ಲೋಕಲ್​ ‘ದಂಗಲ್’ನಿಂದ ಕೊಂಚ ಬ್ರೇಕ್ ಪಡೆದು.. ಕುಸ್ತಿ ಪಂದ್ಯಾವಳಿಗೆ ಚಾಲನೆ ಕೊಟ್ಟ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ

|

Updated on: Dec 25, 2020 | 7:08 PM

ತಮ್ಮ ಪ್ರಚಾರಕ್ಕೆ ಕೊಂಚ ಬ್ರೇಕ್​ ಕೊಟ್ಟ ಶಾಸಕರು ಈ ನಡುವೆ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಬೀರಲಿಂಗೇಶ್ವರ ಕಾರ್ತಿಕೋತ್ಸವದಲ್ಲಿ ಸಹ ಪಾಲ್ಗೊಂಡರು. ಉತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿದರು.

ಲೋಕಲ್​ ‘ದಂಗಲ್’ನಿಂದ ಕೊಂಚ ಬ್ರೇಕ್ ಪಡೆದು.. ಕುಸ್ತಿ ಪಂದ್ಯಾವಳಿಗೆ ಚಾಲನೆ ಕೊಟ್ಟ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ
ಕುಸ್ತಿ ಪಂದ್ಯಾವಳಿಗೆ ಚಾಲನೆ ಕೊಟ್ಟ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ
Follow us on

ದಾವಣಗೆರೆ: ಡಿಸೆಂಬರ್ 27ರಂದು ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಯ 2ನೇ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಿಧ ಗ್ರಾಮಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಈ ವೇಳೆ, ಮತದಾರರಿಗೆ ಹಲವು ಭರವಸೆ ನೀಡಿದ ಶಾಸಕ ರೇಣುಕಾಚಾರ್ಯ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟೆ ಗ್ರಾಮದಲ್ಲಿ ಜಾತಿ ಪ್ರಮಾಣಪತ್ರ ಕೊಡಿಸುವ ಭರವಸೆ ಸಹ ನೀಡಿದರು ಎಂದು ಹೇಳಿದರು.

ತಮ್ಮ ಪ್ರಚಾರಕ್ಕೆ ಕೊಂಚ ಬ್ರೇಕ್​ ಕೊಟ್ಟ ಶಾಸಕರು ಈ ನಡುವೆ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಬೀರಲಿಂಗೇಶ್ವರ ಕಾರ್ತಿಕೋತ್ಸವದಲ್ಲಿ ಸಹ ಪಾಲ್ಗೊಂಡರು. ಉತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿದರು. ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಕಡೆಯಿಂದ ನೂರಕ್ಕು ಹೆಚ್ಚು ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಈ ವೇಳೆ, ಪಂದ್ಯಾವಳಿಯಲ್ಲಿ ಗೆದ್ದ ಕುಸ್ತಿಪಟುಗಳಿಗೆ ಬಹುಮಾನ ನೀಡಿ ಸನ್ಮಾನ ಮಾಡಿದರು.

ಯತ್ನಾಳ್ ಒಬ್ಬ ಆರ್ಡಿನರಿ ಶಾಸಕ.. ಇಂಥ ವಿಷಯಗಳನ್ನು ಮಾತಾಡಲು ಅವರು​​ ಯಾರು? -ಡಿ.ವಿ.ಸದಾನಂದಗೌಡ

Published On - 7:02 pm, Fri, 25 December 20