡಾಗಿರಿ, ಕೊರೊನಾ ಶಂಕಿತರಿಂದ ದಾಂಧಲೆ
ಬೆಂಗಳೂರು: ಕೊರೊನಾ ಮಹಾಮಾರಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ ಇದರ ತೀವ್ರತೆ ಹೆಚ್ಚಾಗಿದೆ. ಕೊರೊನಾ ಹಿನ್ನೆಲೆ ನಗರದ ಬಾಪೂಜಿನಗರ ಮತ್ತು ಪಾದರಾಯನಪುರವನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ನಿನ್ನೆ ರಾತ್ರಿ ಪಾದರಾಯನಪುರದಲ್ಲಿ ದುಷ್ಟರು ಅಟ್ಟಹಾಸವನ್ನ ಮೆರೆದಿದ್ದಾರೆ. ಓಡೋಡಿ ಹೋಗಿ ಟೇಬಲ್, ಪೆಂಡಾಲ್‌ನನ್ನ ಕಿತ್ತೊಗೆದಿದ್ದಾರೆ. ಹಾರಿಹಾರಿ ತಗಡಿನ ಶೀಟ್‌ಗಳಿಗೆ ಒದ್ದು ಕೆಡವಿದ್ದಾರೆ? ಗುಂಪು ಗುಂಪಾಗಿ ಅಮಾಯಕನ ಮೇಲೆ ಹಲ್ಲೆ ಮಾಡಿದ್ದಾರೆ? ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತರ ಅಟ್ಟಹಾಸ! ಇದು ಉತ್ತರ ಪ್ರದೇಶದಲ್ಲೋ.. ಬಿಹಾರದಲ್ಲೋ ನಡೆದ ಘಟನೆ ಅಲ್ವೇ ಅಲ್ಲ. ರಾಜ್ಯ […]
ಬೆಂಗಳೂರು: ಕೊರೊನಾ ಮಹಾಮಾರಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ ಇದರ ತೀವ್ರತೆ ಹೆಚ್ಚಾಗಿದೆ. ಕೊರೊನಾ ಹಿನ್ನೆಲೆ ನಗರದ ಬಾಪೂಜಿನಗರ ಮತ್ತು ಪಾದರಾಯನಪುರವನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ನಿನ್ನೆ ರಾತ್ರಿ ಪಾದರಾಯನಪುರದಲ್ಲಿ ದುಷ್ಟರು ಅಟ್ಟಹಾಸವನ್ನ ಮೆರೆದಿದ್ದಾರೆ. ಓಡೋಡಿ ಹೋಗಿ ಟೇಬಲ್, ಪೆಂಡಾಲ್‌ನನ್ನ ಕಿತ್ತೊಗೆದಿದ್ದಾರೆ. ಹಾರಿಹಾರಿ ತಗಡಿನ ಶೀಟ್‌ಗಳಿಗೆ ಒದ್ದು ಕೆಡವಿದ್ದಾರೆ? ಗುಂಪು ಗುಂಪಾಗಿ ಅಮಾಯಕನ ಮೇಲೆ ಹಲ್ಲೆ ಮಾಡಿದ್ದಾರೆ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತರ ಅಟ್ಟಹಾಸ! ಇದು ಉತ್ತರ ಪ್ರದೇಶದಲ್ಲೋ.. ಬಿಹಾರದಲ್ಲೋ ನಡೆದ ಘಟನೆ ಅಲ್ವೇ ಅಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಘಟನೆ. ಕೊರೊನಾ ಅಟ್ಟಹಾಸಕ್ಕೆ ಸೀಲ್‌ಡೌನ್ ಆದ ನಗರ ಪಾದರಾಯನಪುರದಲ್ಲಿ ನಡೆದ ದುಷ್ಟರ ಅಟ್ಟಹಾಸ.
ನಮ್ ದೇಶದಲ್ಲಿ ಕೊರೊನಾ ಅನ್ನೋ ಹೆಮ್ಮಾರಿ ಅಟ್ಟಹಾಸ ಮೆರೆಯುತ್ತಿದೆ. ನಮ್ಮ ಜೀವವನ್ನ ಉಳಿಸೋಕೆ.. ವೈದ್ಯರು.. ಪೊಲೀಸರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ಹೆಂಡತಿ ಮಕ್ಕಳನ್ನು ಬಿಟ್ಟು ಅವರ ಪ್ರಾಣವನ್ನ ಲೆಕ್ಕಿಸದೆ ದುಡಿಯುತ್ತಿದ್ದಾರೆ ಈ ಹೊತ್ತಿನಲ್ಲಿ ನಾವು ಹೇಗ್ ಇರ್ಬೇಕು. ಏನ್ ಮಾಡ್ಬೇಕು ಅನ್ನೋ ಪ್ರಜ್ನೆ ಸ್ವಲ್ಪ ಆದ್ರೂ ಜನರಿಗೆ ಇರ್ಬೇಕು. ಆದ್ರೆ ಪಾದರಾಯನಪುರದಲ್ಲಿ ನಡೆದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಕೊರೊನಾ ನರ್ತನಕ್ಕೆ ಕರುನಾಡು ಸೇರಿದಂತೆ ದೇಶಕ್ಕೆ ದೇಶವೇ ಸ್ತಬ್ಧವಾಗಿದೆ. ಕೊರೊನಾ ಕಂಟಕದಿಂದ ಪಾರಾಗೋದು ಹೇಗೆ ಅನ್ನೋ ಚಿಂತೆಯಲ್ಲಿ ದೇಶವಿದೆ. ಆದ್ರೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದರಂತೆ ಕರ್ನಾಟದಲ್ಲೂ ಕೊರೊನಾ ರುದ್ರ ನರ್ತನ ಮಾಡುತ್ತಿದೆ. ಇದರಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಪಾದರಾಯನಪುರದಲ್ಲಿ ಸೋಂಕಿತರ ಸಂಖ್ಯೆ ಮಿತಿಮೀರಿದ್ದು, ಈ ಒಂದೇ ಏರಿಯಾದಲ್ಲಿ 17 ಕೇಸ್‌ಗಳಿದೆ. ಹೀಗಾಗಿ ಪಾದರಾಯನಪುರವನ್ನ ಸೀಲ್‌ಡೌನ್ ಮಾಡಲಾಗಿದೆ. ಜನ ಹೊರಬರದಂತೆ ಕಟ್ಟೆಚ್ಚರವಹಿಸಲಾಗಿದೆ. ಆದ್ರೆ ನಿನ್ನೆ ರಾತ್ರಿ ಪಾದರಾಯನಪುರದಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಶಂಕಿತರನ್ನು ಕ್ವಾರಂಟೈನ್‌ಗೆ ಶಿಫ್ಟ್ ಮಾಡಲು ಹೋಗಿದ್ದೇ ತಪ್ಪಾ? ಅಂದಹಾಗೇ 17 ಜನ ಸೋಂಕಿತರಿರುವ ಪಾದರಾಯನಪುರದಲ್ಲಿ, 58 ಜನ ಸೋಂಕಿತರ ಜತೆ ದ್ವಿತೀಯ ಸಂಪರ್ಕ ಹೊಂದಿದ್ದಾರೆ. ಈಗಾಗಲೇ 58 ಜನರ ಪೈಕಿ 20 ಜನರನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ. ಇನ್ನುಳಿದವರನ್ನ ಕ್ವಾರಂಟೈನ್‌ಗೆ ಶಿಫ್ಟ್ ಮಾಡಲು ನಿನ್ನೆ ರಾತ್ರಿ ವೇಳೆ ಬಿಬಿಎಂಪಿ ಅಧಿಕಾರಿಗಳು ತೆರಳಿದ್ರು.
ಈ ವೇಳೆ ಪಾಲಿಕೆ ಅಧಿಕಾರಿಗಳ ಜತೆ ಶಂಕಿತರು ಗಲಾಟೆ ತೆಗೆದಿದ್ದಾರೆ. ನಾವ್ ಬರಲ್ಲ,. ಶಾಸಕರು ಹೇಳಿದರೆ ಮಾತ್ರ ಕ್ವಾರಂಟೈನ್‌ಗೆ ಒಳಪಡ್ತೇವೆ ಎಂದು ಪಟ್ಟು ಹಿಡಿದ್ರು. ನಂತ್ರ 200ಕ್ಕೆ ಹೆಚ್ಚು ಕಿಡಿಗೇಡಿಗಳು, ಪೊಲೀಸರ ಪೆಂಡಾಲ್, ಬ್ಯಾರಿಕೇಡ್, ರಸ್ತೆಗೆ ಹಾಕಿದ್ದ ತಗಡುಗಳನ್ನ ಕಿತ್ತೆಸೆದು, ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೇ ಹಲ್ಲೆಗೆ ಯತ್ನಿಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯ್ತು. ಈ ವೇಳೆ ಇಡೀ ಪಾದರಾಯನಪುರಕ್ಕೆ ಪದಾರಾಯನಪುರವೇ ಬೆಂಕಿ ಉಂಡೆಯಂತಾಗಿತ್ತು. ನಂತ್ರ ರಾಕ್ಷಸರ ಆರ್ಭಟಕ್ಕೆ ಹೆದರಿ ಬಿಬಿಎಂಪಿ ಅಧಿಕಾರಿಗಳು ಅಲ್ಲಿಂದ ಹೆದರಿ ಓಡಿ ಹೋದ್ರು.
ದಿನ ಬಂಡ್ಕೊಂಡ್ರೂ ಬುದ್ಧಿ ಕಲಿಯದ ಜನ! ನಾವು ದಿನ ನಿತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸೋಂಕಿನ ಶಂಕೆ ಇದ್ದರೆ ಕೂಡಲೇ ಕ್ವಾರಂಟೈನ್‌ಗೆ ಒಳಗಾಗಿ ಅಂತ ಪದೇ ಪದೇ ಹೇಳ್ತಾನೆ ಇದ್ದಾರೆ. ಪೊಲೀಸರು, ಸಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಚಿಕ್ಕ ಮಕ್ಕಳಿಗೂ ಕ್ವಾರಂಟೈನ್, ಸೀಲ್‌ಡೌನ್, ಲಾಕ್‌ಡೌನ್ ಅಂದ್ರೆ ಗೊತ್ತಾಗುತ್ತೆ. ಆದ್ರೆ ಕೆಲವು ಜನರು ಇದೇ ವಿಚಾರವಾಗಿ ಪೊಲೀಸರ ಜೊತೆ ಬಿಬಿಎಂಪಿ ಸಿಬ್ಬಂದಿ ಜೊತೆ ನಡೆದುಕೊಂಡಿದ್ದು ಎಂಥಾ ನೀಚರಿದ್ದಾರೆ ಅನ್ನೋದನ್ನ ತೋರಿಸಿಕೊಟ್ಟಿದೆ.
ನಮಗಾಗಿ ದುಡಿಯುವವರ ಜೀವಕ್ಕೆ ಬೆಲೆಯೇ ಇಲ್ವಾ? ಬಿಬಿಎಂಪಿ ಸಿಬ್ಬಂದಿ, ವೈದ್ಯರು, ಸರ್ಸ್, ಆಶಾ ಕಾರ್ಯಕರ್ತೆಯರು, ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಆದ್ರೆ, ಕಿಡಿಗೇಡಿಗಳಿಗೆ ಇವೆಲ್ಲವೂ ಅರಿವಿಗೇ ಬರ್ತಿಲ್ಲ. ಕೆಲದಿನಗಳ ಹಿಂದೆ ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳು, ಇದೀಗ ಪೊಲೀಸರು, ಪಾಲಿಕೆ ಸಿಬ್ಬಂದಿ ಮೇಲೇ ದಾಳಿ ನಡೆಸುವಷ್ಟು ಮುಂದಕ್ಕೆ ಬಂದಿದ್ದಾರೆ. ಇದನ್ನ ಸರ್ಮಥಿಸಿಕೊಳ್ಳವವರು ಇದು ಮಾಹಿತಿಯ ಕೊರತೆಯಿಂದ, ಅಜ್ಞಾನದಿಂದ ಆದ ದಾಳಿ ಎಂದು ಹೇಳುತ್ತಿದ್ದಾರೆ. ಆದ್ರೆ ಇವರನ್ನ ಪದೇ ಪದೇ ಸರ್ಮರ್ಥಿಸಿಕೊಳ್ಳುವವರಿಗೆ ಅದೇನ್ ಹೇಳ್ಬೇಕು ಅನ್ನೋದು ಗೊತ್ತಾಗಲ್ಲ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್, ರಾತ್ರಿ ಇಡೀ ಕಾರ್ಯಾಚರಣೆ! ಪಾದರಾಯನಪುರದಲ್ಲಿ ಗಲಾಟೆಯಾದ ವಿಷ್ಯ ತಿಳಿದ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಜೆ.ಜೆ.ನಗರ ಪೊಲೀಸ್ ಠಾಣೆಗೆ ರಮೇಶ್ ಬಾನೋತ್ ಭೇಟಿ ನೀಡಿದ್ರು. ನಂತ್ರ ಘಟನಾ ಸ್ಥಳ ಪರಿಶೀಲಿಸಿದ್ರು. ಹಾಗೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಫೋರ್ಸ್ ಆಗಮಿಸಿದ್ದು, ಗಲಾಟೆ ಮಾಡಿದ್ದ ಅಷ್ಟು ಕಿರಾತಕರನ್ನ ಅರೆಸ್ಟ್ ಮಾಡುವ ಗುರಿ ಇಟ್ಟುಕೊಂಡು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಅಲ್ಲದೇ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಮತ್ತು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದ ವಿಶೇಷ ತಂಡಗಳಿಂದ ರಾತ್ರಿ ಇಡಿ ಕಾರ್ಯಚರಣೆ ನಡೆದಿದೆ. ಅಟ್ಟಹಾಸ ಮೆರೆದ ಕೆಲವರನ್ನ ಪೊಲೀಸರು ಈಗಾಗಗಲೇ ವಶಕ್ಕೆ ಪಡೆದಿದ್ದು, ಇನ್ನುಳಿದವರು ಹೆಡೆಮುರಿ ಕಟ್ಟೋಕೆ ಮುಂದಾಗಿದ್ದಾರೆ.
ಒಟ್ನಲ್ಲಿ ಪ್ರಾಣ ರಕ್ಷಣೆಗೆ ಹೋದ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಮೇಲೆ ದುರಳರು ಅಟ್ಟಹಾಸ ಮೆರೆದಿದ್ದು ದೊಡ್ಡ ದುರಂತ. ಕೊರೊನಾ ಕಾಟದ ನಡುವೆ ಈ ಕಿರಾತರನ್ನ ಕಂಟ್ರೋಲ್ ಮಾಡೋದೆ ಪೊಲೀಸರಿಗೆ ದೊಡ್ಡ ತಲೆ ನೋವು ಆಗಿದೆ. ಇವರು ಕೊರೊನಾದಿಂದ ಸಾಯೋದು ಅಲ್ಲದೆ ಬೆೇರೆಯವರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಆದಷ್ಟು ಬೇಗ ರಾಜ್ಯ ಸರ್ಕಾರ ಈ ಘಟನೆಯಿಂದ ಎಚ್ಚೆತ್ತು ಈ ನೀಚರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ.
Published On - 6:51 am, Mon, 20 April 20