ಪಾದರಾಯನಪುರದಲ್ಲಿ ಸಂಘಟಿತ ಗೂಂಡಾಗಿರಿ: ಶಾಸಕ ಜಮೀರ್ ಗಪ್ ಚುಪ್! ಎಲ್ಲಿದ್ದೀರಾ ಜಮೀರ್ ಖಾನ್?

ಬೆಂಗಳೂರು: ಪಾದರಾಯನಪುರದಲ್ಲಿ ಸಂಘಟಿತ ಗೂಂಡಾಗಿರಿ ನಡೆದಿರುವಾಗ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಎಲ್ಲಿ ಅವಿತಿಟ್ಟುಕೊಂಡಿದ್ದಾರೆ? ಏನು ಮಾಡುತ್ತಿದ್ದಾರೆ? ಪೊಲೀಸರ ಮೇಲೆ ಅಕ್ಷಮ್ಯ ಗೂಂಡಾಗಿರಿ ನಡೆಸಿರುವ ಜನರ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ನೀಡದೆ, ಆ ದುರ್ಬುದ್ಧಿಯ ಜನರಿಗೆ ಬುದ್ಧಿವಾದ ಹೇಳದಷ್ಷು ಅಸಹಾಯಕರಾದರೆ ಜಮೀರ್? ಎಂದು ಬೆಂಗಳೂರಿನ ಜನ ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ. ಖಬರಸ್ತಾನದಲ್ಲಿ ಜಮೀರ್ ಪ್ರತ್ಯಕ್ಷ: ವಾಸ್ತವಾಗಿ ನಿನ್ನೆ ರಾತ್ರಿ ಇದೇ ಜಮೀರ್ ಅಹಮದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಪಾದರಾಯನಪುರದಲ್ಲಿ ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ […]

ಪಾದರಾಯನಪುರದಲ್ಲಿ ಸಂಘಟಿತ ಗೂಂಡಾಗಿರಿ: ಶಾಸಕ ಜಮೀರ್ ಗಪ್ ಚುಪ್! ಎಲ್ಲಿದ್ದೀರಾ ಜಮೀರ್ ಖಾನ್?
ಸಾಧು ಶ್ರೀನಾಥ್​

Updated on: Apr 20, 2020 | 9:14 AM

ಬೆಂಗಳೂರು: ಪಾದರಾಯನಪುರದಲ್ಲಿ ಸಂಘಟಿತ ಗೂಂಡಾಗಿರಿ ನಡೆದಿರುವಾಗ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಎಲ್ಲಿ ಅವಿತಿಟ್ಟುಕೊಂಡಿದ್ದಾರೆ? ಏನು ಮಾಡುತ್ತಿದ್ದಾರೆ? ಪೊಲೀಸರ ಮೇಲೆ ಅಕ್ಷಮ್ಯ ಗೂಂಡಾಗಿರಿ ನಡೆಸಿರುವ ಜನರ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ನೀಡದೆ, ಆ ದುರ್ಬುದ್ಧಿಯ ಜನರಿಗೆ ಬುದ್ಧಿವಾದ ಹೇಳದಷ್ಷು ಅಸಹಾಯಕರಾದರೆ ಜಮೀರ್? ಎಂದು ಬೆಂಗಳೂರಿನ ಜನ ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ.

ಖಬರಸ್ತಾನದಲ್ಲಿ ಜಮೀರ್ ಪ್ರತ್ಯಕ್ಷ:
ವಾಸ್ತವಾಗಿ ನಿನ್ನೆ ರಾತ್ರಿ ಇದೇ ಜಮೀರ್ ಅಹಮದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಪಾದರಾಯನಪುರದಲ್ಲಿ ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜಮೀರ್ ಈ ಕುರಿತು ಒಂದಲ್ಲ ಹತ್ತು ವಿಡಿಯೋ ಚಿತ್ರಗಳನ್ನು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ, ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

ಅದಾದ ಮೇಲೆ ಶಾಸಕ ಜಮೀರ್ ಗಪ್ ಚುಪ್ ಆಗುತ್ತಾರೆ. ಅದೇ ವೇಳೆ ಪಾದರಾಯನಪುರದಲ್ಲಿ ನೂರಾರು ಮಂದಿ ಪೊಲೀಸರ ಮೇಲೆ ಗೂಂಡಾಗಿರಿಗೆ ಇಳಿಯುತ್ತಾರೆ. ಆದರೆ ಇದುವರೆಗೂ ಶಾಸಕ ಜಮೀರ್ ಮಾತ್ರ ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇಷ್ಟೆಲ್ಲಾ ಅನಾಹುತಗಳು ನಡೆದಿದ್ದರೂ ಅವರ ಫೇಸ್ ಬುಕ್ ಸಹ ಸೈಲೆಂಟಾಗಿದೆ! ಬೆಂಗಳೂರಿನ ಜನತೆಯಲ್ಲಿ ಶಾಸಕ ಜಮೀರರ ಈ ನಡುವಳಿಕೆಯು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us