ಬೆಂಗಳೂರು: ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದು, ರಾಜ್ಯದಲ್ಲಿನ ಬಹುತೇಕ ಜಲಾಶಯಗಳು ತುಂಬತೊಡಗಿವೆ. ಪ್ರಮುಖ ಜಲಾಶಯಗಳು ತುಂಬಲು ಒಂದೆರಡು ಅಡಿ ನೀರು ಸಾಕು ಎಂಬಂತಹ ಪರಿಸ್ಥಿತಿಯಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕಾವೇರಿ ಕಣಿವೆ ಭಾಗದ ಕೆಆರ್ಎಸ್, ಕಬಿನಿ, ಹೇಮಾವತಿ, ಹಾರಂಗಿ ಮತ್ತು ಜಲ ವಿದ್ಯುತ್ ಅಣೆಕಟ್ಟೆಗಳಾದ ಲಿಂಗನಮಕ್ಕಿ, ಸೂಪಾ ಮತ್ತು ಕೃಷ್ಣಾ ನದಿ ಭಾಗದ ಜಲಾಶಯಗಳಾದ ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ (Karnataka Dams Water Level) ಎಷ್ಟಿದೆ?
ಕಾವೇರಿ ಕಣಿವೆ ಭಾಗದ ಜಲಾಶಯಗಳು:
1) ಕೆಆರ್ಎಸ್ ಜಲಾಶಯ | KRS Dam
ಇಂದಿನ ನೀರಿನ ಮಟ್ಟ: 117.00 ಅಡಿ
ಗರಿಷ್ಠ ಸಾಮರ್ಥ್ಯ: 124.80 ಅಡಿ
2) ಹಾರಂಗಿ ಜಲಾಶಯ | Harangi Dam
ಇಂದಿನ ನೀರಿನ ಮಟ್ಟ: 2855 ಅಡಿ
ಗರಿಷ್ಠ ಸಾಮರ್ಥ್ಯ: 2859 ಅಡಿ
3) ಹೇಮಾವತಿ ಜಲಾಶಯ | Hemavathi Dam
ಇಂದಿನ ನೀರಿನ ಮಟ್ಟ: 2920 ಅಡಿ
ಗರಿಷ್ಠ ಸಾಮರ್ಥ್ಯ: 2922 ಅಡಿ
4) ಕಬಿನಿ ಜಲಾಶಯ | Kabini Dam
ಇಂದಿನ ನೀರಿನ ಮಟ್ಟ: 2281 ಅಡಿ
ಗರಿಷ್ಠ ಸಾಮರ್ಥ್ಯ: 2284 ಅಡಿ
ಜಲ ವಿದ್ಯುತ್ ಅಣೆಕಟ್ಟೆಗಳು:
5) ಲಿಂಗನಮಕ್ಕಿ ಜಲಾಶಯ | Linganamakki Dam
ಇಂದಿನ ನೀರಿನ ಮಟ್ಟ: 1810 ಅಡಿ
ಗರಿಷ್ಠ ಸಾಮರ್ಥ್ಯ: 1819 ಅಡಿ
6) ಸೂಪಾ ಜಲಾಶಯ | Supa Dam
ಇಂದಿನ ನೀರಿನ ಮಟ್ಟ: 554 ಅಡಿ
ಗರಿಷ್ಠ ಸಾಮರ್ಥ್ಯ: 564 ಅಡಿ
ಕೃಷ್ಣಾ ನದಿ ಭಾಗದ ಜಲಾಶಯಗಳು:
7) ತುಂಗಾಭದ್ರಾ ಜಲಾಶಯ | Tungabhadra Dam
ಇಂದಿನ ನೀರಿನ ಮಟ್ಟ: 1632 ಅಡಿ
ಗರಿಷ್ಠ ಸಾಮರ್ಥ್ಯ: 1633 ಅಡಿ
8) ಭದ್ರಾ ಜಲಾಶಯ | Bhadra Dam
ಇಂದಿನ ನೀರಿನ ಮಟ್ಟ: 185 ಅಡಿ
ಗರಿಷ್ಠ ಸಾಮರ್ಥ್ಯ: 186 ಅಡಿ
9) ಮಲಪ್ರಭಾ ಜಲಾಶಯ | Malaprabha Dam
ಇಂದಿನ ನೀರಿನ ಮಟ್ಟ: 2076 ಅಡಿ
ಗರಿಷ್ಠ ಸಾಮರ್ಥ್ಯ: 2079.05 ಅಡಿ
10) ಘಟಪ್ರಭಾ ಜಲಾಶಯ | Ghataprabha Dam
ಇಂದಿನ ನೀರಿನ ಮಟ್ಟ: 2173 ಅಡಿ
ಗರಿಷ್ಠ ಸಾಮರ್ಥ್ಯ: 2175 ಅಡಿ
11) ನಾರಾಯಣಪುರ ಜಲಾಶಯ | Narayanpur Dam
ಇಂದಿನ ನೀರಿನ ಮಟ್ಟ: 492.18 ಮೀಟರ್
ಗರಿಷ್ಠ ಸಾಮರ್ಥ್ಯ: 492.25 ಮೀಟರ್
12) ಆಲಮಟ್ಟಿ ಜಲಾಶಯ | Almatti Dam
ಇಂದಿನ ನೀರಿನ ಮಟ್ಟ: 519 ಮೀಟರ್
ಗರಿಷ್ಠ ಸಾಮರ್ಥ್ಯ: 519.69 ಮೀಟರ್
ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣದಿಂದ ಉತ್ತಮ ಮಳೆ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ. pic.twitter.com/qeHhb8YVaq
— KSNDMC (@KarnatakaSNDMC) August 6, 2021
(Monsoon 2021 Karnataka 12 reservoirs and dams water level as on Aug 7 2021)
Published On - 9:58 am, Sat, 7 August 21