ರಾಜ್ಯ ಸಾರಿಗೆ ನೌಕರರ ಕೂಟದಲ್ಲಿ ಬಿರುಕು, ಒಕ್ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಉಚ್ಛಾಟನೆ ಖಂಡಿಸಿ ಪದಾಧಿಕಾರಿಗಳ ರಿಸೈನ್

| Updated By: ಆಯೇಷಾ ಬಾನು

Updated on: Jun 16, 2021 | 8:31 AM

ರಾಜ್ಯ ಸಾರಿಗೆ ನೌಕರರ ಕೂಟದಲ್ಲಿ ಅದ್ಯಾಕೋ ಗೊತ್ತಿಲ್ಲ ಅಸಮಾಧಾನ ಸ್ಪೋಟವಾಗಿದೆ. ರಾಜ್ಯ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲೇಬೇಕು ಅಂತ ಪಟ್ಟು ಹಿಡಿದು ಸರ್ಕಾರಕ್ಕೆ ಸೆಡ್ಡು ಹೊಡೆದು ಅಸ್ತಿತ್ವಕ್ಕೆ ಬಂದಿದ್ದ ಸಂಘಟನೆಯಲ್ಲಿ ಈಗ ಉಚ್ಚಾಟನೆ ಮತ್ತು ರಾಜೀನಾಮೆ ಪರ್ವ ಆರಂಭವಾಗಿದೆ.

ರಾಜ್ಯ ಸಾರಿಗೆ ನೌಕರರ ಕೂಟದಲ್ಲಿ ಬಿರುಕು, ಒಕ್ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಉಚ್ಛಾಟನೆ ಖಂಡಿಸಿ ಪದಾಧಿಕಾರಿಗಳ ರಿಸೈನ್
ಕೆಎಸ್​ಆರ್​ಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಅಂತಾ ಪ್ರತಿಭಟನೆ ಮಾಡಿ ಸಾರಿಗೆ ಬಂದ್ ಮಾಡಿಸಿದ್ದ ನೌಕರರ ಕೂಟದಲ್ಲಿ ಬಿರುಕು‌ ಮೂಡಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಎರಡು ಬಾರಿ ರಾಜ್ಯಾದ್ಯಂತ ಸಂಪೂರ್ಣ ಸಾರಿಗೆ ಮುಷ್ಕರ ಮಾಡಿ ಬಸ್ ಸಂಚಾರ ಸ್ಥಗಿತಗೊಳಿದ್ದ ಒಕ್ಕೂಟದಲ್ಲಿ ಇಂದು ಭಿನ್ನಮತ ಸ್ಫೋಟಗೊಂಡಿದೆ. ಸಾರಿಗೆ ನೌಕರರ ಕೂಟದ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಕಾರ್ಯಕಾರಣಿ ಸಭೆ ಮಾಡಿ, ಜಂಟಿ ಕಾರ್ಯದರ್ಶಿಯಾಗಿದ್ದ ಆನಂದ್ ಅವ್ರನ್ನ ಕೂಟದಿಂದ ಉಚ್ಛಾಟನೆ ಮಾಡಲಾಗಿದೆ. ಆನಂದ್ ಸಾರಿಗೆ ನೌಕರರ ಕೂಟದಲ್ಲಿ ವಿರೋಧಿ ಚಟುವಟಿಕೆಗಳನ್ನೂ ಮಾಡ್ತಿದ್ದಾರೆ ಅಂತಾ ಉಚ್ಛಾಟಿಸಲಾಗಿದ್ಯಂತೆ.

ಆನಂದ್ ಉಚ್ಛಾಟನೆ ಖಂಡಿಸಿ ಪದಾಧಿಕಾರಿಗಳ ರಿಸೈನ್
ಇನ್ನೂ ಸಾರಿಗೆ ನೌಕರರ ಕೂಟದ ಈ ನಿರ್ಧಾರದ ವಿರುದ್ಧ ಆನಂದ್ ಪರ ಇರೋ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷರಾದ ಚಂದ್ರಶೇಖರ್ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ, ನೌಕರರ ಕೂಟದಲ್ಲಿ ರಾಜಕೀಯ ಶುರುವಾಗಿದೆ ಅಂತಾ ರಾಜೀನಾಮೆ ನೀಡಿದ್ದಾರೆ. ಸಾರಿಗೆ ಕೂಟದ ಪ್ರಚಾರ ಸಮಿತಿಯ ಅಧ್ಯಕ್ಷ ಹೆಚ್.ಜಿ. ನಾಗೇಂದ್ರ, ಕಾರ್ಯದರ್ಶಿಯಾದ ಚೇತನ್ ರಾಜ್, ರಾಜ್ಯ ಖಜಾಂಚಿ ಜಗದೀಶ್ ಹೆಚ್.ಆರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಷ್ಟಲ್ಲದೆ ಸಾರಿಗೆ ಕೂಟದ ಒಕ್ಕಲಿಗರ ಸಮಿತಿ ಹಾಗೂ ಎಸ್ಸಿ ಎಸ್ ಟಿ ಸಮಿತಿಯವರು ಸೇರಿದಂತೆ ಪದಾಧಿಕಾರಿಗಳು ರಾಜಿನಾಮೆ ನೀಡಲು ನಿರ್ಧಾರ ಮಾಡಿದ್ದಾರೆ.

ಒಟ್ನಲ್ಲಿ ಚಂದ್ರಶೇಖರ್ ಌಂಡ್ ಟೀಮ್ ಆನಂದ್ ಸಂಘ ವಿರೋಧಿ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿದ್ರು ಅಂತಿದ್ರೆ ಇತ್ತ ಆನಂದ್ ಌಂಡ್ ಟೀಮ್ ಮಾತ್ರ ಚಂದ್ರು ಸರ್ವಾಧಿಕಾರಿ ಎನ್ನುತ್ತಿದೆ. ಈ ನಡುವೆ ಇವ್ರನ್ನು ನಂಬಿ ಸಾರಿಗೆ ಸಂಸ್ಥೆಯನ್ನು ಎದುರು ಹಾಕಿಕೊಂಡ ನೌಕರರು ಬಲಿಯಾದ್ರಾ ಅಥವಾ ನೌಕರರಿಗೆ ನ್ಯಾಯ ಕೊಡಿಸಲು ಹೋದ ಕೋಡಿಹಳ್ಳಿ ಚಂದ್ರಶೇಖರ್ ಪ್ರಯತ್ನ ಠುಸ್ ಆಗುತ್ತಾ ಅನ್ನೋದೇ ನೌಕರರ ಮುಂದಿರೋ ಪ್ರಶ್ನೆಯಾಗಿದೆ.

ಇದನ್ನೂ ಓದಿ: Petrol Price Today: ಇಂದು ಸಹ ಏರಿಕೆಯಾದ ಪೆಟ್ರೋಲ್​, ಡೀಸೆಲ್​ ಬೆಲೆ; ಬೆಂಗಳೂರಿನಲ್ಲಿ ಶತಕ ಬಾರಿಸುವ ನಿರೀಕ್ಷೆ