ಎಂಡೋಸಲ್ಫಾನ್ ಪೀಡಿತನಾದ್ರೂ ಬುದ್ಧಿ ಚುರುಕು.. ಏನೇ ಕೇಳಿದ್ರೂ ಫಟಾಫಟ್ ಅಂತ ಉತ್ತರ ಕೊಡ್ತಾನೆ, ಉಲ್ಟಾನೂ ಹೇಳ್ತಾನೆ

ಕೆಲವರಿಗೆ ಎಲ್ಲಾ ಸರಿ ಇದ್ದರೂ ಬುದ್ಧಿ ಶಕ್ತಿ ಕಮ್ಮಿಯಾಗಿರುತ್ತೆ. ಆದ್ರೆ ಆ ವಿಶೇಷ ಬಾಲಕ ಎಂಡೋಸಲ್ಫಾನ್ ಆಗಿದ್ರೂ ವಿಶೇಷ ಶಕ್ತಿ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಲೌಕ್​ಡೌನ್ ಟೈಂನಲ್ಲಿ ಆತನ ಟ್ಯಾಲೆಂಟ್ ಹೊರ ಬಿದ್ದಿದ್ದು, ಮನೆ ಮಾತಾಗಿದ್ದಾನೆ.

ಎಂಡೋಸಲ್ಫಾನ್ ಪೀಡಿತನಾದ್ರೂ ಬುದ್ಧಿ ಚುರುಕು.. ಏನೇ ಕೇಳಿದ್ರೂ ಫಟಾಫಟ್ ಅಂತ ಉತ್ತರ ಕೊಡ್ತಾನೆ, ಉಲ್ಟಾನೂ ಹೇಳ್ತಾನೆ
ಅಬ್ದುಲ್ ಮಥೀನ್
Ayesha Banu

|

Dec 25, 2020 | 3:00 PM

ಕಾರವಾರ: ಈತ ಇಂಗ್ಲಿಷ್ ಪದಗಳ ಸ್ಪೆಲಿಂಗ್ ಉಲ್ಟಾ ಹೇಳೋದ್ರಲ್ಲಿ ಪರಿಣಿತ. ನಿಮಿಷಕ್ಕೆ 40ರಿಂದ 50 ಶಬ್ದಗಳನ್ನ ಫಟಾಫಟ್ ಅಂತಾ ಅರಳು ಹುರಿದಂತೆ ಹೇಳುವ ಚಾಣಾಕ್ಷ. 11 ವರ್ಷ ವಯಸ್ಸಿನ ಅಬ್ದುಲ್ ಮಥೀನ್.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಶಾರದಗಲ್ಲಿಯ ಶೇಖ್ ಸಲೀಮ್ ಮತ್ತು ಮುಮ್ತಾಜ್ ಬೇಗಂ ಅವರ ಮಗ. ಹುಟ್ಟುತ್ತಲೇ ಎಂಡೋಸಲ್ಫಾನ್ ಪೀಡಿತನಾಗಿರುವ ಈ ಬಾಲಕ ಎಂದೂ ಅದನ್ನ ಒಂದು ಶಾಪ ಅಂತಾ ಪರಿಗಣಿಸದೇ ತನ್ನ ಬುದ್ಧಿ ಮೂಲಕ ಎಲ್ಲರ ಗಮನವನ್ನ ತನ್ನತ್ತ ಸೆಳೆಯುತ್ತಿದ್ದಾನೆ. ಈ ಮಥಿನ್, ಇಂಗ್ಲೀಷ್‌ನ ಎಂಥಾ ಕಷ್ಟಕರ ಪದಗಳನ್ನೇ ಕೇಳಲಿ ಅದನ್ನ ಸಲೀಸಾಗಿ ಸ್ಪೆಲ್ ಮಾಡ್ತಾನೆ. ಅಷ್ಟೇ ಅಲ್ಲ ಅದೇ ಸ್ಪೆಲಿಂಗ್ ವರ್ಡ್ ಗಳನ್ನ ಉಲ್ಟಾ ಕೂಡ ಹೇಳುತ್ತಾನೆ.

ಇನ್ನು ಈತನ ಪಾಲಕರಿಗೆ ಮೊದಲು ಈತನ ವಿಶಿಷ್ಟತೆ ಬಗ್ಗೆ ಗೊತ್ತಿರಲಿಲ್ಲ. ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಆದ ಲಾಕ್​ಡೌನ್ ವೇಳೆ ಪ್ರತಿದಿನ ಸಂಜೆ ತಂದೆ ಈತನನ್ನ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದರು. ಆಗ ರಸ್ತೆ ಬದಿಯ ಅಂಗಡಿಗಳ ಬೋರ್ಡುಗಳನ್ನ ಓದುತ್ತಿದ್ದ ಮಥಿನ್ ಉಲ್ಟಾ ಹೇಳಲು ಪ್ರಾರಂಭಿಸಿದನಂತೆ . ನಂತರ ಈತನ ಬುದ್ಧಿ ಶಕ್ತಿ ಬಗ್ಗೆ ಗೊತ್ತಾಗಿದೆ.

ಒಟ್ನಲ್ಲಿ ಈ ಬಾಲಕನಿಗೆ ಎಂಡೋಸಲ್ಪಾನ್ ಬಾಧಿಸಿದ್ರೂ ತನ್ನ ಬುದ್ಧಿ ಶಕ್ತಿ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಈತನ ಈ ಪ್ರತಿಭೆಗೆ ಮತ್ತಷ್ಟು ಬೆಂಬಲ ಸಿಕ್ಕಿ ಮತ್ತಷ್ಟು ಸಾಧನೆ ಮಾಡಲಿ ಅನ್ನೋದೆ ಎಲ್ಲರ ಆಶಯ.

4 ವರ್ಷದ ಪುಟ್ಟ ಪೋರನಿಗೆ ಕ್ರೀಡೆ ಬಗ್ಗೆ ಎಲ್ಲಿಲ್ಲದ ಆಸಕ್ತಿ, ನಿತ್ಯ ಬೆಳಗ್ಗೆ 8 ಕಿಲೋಮೀಟರ್ ರನ್ನಿಂಗ್, ಜಾಗಿಂಗ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada