AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ತೂರು ಕೋಡಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡಲು ನಿರಾಕರಣೆ: ಶಂಕರ್​ ಬಿದರಿ ಆಕ್ರೋಶ

ಹಿರಿಯ IPS ಅಧಿಕಾರಿ ಮಧುಕರ್ ಶೆಟ್ಟಿ ನಿಧನದ ನಂತರ ನಗರದ ವರ್ತೂರು ಕೋಡಿ ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡಲು ಪಾಲಿಕೆಯಲ್ಲಿ ನಿರ್ಧರಿಸಲಾಗಿತ್ತು. ಸರ್ಕಾರ ಇದಕ್ಕೆ ಒಪ್ಪಿರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ವರ್ತೂರು ಕೋಡಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರಿಡಲು ನಿರಾಕರಣೆ: ಶಂಕರ್​ ಬಿದರಿ ಆಕ್ರೋಶ
ಮಧುಕರ್ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 5:03 PM

ಬೆಂಗಳೂರು: ವರ್ತೂರು ಕೋಡಿ ವೃತ್ತಕ್ಕೆ ಮೃತ IPS ಅಧಿಕಾರಿ ದಿ.ಮಧುಕರ್ ಶೆಟ್ಟಿ ಹೆಸರು ನಾಮಕರಣ ಮಾಡುವ ಬಿಬಿಎಂಪಿ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ ಅಸಮಾಧಾನ ಹೊರ ಹಾಕಿದ್ದಾರೆ.

ಮಧುಕರ್​ ಶೆಟ್ಟಿ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದವರು. ಆದರೆ, ಅವರು ಈಗ ನಮ್ಮೊಂದಿಗಿಲ್ಲ. ನನಗೆ ಮಗನಿಗಿಂತಲೂ ಹೆಚ್ಚು. ವರ್ತೂರು ಕೋಡಿ ವೃತ್ತಕ್ಕೆ ಮೃತ IPS ಅಧಿಕಾರಿ ದಿ.ಮಧುಕರ್ ಶೆಟ್ಟಿ ಹೆಸರು ನಾಮಕರಣ ಮಾಡುಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ, ಬಿಬಿಎಂಪಿ ನಿರ್ಣಯಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಬೇಕಿದೆ ಎಂದು ಶಂಕರ್​ ಬಿದರಿ ಹೇಳಿದ್ದಾರೆ.

ಇಂದು ಕರ್ನಾಟಕವನ್ನು ಬಿಜೆಪಿ ಸರ್ಕಾರ ಆಳುತ್ತಿದೆ. ಯಾವುದೇ ರಾಜಕಾರಣಿಯಿಂದಾಗಲೀ ಅಥವಾ ಪಕ್ಷದಿಂದಾಗಲೀ ಮಧುಕರ್​ ಶೆಟ್ಟಿ ಎಂದಿಗೂ ಸಹಾಯ ಕೇಳಿದವರಲ್ಲ. ತಮ್ಮದೇ ಆದ ಬಂಟ್​ ಸಮುದಾಯದ ಬೆಂಬಲ ಬೆಳೆಸಲಿಲ್ಲ. ಆದರೂ ಅವರು ಎಂದೆಂದಿಗೂ ಬಂಟ್ ಸಮುದಾಯವು ಹೆಮ್ಮೆಪಡುವ ಅಧಿಕಾರಿಯಾಗಿ ಉಳಿಯುತ್ತಾರೆ. ಅವರ ಬಂಟ್​ ಸಮುದಾಯ ಸಣ್ಣ ಕಮ್ಯುನಿಟಿ ಆಗಿದೆ ಮತ್ತು ಮತ್ತು ಈಗಿರುವ ರಾಜ್ಯ ಸರ್ಕಾರದಲ್ಲಿ ರಾಜಕೀಯ ದುರ್ಬಲವಾಗಿದೆ, ಎಂದು ಶಂಕರ್​ ಬಿದರಿ ಕಿಡಿಕಾರಿದ್ದಾರೆ.

ಈಗಿರುವ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಬಗ್ಗೆ ಯಾವುದೇ ಕಾಳಜಿ ಮತ್ತು ಗೌರವವಿಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನು ಯಾವಾಗಲೂ ಸ್ಮರಣೆ ಮಾಡುವಂತೆ ನೋಡಿಕೊಳ್ಳುವ ಉದ್ದೇಶ ಈ ಸರ್ಕಾರಕ್ಕೆ ಇಲ್ಲ ಅವರ ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಆಳ್ವಿಕೆ ಮಾಡಿದ್ದ ಮುಖ್ಯಮಂತ್ರಿಗಳಾದ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್​, ಬೊಮ್ಮಾಯಿ ಪ್ರಾಮಾಣಿಕ ಅಧಿಕಾರಿಗಳನ್ನು ಗೌರವಿಸಿದ್ದರು. ಟ್ರಾಫಿಕ್​ ಹೆಡ್​ ಕಾನ್​​ಸ್ಟೇಬಲ್​ ತಿಮ್ಮಯ್ಯ ಹೆಸರನ್ನು ವೃತ್ತವೊಂದಕ್ಕೆ ಇಡುವ ಮನವಿ ಇಟ್ಟಾಗ ಮುಖ್ಯಮಂತ್ರಿ ಎಚ್​​.ಡಿ. ದೇವೇಗೌಡ ಸಮ್ಮತಿ ನೀಡಿದ್ದರು. ಆಗಿನ್ನೂ ತಿಮ್ಮಯ್ಯ ಅವರ ಶವವನ್ನೂ ಸುಟ್ಟಿರಲಿಲ್ಲ ಎಂದು ಶಂಕರ್​ ಬಿದರಿ ಹಳೆಯ ಘಟನೆಗಳನ್ನು ನೆನೆದಿದ್ದಾರೆ.

ಮಧುಕರ್​ ಶೆಟ್ಟಿ ತುಂಬಾನೇ ಒಳ್ಳೆಯವರು. ಮಗ ತಂದೆಗೆ ಎಷ್ಟು ಗೌರವ ನೀಡುತ್ತಾರೋ ಅಷ್ಟೇ ನನಗೂ ನೀಡುತ್ತಿದ್ದರು. ನನಗೆ ಇಂದು ತುಂಬಾನೇ ಬೇಸರವಾಗುತ್ತಿದೆ. ಪ್ರಾಮಾಣಿಕರು ಶೀಘ್ರವೇ ಅಧಿಕಾರಕ್ಕೆ ಬರುತ್ತಾರೆ ಮತ್ತು ಅವರು ಮಧುಕರ್​ ಶೆಟ್ಟಿಗೆ ಗೌರವ ನೀಡುತ್ತಾರೆ ಎನ್ನುವ ವಿಶ್ವಾಸ ನನ್ನದು ಎಂಬುದು ಶಂಕರ್​ ಬಿದರಿ ಮಾತು.

ಹಿರಿಯ IPS ಅಧಿಕಾರಿ ಮಧುಕರ್ ಶೆಟ್ಟಿ ನಿಧನದ ನಂತರ ನಗರದ ವರ್ತೂರು ಕೋಡಿ ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡಲು ಪಾಲಿಕೆಯಲ್ಲಿ ನಿರ್ಧರಿಸಲಾಗಿತ್ತು. ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಹ ಸಲ್ಲಿಸಿತ್ತು. ಆದರೆ, ಇದೀಗ ನಗರಾಭಿವೃದ್ಧಿ ಇಲಾಖೆಯಿಂದ ಪತ್ರ ಬಂದಿದ್ದು, ಬಿಬಿಎಂಪಿ ನಿರ್ಣಯಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ #JusticeForMadhukarShetty ಎನ್ನುವ ಹ್ಯಾಶ್​ಟ್ಯಾಗ್​ ಬಳಸಿ ಜನರು ಟ್ವೀಟ್​ ಮಾಡುತ್ತಿದ್ದಾರೆ.

ವರ್ತೂರು ಕೋಡಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರು: ಒಪ್ಪಿಗೆ ನೀಡಲು ಸರ್ಕಾರ ನಕಾರ