ಲಾಕ್​ಡೌನ್​ನಲ್ಲಿ ಆನ್​ಲೈನ್​ ವ್ಯವಹಾರ ಸ್ಥಗಿತಗೊಳಿಸಲು ಮೊಬೈಲ್ ಅಂಗಡಿ ಮಾಲೀಕರ ಸಂಘದಿಂದ ಸರ್ಕಾರಕ್ಕೆ ಆಗ್ರಹ

ಈಗ ಏನಿದ್ದರೂ ಸ್ಮಾರ್ಟ್ ಫೋನ್​ಗಳ ಜಮಾನ. ಒಂದು ಸ್ಮಾರ್ಟ್ ಫೋನ್ ಕಿಸೆಯಲ್ಲಿ ಇದ್ದರೆ ಸಾಕು ನಮ್ಮ ಬಹುತೇಕ ಕೆಲಸಗಳು ಆಗಿ ಬಿಡುತ್ತವೆ. ಈ ಸ್ಮಾರ್ಟ್ ಫೋನ್​ಗಳ ವ್ಯವಹಾರ ನಡೆಸುವ ಮೂರುವರೆ ಸಾವಿರಕ್ಕೂ ಅಧಿಕ ಶೋ ರೂಮ್​ಗಳು ರಾಜ್ಯದಲ್ಲಿವೆ. ಕೇವಲ ಉಡುಪಿ ಜಿಲ್ಲೆಯಲ್ಲಿ 400ಕ್ಕೂ ಅಧಿಕ ಮೊಬೈಲ್ ಮಳಿಗೆಗಳು ಇವೆ.

ಲಾಕ್​ಡೌನ್​ನಲ್ಲಿ ಆನ್​ಲೈನ್​ ವ್ಯವಹಾರ ಸ್ಥಗಿತಗೊಳಿಸಲು ಮೊಬೈಲ್ ಅಂಗಡಿ ಮಾಲೀಕರ ಸಂಘದಿಂದ ಸರ್ಕಾರಕ್ಕೆ ಆಗ್ರಹ
ಮುಚ್ಚಿರುವ ಅಂಗಡಿಗಳು
Follow us
sandhya thejappa
|

Updated on:Apr 29, 2021 | 2:56 PM

ಉಡುಪಿ: ಕೊರೊನಾ ಸೋಂಕಿನ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊವಿಡ್ ವಿರುದ್ಧ ಹೋರಾಡಲು ಸರ್ಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂನ ಜಾರಿಗೊಳಿಸಿದೆ. ಕಟ್ಟು ನಿಟ್ಟಿನ ನಿಯಮದಿಂದ ಬಹುತೇಕ ಎಲ್ಲವೂ ಬಂದ್ ಆಗಿವೆ. ಈ ಸಾಲಿಗೆ ಮೊಬೈಲ್ ಅಂಗಡಿಗಳು ಸೇರಿವೆ. ಲಾಕ್​ಡೌನ್​ ಕಾರಣಕ್ಕಾಗಿ ಮೊಬೈಲ್ ಅಂಗಡಿಗಳು ಮುಚ್ಚಿದರು ಕೂಡ ಆನ್​ಲೈನ್​ ಸಂಸ್ಥೆಗಳು ವ್ಯವಹಾರ ಮುಂದುವರಿಸಿರುವುದು ಮೊಬೈಲ್ ವ್ಯಾಪಾರಸ್ಥರ ಸಿಟ್ಟಿಗೆ ಕಾರಣವಾಗಿದೆ.

ಈಗ ಏನಿದ್ದರೂ ಸ್ಮಾರ್ಟ್ ಫೋನ್​ಗಳ ಜಮಾನ. ಒಂದು ಸ್ಮಾರ್ಟ್ ಫೋನ್ ಕಿಸೆಯಲ್ಲಿ ಇದ್ದರೆ ಸಾಕು ನಮ್ಮ ಬಹುತೇಕ ಕೆಲಸಗಳು ಆಗಿ ಬಿಡುತ್ತವೆ. ಈ ಸ್ಮಾರ್ಟ್ ಫೋನ್​ಗಳ ವ್ಯವಹಾರ ನಡೆಸುವ ಮೂರುವರೆ ಸಾವಿರಕ್ಕೂ ಅಧಿಕ ಶೋ ರೂಮ್​ಗಳು ರಾಜ್ಯದಲ್ಲಿವೆ. ಕೇವಲ ಉಡುಪಿ ಜಿಲ್ಲೆಯಲ್ಲಿ 400ಕ್ಕೂ ಅಧಿಕ ಮೊಬೈಲ್ ಮಳಿಗೆಗಳು ಇವೆ. ಮೊಬೈಲ್ ಮಾರಾಟ ಮೊಬೈಲ್ ಆಕ್ಸೆಸರಿಸ್​ಗಳು ಮೊಬೈಲ್ ರಿಚಾರ್ಜ್ ಹೀಗೆ ಅನೇಕ ವಿಭಾಗಗಳಲ್ಲಿ ಜನರು ದುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಐದರಿಂದ ಆರು ಸಾವಿರ ಜನರು ಮೊಬೈಲ್ ಉದ್ಯಮವನ್ನೇ ನಂಬಿಕೊಂಡಿದ್ದು, ಇದೀಗ ಲಾಕ್​ಡೌನ್ ಪರಿಣಾಮವಾಗಿ ಉದ್ಯಮ ಕುಸಿದು ಹೋಗಿದೆ. ಆದರೆ ಆನ್​ಲೈನ್​ ಮೂಲಕ ಮೊಬೈಲ್ ವ್ಯಾಪಾರ ಬಾರಿ ಭರಾಟೆಯಿಂದ ಮುಂದುವರೆದಿದೆ.

ರಾಜ್ಯಾದ್ಯಂತ ಮೊಬೈಲ್ ಅಂಗಡಿಗಳನ್ನು ಮುಚ್ಚಿದ್ದರೂ ಕೂಡ ಆನ್​ಲೈನ್​ ಮೂಲಕ ಜನ ಮೊಬೈಲ್ ಖರೀದಿ ಮಾಡುತ್ತಿದ್ದಾರೆ. ಜನರು ಆರ್ಡರ್ ಮಾಡಿದ ಮೊಬೈಲ್​ಗಳನ್ನು ವಿತರಿಸಲು ಡೆಲಿವರಿ ಬಾಯ್ಗ​ಳು ಮನೆ ಮನೆಗೆ ಸಂಚರಿಸುತ್ತಾರೆ. ಹೀಗೆ ಸಂಚರಿಸುವ ಯುವಕರಿಂದ ಸೋಂಕು ಹರಡುವುದಿಲ್ವಾ ಎಂದು ಮೊಬೈಲ್ ಅಂಗಡಿ ಮಾಲೀಕರು ಪ್ರಶ್ನಿಸುತ್ತಿದ್ದಾರೆ. ಕಳೆದ ಬಾರಿ ಲಾಕ್​ಡೌನ್​ ಆದ ಸಮಯದಲ್ಲಿ ಆನ್​ಲೈನ್​ ವ್ಯವಹಾರಗಳಿಗೂ ಕಡಿವಾಣ ಹಾಕಲಾಗಿತ್ತು. ಕೊರೊನಾ ಸೋಂಕು ಮಿತಿಮೀರಿ ಹರಡುತ್ತಿರುವ ಮಹಾರಾಷ್ಟ್ರ, ಗುಜರಾತ್, ದೆಹಲಿ ಮೊದಲಾದ ಕಡೆಗಳಲ್ಲಿ ಆನ್​ಲೈನ್​ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿಯೂ ಆನ್​ಲೈನ್​ ಉದ್ಯಮವನ್ನು ಸ್ಥಗಿತಗೊಳಿಸಬೇಕೆಂದು ಮೊಬೈಲ್ ಅಂಗಡಿ ಮಾಲೀಕರ ಸಂಘ ಸರಕಾರಕ್ಕೆ ಆಗ್ರಹಿಸಿದೆ.

ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಆದರೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಾಕುವ ಕೆಲಸ ಮಾಡಿದೆ. ಸ್ಥಳೀಯ ಅಂಗಡಿಗಳನ್ನು ಮುಚ್ಚಿ ಆನ್​ಲೈನ್​ನಲ್ಲಿ ವ್ಯವಹಾರಕ್ಕೆ ಅವಕಾಶ ನೀಡಿದೆ. ಇದರಿಂದ ಸಣ್ಣ ವ್ಯಾಪಾರಿಗಳು ತೀರಾ ನಷ್ಟವನ್ನು ಅನುಭವಿಸುತ್ತಿವೆ. ಅಂಗಡಿಗಳನ್ನು ಮುಚ್ಚಿಸುವ ಜೊತೆಗೆ ಆನ್​ಲೈನ್​ ವ್ಯವಹಾರಕ್ಕೆ ಅವಕಾಶ ನೀಡುವ ಮೂಲಕ ವಿದೇಶಿ ಕಂಪನಿಗಳಿಗೆ ಪರೋಕ್ಷವಾಗಿ ಸಹಾಯಮಾಡುತ್ತಿದೆ. ಕಳೆದ ಬಾರಿ ಎಲ್ಲವೂ ಬಂದ್ ಆಗಿತ್ತು. ಆದರೆ ಈ ಬಾರಿ ಸಣ್ಣ ವ್ಯಾಪಾರಿಗಳಿಗೆ ನಷ್ಟವಾಗುವ ರೀತಿಯಲ್ಲಿ ಲಾಕ್​ಡೌನ್​ ಜಾರಿಯಾಗಿದೆ. ಇದರಿಂದ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಅಂಗಡಿ ಮಾಲೀಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ

ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೌಲಭ್ಯ ಹೆಚ್ಚಳ, ಖಾಸಗಿ ಆಸ್ಪತ್ರೆಗಳಿಂದ ರೆಮ್​ಡೆಸಿವರ್​ಗೆ ಅನಗತ್ಯ ಬೇಡಿಕೆ: ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ

ಜೀವನದಲ್ಲಿ ಜಿಗುಪ್ಸೆ ಬಂದಿದೆ; ವೈಷ್ಣವಿ ಮುಂದೆ ಅಳಲು ತೋಡಿಕೊಂಡ ಮಂಜು

(Mobile Store Owners Association is urging the government to shut down online business at Lockdown)

Published On - 2:38 pm, Thu, 29 April 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ