ಉಜಿರೆ ಬಾಲಕನ ಕಿಡ್ನ್ಯಾಪ್ ಕೇಸ್: ಪರಿಚಿತನೇ ಹಾಕಿದ್ದ ಸ್ಕೆಚ್.. ಬಿಟ್ ಕಾಯಿನ್ ಪಡೆಯೋಕೆ ಇದೆಲ್ಲಾ ಸರ್ಕಸ್
ಉದ್ಯಮಿ ಪುತ್ರನನ್ನ ಅಪಹರಣ ಮಾಡಿದ್ದ ಕಿರಾತಕರು ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ರು. ಆ ಕಿಡ್ನ್ಯಾಪ್ ಕಹಾನಿಯಲ್ಲಿ ಪೊಲೀಸರ ಚಾಣಕ್ಷತನ ಎಲ್ಲರನ್ನು ಬೆರಗುಗೊಳಿಸಿತ್ತು. ಮಿಂಚಿನ ಕಾರ್ಯಾಚರಣೆ ಮಾಡಿ ಕಿಡ್ನ್ಯಾಪರ್ಸ್ ಗಳ ಹೆಡೆಮುರಿ ಕಟ್ಟಿದ್ದರು. ಆದ್ರೆ ಆ ಕಿಡ್ನ್ಯಾಪ್ ಹಿಂದೆ ಇದ್ದನು ಯಾರು? ಯಾತಕ್ಕಾಗಿ ಕಿಡ್ನ್ಯಾಪ್ ಮಾಡಿದ್ದು ಅನ್ನೋದು ರಿವೀಲ್ ಆಗಿದೆ.

ಮಂಗಳೂರು: ಉಜಿರೆ ಬಾಲಕನ ಕಿಡ್ನ್ಯಾಪ್.. ಬಾಲಕ ಬದುಕಿ ಬರ್ತಾನೆ ಅನ್ನೋ ಭರವಸೆ ಇರ್ಲಿಲ್ಲ. ಮರಳಿ ಬಂದು ಮನೆಯವರ ಮಡಿಲು ಸೇರ್ತಾನೆ ಅನ್ನೋ ನಂಬಿಕೆಯೇ ಹೊರಟು ಹೋಗಿತ್ತು. ಕಿಡ್ನ್ಯಾಪರ್ಸ್ ಕಾಲ್ ಮಾಡಿ ಕೋಟಿ ಕೋಟಿಗೆ ಬೇಡಿಕೆ ಇಡುತ್ತಿದ್ದರು. ಆದ್ರೆ ಪೊಲೀಸರು ಬಾಲಕನನ್ನ ಕಿಡ್ನ್ಯಾಪ್ ಮಾಡಿದವರ ಹೆಡೆಮುರಿ ಕಟ್ಟಿ ಬಾಲಕನನ್ನ ಪೋಷಕರ ಮಡಿಲಿಗೆ ಸೇರಿಸಿದ್ರು.
ಡಿಸೆಂಬರ್ 17ಸಂಜೆ 6.30 ರ ಸಮಯ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಮೈದಾನಯೊಂದರಲ್ಲಿ ತನ್ನ ಅಜ್ಜನೊಂದಿಗೆ ಆಟವಾಡ್ತಿದ್ದ ಬಾಲಕನನ್ನ ಕಿಡ್ನ್ಯಾಪ್ ಮಾಡಲಾಗಿತ್ತು. ಬಿಜಾಯ್ ಅನ್ನೋ ಉದ್ಯಮಿಯ ಪುತ್ರ ಅನುಭವ್‌ನನ್ನ ಅಪಹರಿಸಿದ ದುಷ್ಕರ್ಮಿಗಳು ಮೊದಲು 17 ಕೋಟಿ ಆಮೇಲೆ 10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ರು. ಬಾಲಕನ್ನ ಕಿಡ್ನ್ಯಾಪ್ ಮಾಡಿದ 6 ಜನ ಆರೋಪಿಗಳನ್ನ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ರು. ಆದ್ರೆ ಇವರೆಲ್ಲರೂ ಕೂಡ ಸುಪಾರಿ ಕಿಡ್ನ್ಯಾಪರ್ಸ್. ಆದ್ರೆ ಇವರ ಹಿಂದೆ ಇದ್ದ ಕಿಂಗ್ ಪಿನ್ ಹಾಸನ ಜಿಲ್ಲೆ ಸಕಲೇಶಪುರದ ಪ್ರದೀಪ್ ಅನ್ನೋದು ಗೊತ್ತಾಗಿದೆ.
ಪರಿಚಿತನಿಂದಲೇ ಕಿಡ್ನ್ಯಾಪ್ಗೆ ಸ್ಕೆಚ್ ಸಕಲೇಶಪುರ ತಾಲೂಕಿನವನಾದ ಪ್ರದೀಪ್ ಕಿಡ್ನ್ಯಾಪ್ ಆದ ಬಾಲಕನ ತಂದೆ ಬಿಜೋಯ್ ಗೆ ಪರಿಚಿತನಾಗಿದ್ದ. 250 ಕೋಟಿ ಬಿಟ್ ಕಾಯಿನ್ ಬಿಜೋಯ್ ಬಳಿ ಇದೆ ಅನ್ನೊದನ್ನು ಪ್ರದೀಪ್ ತಿಳಿದಿದ್ದ. ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿದ್ದ ಪ್ರದೀಪ್ಗೆ ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿಯಿತ್ತು. ಹೀಗಾಗಿ ವಾಟ್ಸಾಪ್ ಕಾಲ್ ಮತ್ತು ಮೆಸೇಜ್ ಮೂಲಕ ಇದೇ ಪ್ರದೀಪ್ ಬಿಜೋಯ್ ಗೆ ಕರೆ ಮಾಡುತ್ತಿದ್ದ. ಅಜ್ಞಾತ ಸ್ಥಳದಲ್ಲಿ ಕುಳಿತು 100 ಬಿಟ್ ಕಾಯಿನ್ ಗೆ ಪ್ರದೀಪ್ ಡಿಮ್ಯಾಂಡ್ ಮಾಡಿದ್ದ.
ಇನ್ನು ಪ್ರದೀಪ್ ಈ ಕಿಡ್ನ್ಯಾಪ್ ಮಾಡಿಸಿದ ಬಳಿಕ ಎಲ್ಲಿಗೆ ಹೋಗಬೇಕು ಅನ್ನೋದನ್ನ ಮೊದಲೇ ಪ್ಲ್ಯಾನ್ ಮಾಡಿದ್ದ. ಕೋಲಾರ ಮೂಲಕ ಆಂಧ್ರಪ್ರದೇಶಕ್ಕೆ ಹೋಗಿ ಅಲ್ಲಿ ಅಜ್ಞಾತ ಸ್ಥಳದಲ್ಲಿ ಕುಳಿತು ಅಲ್ಲಿಂದ ತಾನು ಈ ಕಿಡ್ನ್ಯಾಪ್‌ನ್ನು ಮುನ್ನೆಡೆಸುವ ಪ್ಲ್ಯಾನ್ ಮಾಡಿದ್ದ. ಆದ್ರಿಂದ ಕೋಲಾರದಲ್ಲಿ ಜಸ್ಟ್ ಮಿಸ್ ಆಗಿದ್ರು ಬಾಲಕನನ್ನು ಆಂಧ್ರ ಗಡಿ ದಾಟಿಸುತ್ತಿದ್ದರು.
ಮಾಸ್ಟರ್ ಮೈಂಡ್ ಪ್ರದೀಪ್‌ಗಾಗಿ ಸಕಲೇಶಪುರದ ಮನೆಗೆ ಹೋಗಿ ಬೆಳ್ತಂಗಡಿ ಪೊಲೀಸರು ಹುಡುಕಾಡಿದ್ದಾರೆ. ಆದ್ರೆ ಪ್ರದೀಪ್ ಕಿಡ್ನಾಪರ್ಸ್ ಬಂಧನ ಆಗುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಕಿಡ್ನ್ಯಾಪ್ ಮಾಸ್ಟರ್ ಮೈಂಡ್ ಪ್ರದೀಪ್ ಸಿಕ್ಕಿ ಬಿದ್ದ ನಂತರ ಮತ್ತಷ್ಟು ಇಂಟ್ರಸ್ಟಿಂಗ್ ವಿಷ್ಯ ಹೊರಬರಲಿದೆ.
ಉಜಿರೆ ಬಾಲಕ ಅನುಭವ್ ಕಿಡ್ನಾಪ್ಗೆ ಸುಪಾರಿ ಕೊಟ್ಟ ವ್ಯಕ್ತಿ ಬೇರೆಯೇ ಇದ್ದಾನೆ -SP ಲಕ್ಷ್ಮೀಪ್ರಸಾದ್