ಹುಬ್ಬಳ್ಳಿ: ಪ್ರೇಯಸಿ ತಾಯಿಗೆ ಚಾಕು ಹಾಕಿದ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನಿಗೆ ಗುಂಡೇಟು

ಹುಬ್ಬಳ್ಳಿ(hubballi)ಯ ಲೋಹಿಯಾನಗರದಲ್ಲಿ ಯುವಕನೊಬ್ಬ ಪ್ರೇಯಸಿ ತಾಯಿಗೆ ಚಾಕು ಇರಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹೇಶ್​ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆ ಕುರಿತು ವಿಚಾರಣೆ ನಡೆಸುವ ವೇಳೆ ಪೊಲೀಸ್​ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿ ಎಸ್ಕೇಫ್​ ಆಗಲು ಪ್ರಯತ್ನಿಸಿದ್ದ. ಈ ಹಿನ್ನಲೆ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರು ಅವರು ಆತನ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಈ ಕುರಿತು ವಿವರ ಇಲ್ಲಿದೆ.

ಹುಬ್ಬಳ್ಳಿ: ಪ್ರೇಯಸಿ ತಾಯಿಗೆ ಚಾಕು ಹಾಕಿದ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನಿಗೆ ಗುಂಡೇಟು
ಆರೋಪಿ ಮಹೇಶ್
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 25, 2024 | 9:31 PM

ಹುಬ್ಬಳ್ಳಿ, ಸೆ.25: ಹುಬ್ಬಳ್ಳಿ(hubballi)ಯಲ್ಲಿ ಮಹಿಳೆಗೆ ಚಾಕು ಇರಿದಿದ್ದ ಆರೋಪಿ ಮಹೇಶ್​ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹೌದು, ವಿಚಾರಣೆ ವೇಳೆ‌ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ‌ಗೆ ಯತ್ನಿಸಿ ಪರಾರಿಯಾಗುವಾಗ ಕಾಲಿಗೆ ಗುಂಡೇಟು ಹೊಡೆಯಲಾಗಿದೆ. ಗಾಯಾಳು ಮಹಿಳೆ ನೀಲಾ ಹಂಪಣ್ಣವರ್ ಮಗಳಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಹಿನ್ನಲೆ​ ನೀಲಾ ಅವರು ಮಹೇಶ್​ಗೆ ಬುದ್ಧಿವಾದ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿ ಮಹೇಶ್, ಮಹಿಳೆಗೆ ಚಾಕು ಇರಿದಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳು ಮಹೇಶ್​ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಆರೋಪಿ ಮೇಲೆ ಪೊಲೀಸರು‌ ಫೈರಿಂಗ್ ಮಾಡಿದ್ದಾರೆ. ಹುಬ್ಬಳ್ಳಿಯ ಲೂಹಿಯಾ ನಗರದಲ್ಲಿರುವ ನೀಲಾ ಹಂಪಣ್ಣವರ ಮನೆಗೆ ನುಗ್ಗಿ ಆತ ಚಾಕು ಹಾಕಿದ್ದಾನೆ. ಸಿಕ್ಕ ಸಿಕ್ಕವರಿಗೆ ಬೆದರಿಕೆ ಕೂಡ ಹಾಕಿದ್ದ‌. ಗಾಯಾಳು ನೀಲಾ ಹಂಪಣ್ಣನವರಿಗೆ ಒಟ್ಟು ಐದು ಜನ ಹೆಣ್ಣುಮಕ್ಕಳು ಇದ್ದಾರೆ. ಅವರ ಮಗಳೋರ್ವಳಿಗೆ ಮದುವೆಯಾಗುವಂತೆ ಒತ್ತಾಯ ಮಾಡಿದ್ದ. ಕಳೆದ ಐದು ವರ್ಷದ ಹಿಂದೆ ಇದನ್ನು ಸರಿ ಮಾಡಲಾಗಿತ್ತು.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ: ಬುದ್ಧಿ ಹೇಳಿದ್ದಕ್ಕೆ ಮನೆಗೆ ನುಗ್ಗಿ ಮಹಿಳೆಗೆ ಚಾಕು ಹಾಕಿದ

ಸ್ನೇಹಿತರ ಬಳಿ ಸಾಲ ಪಡೆದು ಚಾಕು ಹಾಕಿ ಎಸ್ಕೇಫ್​ ಆಗಲು ನಿರ್ಧಾರ

ಆದರೆ, ಆರೋಪಿ ಐದು ವರ್ಷದಿಂದ ಅವಳ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದ. ಇಂದು ನೀಲಾ ಹಂಪಣ್ಣವರ್​ ಮನೆಗೆ ನುಗ್ಗಿ ಚಾಕು ಇರಿದಿದ್ದಾನೆ. ಅದೃಷ್ಟವಶಾತ್​ ಪ್ರಾಣಾಪಯದಿಂದ ಪಾರಾಗಿದ್ದಾರೆ. ಆತ ಚಾಕು ಇರಿಯಬೇಕು ಎನ್ನುವ ಉದ್ದೇಶಕ್ಕೆ ಸ್ನೇಹಿತರ ಬಳಿ ಸಾಲ ಕೂಡ ಪಡೆದಿದ್ದ‌. 20 ಸಾವಿರ ಸಾಲ ಪಡೆದುಕೊಂಡು ಚಾಕು ಹಾಕಿ ಪರಾರಿಯಾಗಲು ಮುಂದಾಗಿದ್ದ. ಪೊಲೀಸರು ಅರೆಸ್ಟ್ ಮಾಡಿದಾಗ, ಸ್ನೇಹಿತರನ್ನು ತೋರಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಹಳೇ ಹುಬ್ಬಳ್ಳಿಯ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ಫೈರ್ ಮಾಡಿದ್ದಾರೆ‌. ಪೊಲೀಸರು ಇಷ್ಟು ಅಲರ್ಟ್ ಆಗಿದ್ದರು, ಘಟನೆ ನಡೆದಿದ್ದು ದುರಾದೃಷ್ಟಕರ ಎಂದರು.

ಇನ್ನು ಘಟನೆ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಾಳು ನೀಲಾ ಹಂಪಣ್ಣವರಿಗೆ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್