ರಾಜ್ಯ ಇತಿಹಾಸದಲ್ಲೇ ಶಾಸಕ ಪ್ರದೀಪ್ ಈಶ್ವರ್ ವಿನೂತನ ಕಾರ್ಯ: ಮತದಾರರ ಮನೆ ಬಾಗಿಲಿಗೆ ಆಫೀಸರ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2024 | 9:10 PM

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್​ ಕಳೆದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಲಾಟರಿ ಹೊಡೆದಂತೆ ನಿರೀಕ್ಷೆ ಮೀರಿ ಬಹುಮತಗಳಿಂದ ಗೆದ್ದಿದ್ದಾರೆ. ಒಂದಿಲ್ಲೊಂದು ರೀತಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮುಂದಾಗಿದ್ದಾರೆ. ಇದೀಗ ಮತದಾರರ ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಕಂದು ಕೊರತೆ ಆಲಿಸಿದ್ದಾರೆ.

ರಾಜ್ಯ ಇತಿಹಾಸದಲ್ಲೇ ಶಾಸಕ ಪ್ರದೀಪ್ ಈಶ್ವರ್ ವಿನೂತನ ಕಾರ್ಯ: ಮತದಾರರ ಮನೆ ಬಾಗಿಲಿಗೆ ಆಫೀಸರ್
ರಾಜ್ಯ ಇತಿಹಾಸದಲ್ಲೇ ಶಾಸಕ ಪ್ರದೀಪ್ ಈಶ್ವರ್ ವಿನೂತನ ಕಾರ್ಯ: ಮತದಾರರ ಮನೆ ಬಾಗಿಲಿಗೆ ಆಫೀಸರ್
Follow us on

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 25: ವಿನೂತನ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದ ಶಾಸಕ ಪ್ರದೀಪ್ ಈಶ್ವರ್ (Pradeep Eshwar), ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈಗ ತಾಲೂಕು ಯಂತ್ರಾಂಗವನ್ನೆ ಮತದಾರರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮೇತ ಒಂದೇ ಬಸ್​ನಲ್ಲಿ ಹಳ್ಳಿ -ಹಳ್ಳಿ ಗಲ್ಲಿ- ಗಲ್ಲಿಗಳಿಗೆ ತೆರಳಿ ಸಾರ್ವಜನಿಕರ ಕುಂದು ಕೊರತೆ ನಿವಾರಿಸುವ ಕೆಲಸ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್​ ಕಳೆದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಲಾಟರಿ ಹೊಡೆದಂತೆ ನಿರೀಕ್ಷೆ ಮೀರಿ ಬಹುಮತಗಳಿಂದ ಗೆದ್ದಿದ್ದಾರೆ. ಒಂದಿಲ್ಲೊಂದು ರೀತಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮುಂದಾಗಿದ್ದಾರೆ. ತಾಲೂಕು ಯಂತ್ರಾಂಗದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕರೆದುಕೊಂಡು ಒಂದೇ ಬಸ್​ನಲ್ಲಿ ಮತದಾರರ ಮನೆ ತಲುಪುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೆ.ಸುಧಾಕರ್ 7-8 ಕೋಟಿ ರೂ. ಖರ್ಚು ಮಾಡಿ ಕಾಂಗ್ರೆಸ್​​ ಸದಸ್ಯರನ್ನು ಖರೀದಿಸಿದ್ದಾರೆ: ಶಾಸಕ ಪ್ರದೀಪ್ ಈಶ್ವರ್

ಪ್ರಥಮ ದಿನವಾದ ಇಂದು ಚಿಕ್ಕಬಳಾಪುರ ತಾಲೂಕು ಕಚೇರಿಯಿಂದ ಬಸ್​ವೊಂದರಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆದುಕೊಂಡು ತಮ್ಮ ಕ್ಷೇತ್ರದ ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರ‍್ಲಹಳ್ಳಿ, ಸುಬ್ಬರಾಯನಹಳ್ಳಿ, ಕಂಗಾನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ತೆರಳಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ್ದಾರೆ.

ಇನ್ನೂ ತಮ್ಮೂರಿಗೆ ಬಂದ ಶಾಸಕರು ಹಾಗೂ ಬಸ್​ನ್ನು ಸ್ವಾಗತಿಸಿದ ಸ್ಥಳಿಯರು, ತಮ್ಮೂರಿನ ಸಮಸ್ಯೆಗಳು, ವೈಯಕ್ತಿಕ ಸಮಸ್ಯೆಗಳು, ಜಮೀನು ಮಂಜೂರು, ರಸ್ತೆ, ಕುಡಿಯುವ ನೀರು, ಬಸ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ. ಕುರ‍್ಲಹಳ್ಳಿ ಸುಬ್ಬರಾಯನಹಳ್ಳಿ ಕಂಗಾನಹಳಿ ಗ್ರಾಮಗಳಿಗೆ ಸೂಕ್ತ ರಸ್ತೆ ಇಲ್ಲದಿರುವುದನ್ನು ಕಂಡ ಶಾಸಕರು, ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಶಕ್ತಿ ಮೀರಿ ರಸ್ತೆ ಮಾಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಶಾಸಕ ಪ್ರದೀಪ್‌ ಈಶ್ವರ್‌ಗೆ ಟಾಲಿವುಡ್‌ನಲ್ಲಿ ಬೇಡಿಕೆ, ಚಿರಂಜೀವಿ ಜೊತೆ ನಟಿಸಲು ಆಫರ್

ಕಚೇರಿಗೆ ಬರುವ ಸಾರ್ವಜನಿಕರ ಜೊತೆ ಅಧಿಕಾರಿಗಳು ಮಾತನಾಡುವುದೆ ಕಷ್ಟ, ಇಂಥದರಲ್ಲಿ ಶಾಸಕರು ಅಧಿಕಾರಿಗಳ ಕಿವಿ ಹಿಂಡಿ, ಮತದಾರರ ಮನೆ ಬಾಗಿಲಿಗೆ ಕರೆದುಕೊಂಡು ಹೋಗುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.