ನನ್ನ ಫೋನ್​ ಟ್ಯಾಪ್ ಆಗಿರುವ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ: ಶಾಸಕ ಅರವಿಂದ್ ಬೆಲ್ಲದ್

| Updated By: guruganesh bhat

Updated on: Jun 23, 2021 | 8:04 PM

ಶಾಸಕ ಅರವಿಂದ ಬೆಲ್ಲದ್ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಿ ಡಿಸಿಪಿ ಅನುಚೇತ್ ಆದೇಶ ಹೊರಡಿಸಿದ್ದಾರೆ. ಕಬ್ಬನ್ ಪಾರ್ಕ್ ಎಸಿಪಿ ಯತಿರಾಜ್ ಅವರ ಬದಲಿಗೆ ಎಸಿಪಿ ಪೃಥ್ವಿ ಅವರನ್ನು ನೇಮಿಸಲಾಗಿದೆ.

ನನ್ನ ಫೋನ್​ ಟ್ಯಾಪ್ ಆಗಿರುವ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ: ಶಾಸಕ ಅರವಿಂದ್ ಬೆಲ್ಲದ್
ಶಾಸಕ ಅರವಿಂದ ಬೆಲ್ಲದ್​
Follow us on

ಬೆಂಗಳೂರು: ನನ್ನ ಫೋನ್ ಟ್ಯಾಪ್ ಆಗಿರುವುದರ ಬಗ್ಗೆ ಗೃಹ ಇಲಾಖೆಗೆ ಸಲ್ಲಿಸಿದ್ದ ದೂರಿನನ್ವಯ ತನಿಖೆ ನಡೆಯುತ್ತಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ. ಆದರೆ ನಾನು ದೂರು ಹಿಂಪಡೆಯುತ್ತಿದ್ದೇನೆ ಎಂಬ ಸುದ್ದಿ ಹರಡುತ್ತಿರುವುದನ್ನು ಗಮನಿಸಿದ್ದೇನೆ. ಆದರೆ ಅದು ಸತ್ಯಕ್ಕೆ ದೂರವಾದದ್ದು, ಸಂಪೂರ್ಣ ತನಿಖೆಯಾಗಿ ಸತ್ಯ ಹೊರಬರಬೇಕಿದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಈ ಬೆನ್ನಲ್ಲೇ ಶೇಷಾದ್ರಿಪುರಂ ಎಸಿಪಿ ಕಚೇರಿಗೆ ಹಾಜರಾಗಿ ಪ್ರಕರಣದ ಮಾಹಿತಿ ನೀಡುವಂತೆ ಕೋರಿ ಶಅಸಕ ಅರವಿಂದ್ ಬೆಲ್ಲದ್ ಗೆ ನೋಟಿಸ್ ಜಾರಿಗೊಳಿಸಲಾಗಿದೆ. ಶಾಸಕ ಅರವಿಂದ ಬೆಲ್ಲದ್ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಿ ಡಿಸಿಪಿ ಅನುಚೇತ್ ಆದೇಶ ಹೊರಡಿಸಿದ್ದಾರೆ. ಕಬ್ಬನ್ ಪಾರ್ಕ್ ಎಸಿಪಿ ಯತಿರಾಜ್ ಅವರ ಬದಲಿಗೆ ಎಸಿಪಿ ಪೃಥ್ವಿ ಅವರನ್ನು ನೇಮಿಸಲಾಗಿದೆ. ಎಸಿಪಿ ಯತಿರಾಜ್ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಇತ್ತ ಕಾರಣ ಅವರ ಬದಲಿಎಗ ಬೇರೋರ್ವ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

ಶಾಸಕ ಬೆಲ್ಲದ್​ಗೆ ಜೈಲಿಂದ ಯುವರಾಜ್ ಸ್ವಾಮಿ ಕರೆ ವಿಚಾರ: ಶುರುವಾಯ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಪೀಕಲಾಟ
ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲು ಮಾಡಬೇಕು ಎಂದು ಶತಾಯಗತಾಯ ಪ್ರತ್ನಿಸುತ್ತಿರುವ ಶಾಸಕ ಅರವಿಂದ್​ ಬೆಲ್ಲದ್ ಆ ಪ್ರಯತ್ನದಲ್ಲಿ ಟೆಲಿಫೋನ್​ ಟ್ಯಾಪಿಂಗ್​ ಭೂತವನ್ನು ಹರಿಯಬಿಟ್ಟಿದ್ದರು.  ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಪೀಕಲಾಟಕ್ಕೆ ಕಾರಣವಾಗಿತ್ತು. ಶಾಸಕ ಬೆಲ್ಲದ್​ಗೆ ಜೈಲಿಂದ ಯುವರಾಜ್ ಸ್ವಾಮಿ ಕರೆ ವಿಚಾರವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಗೆ ಡವಡವ ಶುರುವಾಗಿತ್ತು.

ಪ್ರಸ್ತುತ ಬಹುಕೋಟಿ ವಂಚಕ ಯುವರಾಜ್​ ಸ್ವಾಮಿ ಪರಪ್ಪನ ಅಗ್ರಹಾರ ಜೈಲು ವಾಸಿಯಾಗಿದ್ದಾರೆ. ಆತ ದೂರವಾಣಿ ಕರೆ ಮಾಡಿ ತನ್ನೊಂದಿಗೆ ಮಾತಾಡಿದ್ದ ಎಂದಿದ್ದರು ಶಾಸಕ ಅರವಿಂದ ಬೆಲ್ಲದ್.  ಹೇಳಿಕೇಳಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಹಾಗಾದ್ರೆ ಯುವರಾಜ್​ ಸ್ವಾಮಿಗೆ ಮೊಬೈಲ್ ಫೋನ್ ಸಿಕ್ಕಿದ್ದೇಗೆ? ಎಂಬ ಪ್ರಶ್ನೆ ಪರಪ್ಪನ ಜೈಲು ಅಧಿಕಾರಿಗಳನ್ನು ಬಹುವಾಗಿ ಕಾಡತೊಡಗಿತ್ತು.

ಯುವರಾಜ್​ ಸ್ವಾಮಿಗೆ ಮೊಬೈಲ್ ಫೋನ್ ಕೊಟ್ಟಿದ್ದು ಯಾರು? ಯುವರಾಜ್ ಇನ್ನೂ ಯಾರು ಯಾರಿಗೆ ಫೋನ್​ ಮಾಡುತ್ತಿರುತ್ತಾನೆ? ಈತನಿಗೆ ಮೊಬೈಲ್ ಕೊಟ್ಟಿದ್ದು ಯಾರು, ಹೇಗೆ? ಇವೇ ಪಶ್ನೆಗಳನ್ನು ಮುಂದಿಟ್ಟುಕೊಂಡು ತನಿಖೆಗೆ ಡಯಲ್​ ಮಾಡಬೇಕಾಗುತ್ತದೆ. ಸದ್ಯ ಇದರಿಂದಾಗಿ ಜೈಲು ಸಿಬ್ಬಂದಿಗೆ ಭೀತಿ ಶುರುವಾಗಿದೆ.

ಈ ಹಿಂದೆ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳು ಹಲವು ಬಾರಿ ಬಯಲಿಗೆ ಬಂದಿದ್ವು. ಮೊಬೈಲ್ ಫೋನ್ ಬಳಕೆ, ಗಾಂಜಾ ಮಾದಕ ವಸ್ತುಗಳ ಸರಬರಾಜು ಸೇರಿ ಇನ್ನಿತರ ಅಕ್ರಮಗಳು ನಡೆಯುತ್ತಿದ್ದವು. ಹಾಗಾದರೆ ಸದ್ಯ ಪರಪ್ಪನ ಅಗ್ರಹಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದಕ್ಕೆ ಬೆಲ್ಲದ್ ಆರೋಪವೇ ಸಾಕ್ಷಿಯಾದೀತು.

ಇದನ್ನೂ ಓದಿ: Karnataka Politics: ಸಚಿವ ಸಿ ಪಿ ಯೊಗೇಶ್ವರ್​ಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಜವಾಬ್ಧಾರಿ ಘೋಷಿಸಿದ ಸಿಎಂ ಯಡಿಯೂರಪ್ಪ

ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ: ಡಿಸಿಎಂ ಡಾ. ಅಶ್ವತ್ಥ್ ನಾರಾಯಣ

(MLA Arvind Bellad says I am fully cooperating with the investigation into the case that is my phone tap )