ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ: ಬುದ್ಧಿ ಹೇಳಿದ್ದಕ್ಕೆ ಮನೆಗೆ ನುಗ್ಗಿ ಮಹಿಳೆಗೆ ಚಾಕು ಹಾಕಿದ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆ ಪ್ರಕರಣವು ದೇಶಾದ್ಯಂತ ಸದ್ದು ಮಾಡಿತ್ತು. ಈ ಘಟನೆಗಳು ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹೌದು, ಯುವಕನೊಬ್ಬನಿಗೆ ತನ್ನ ಮಗಳ ತಂಟೆಗೆ ಬರಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಚಾಕು ಇರಿದು ಪರಾರಿಯಾಗಿದ್ದಾನೆ. ಸಧ್ಯ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ: ಬುದ್ಧಿ ಹೇಳಿದ್ದಕ್ಕೆ ಮನೆಗೆ ನುಗ್ಗಿ ಮಹಿಳೆಗೆ ಚಾಕು ಹಾಕಿದ
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 25, 2024 | 6:45 PM

ಹುಬ್ಬಳ್ಳಿ, ಸೆ.25: ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿ(hubballi)ಯಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಹುಡುಗಿ ಚುಡಾಯಿಸಿದ್ದಕ್ಕೆ ಬುದ್ದಿ ಹೇಳಿದ ಮಹಿಳೆಗೆ ಚಾಕು ಇರಿದು ಪರಾರಿಯಾದ ಘಟನೆ ಹುಬ್ಬಳ್ಳಿಯ ಲೋಹಿಯಾನಗರದಲ್ಲಿ ನಡೆದಿದೆ. ಸಧ್ಯ ಚಾಕು ಇರಿದು ಎಸ್ಕೇಫ್​ ಆಗಿದ್ದ ಆರೋಪಿ ಮಹೇಶ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ನೀಲಾ ಹಂಪಣ್ಣ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ವಿಷಯ ತಿಳಿದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ, ಚಾಕು ಇರಿತಕ್ಕೆ ಒಳಗಾದ ಮಹಿಳೆಯಿಂದ ಮಾಹಿತಿ ಪಡೆಯುತ್ತಿದ್ದಾರೆ.

ಬುದ್ದಿವಾದ ಹೇಳಿದ್ದಕ್ಕೆ ಚಾಕು ಇರಿತ

ಹೌದು, ಹುಡುಗಿಗೆ ಚುಡಾಯಿಸಿದ್ದಕ್ಕೆ ಆರೋಪಿ ಮಹೇಶ್​ಗೆ ಗಾಯಾಳು ಮಹಿಳೆ ನೀಲಾ ಅವರು ಬುದ್ಧಿ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಮಹೇಶ್, ನೀಲಾ ಅವರಿಗೆ ಚಾಕು ಇರಿದು ಪರಾರಿಯಾಗಿದ್ದ. ಕೂಡಲೇ ಆತನನ್ನು ಪತ್ತೆ ಹಚ್ಚಿದ ಪೊಲಿಸರು, ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ನೇಹಾ, ಅಂಜಲಿ ಹತ್ಯೆ ನಂತರವೂ ಹೆಣ್ಮಕ್ಕಳಿಗಿಲ್ಲ ಸುರಕ್ಷತೆ; ಕವಿವಿ ಕ್ಯಾಂಪಸ್​ನಲ್ಲೇ ವಿದ್ಯಾರ್ಥಿನಿ ಭುಜಕ್ಕೆ ಹೊಡೆದು ಹೋದ ಯುವಕ

ಸ್ಪಷ್ಟನೆ ನೀಡಿದ ಕಮೀಷನರ್ ಎನ್ ಶಶಿಕುಮಾರ್

ಈ ಕುರಿತು ಮಾತನಾಡಿದ ಹು-ಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಏಕಾಏಕಿ ಮನೆಗೆ ನುಗ್ಗಿ ನೀಲಾ ಎಂಬ ಮಹಿಳೆಯ ಹೊಟ್ಟೆಯ ಎಡ ಭಾಗಕ್ಕೆ ಚಾಕು ಇರಿದಿದ್ದಾನೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ನೀಲಾ ಹಂಪಣ್ಣವರ ಮಗಳಿಗೆ ಮದುವೆಯಾಗು ಎಂದು ಆರೋಪಿ ಮಹೇಶ್ ಪೀಡಿಸುತ್ತಿದ್ದ. ನಂತರ ಬುದ್ದಿ ಹೇಳಿದ್ದಕ್ಕೆ ಸುಮ್ಮನೆ ಆಗಿದ್ದ.  ಆದರೆ, ಇಂದು (ಬುಧವಾರ) ಸಂಜೆ ನಾಲ್ಕು ಗಂಟೆ ಸುಮಾರಿಗೆ ಮನೆಗೆ ನುಗ್ಗಿ ಚಾಕು ಇರಿದಿದ್ದಾನೆ. ಬಳಿಕ ಮಹೇಶ್​ ಅವರೇ ಹಲ್ಲೆ ಮಾಡಿದ್ದಾರೆ ಎಂದು ಚೀರುತ್ತಾ ಓಡಿ ಹೋಗಿದ್ದ. ಸದ್ಯ ಚಾಕು ಹಾಕಿರುವ ಮಹೇಶ್​ನನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿತ್ತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ