ಗಂಡು ಮಗುವನ್ನು ಮಾರಾಟ ಮಾಡಲು ಮುಂದಾದ ತಂದೆ .. ಮಗು ಕೊಡಲು ಒಲ್ಲೆ ಎಂದ ಪತ್ನಿಗೆ ರಸ್ತೆಯಲ್ಲಿ ಜುಟ್ಟು ಹಿಡಿದು ಎಳೆದಾಡಿದ ಪತಿ

ಯಾದಗಿರಿ ಮೂಲದ ಶರಣಪ್ಪ ಮಗು ಮಾರಾಟ ಮಾಡಲು ಯತ್ನಿಸಿದ್ದ. ಇದನ್ನು ನೋಡಿದ ಪತ್ನಿ ಲಕ್ಷ್ಮಿ ಆತನನ್ನು ತಡೆದಿದ್ದಾಳೆ. ಇದರಿಂದ ಸಿಟ್ಟುಗೊಂಡ ಶರಣಪ್ಪ ಆಕೆಯನ್ನು ರಸ್ತೆಯಲ್ಲಿ ಎಳೆದು ಹೊಡೆದಿದ್ದಾನೆ.

  • TV9 Web Team
  • Published On - 16:14 PM, 25 Dec 2020
ಗಂಡು ಮಗುವನ್ನು ಮಾರಾಟ ಮಾಡಲು ಮುಂದಾದ ತಂದೆ .. ಮಗು ಕೊಡಲು ಒಲ್ಲೆ ಎಂದ ಪತ್ನಿಗೆ ರಸ್ತೆಯಲ್ಲಿ ಜುಟ್ಟು ಹಿಡಿದು ಎಳೆದಾಡಿದ ಪತಿ
ರಸ್ತೆಯಲ್ಲಿ ಪತ್ನಿಗೆ ಹೊಡೆದ ಪತಿ

ನೆಲಮಂಗಲ: ತನ್ನ ಸ್ವಂತ 6 ತಿಂಗಳ ಗಂಡು ಮಗುವನ್ನು ಮಾರಾಟ ಮಾಡಲು ತಂದೆ ಶರಣಪ್ಪ ಹೊರಟಿದ್ದ. ಇದನ್ನು ತಡೆದ ಪತ್ನಿ ಲಕ್ಷ್ಮಿಯನ್ನು ಜುಟ್ಟು ಹಿಡಿದು ರಸ್ತೆಯಲ್ಲಿ ಹೊಡೆದಿರುವ ಘಟನೆ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಯಾದಗಿರಿ ಮೂಲದ ಶರಣಪ್ಪ ಮಗು ಮಾರಾಟ ಮಾಡಲು ಯತ್ನಿಸಿದ್ದ.  ಇದನ್ನು  ನೋಡಿದ ಪತ್ನಿ ಲಕ್ಷ್ಮಿ ಆತನನ್ನು ತಡೆದಿದ್ದಾಳೆ. ಇದರಿಂದ ಸಿಟ್ಟುಗೊಂಡ ಶರಣಪ್ಪ ಆಕೆಯನ್ನು ರಸ್ತೆಯಲ್ಲಿ ಎಳೆದು ಹೊಡೆದಿದ್ದಾನೆ. ಪತಿಯ ನಿರಂತರ ಕಿರುಕುಳದಿಂದ ಬೇಸತ್ತ ಪತ್ನಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.

ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ! ಎಲ್ಲಿ?