AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿ ವಿಚಾರದಲ್ಲಿ ಗಲಾಟೆ; ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ರೌಡಿ ಶೀಟರ್ ಮಜರ್ ಕೊಲೆ -ಮಹಿಳೆ ಸೇರಿ 4 ಅರೋಪಿಗಳು ಪೊಲೀಸ್​ ವಶಕ್ಕೆ

ಬೆಂಗಳೂರು: ಕುಟುಂಬಗಳ ಮಧ್ಯೆ ದ್ವೇಷ ತಲೆದೋರಿದ್ದು ಅದು ವ್ಯಕ್ತಿಯೊಬ್ಬನ ಕೊನೆಯಲ್ಲಿ ಅಂತ್ಯವಾಗಿದೆ.  ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ರೌಡಿ ಶೀಟರ್ ಕೊಲೆಯಾಗಿದ್ದಾನೆ. ಡಿ.ಜೆ. ಹಳ್ಳಿ ರೌಡಿ ಶೀಟರ್ ಮಜರ್ ಕೊಲೆಯಾದವ ವ್ಯಕ್ತಿ. ಸ್ಥಳಕ್ಕೆ ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಕೊಲೆ ಕೊಲೆಯತ್ನ ಕೇಸ್ ನಲ್ಲಿ ಇಂದು ಹತ್ಯೆಗೀಡಾದ ಮಜರ್ ಅರೋಪಿಯಾಗಿದ್ದ.  ಡಿ.ಜೆ. ಹಳ್ಳಿ ರೌಡಿ ಶೀಟರ್ ಮಜರ್ ಕೊಲೆಯಾದವ ವ್ಯಕ್ತಿ. ಡಿಜೆ ಹಳ್ಳಿ ಇಂದಿರಾ ಕ್ಯಾಂಟೀನ್ ಬಳಿ ಘಟನೆ ನಡೆದಿದೆ. […]

ಹುಡುಗಿ ವಿಚಾರದಲ್ಲಿ ಗಲಾಟೆ; ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ರೌಡಿ ಶೀಟರ್ ಮಜರ್ ಕೊಲೆ -ಮಹಿಳೆ ಸೇರಿ 4 ಅರೋಪಿಗಳು ಪೊಲೀಸ್​ ವಶಕ್ಕೆ
ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸ: ಡಿ.ಜೆ. ಹಳ್ಳಿಯಲ್ಲಿ ರೌಡಿಶೀಟರ್ ಮಜರ್ ಕೊಲೆ
TV9 Web
| Updated By: ಸಾಧು ಶ್ರೀನಾಥ್​|

Updated on:Aug 07, 2021 | 10:31 AM

Share

ಬೆಂಗಳೂರು: ಕುಟುಂಬಗಳ ಮಧ್ಯೆ ದ್ವೇಷ ತಲೆದೋರಿದ್ದು ಅದು ವ್ಯಕ್ತಿಯೊಬ್ಬನ ಕೊನೆಯಲ್ಲಿ ಅಂತ್ಯವಾಗಿದೆ.  ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ರೌಡಿ ಶೀಟರ್ ಕೊಲೆಯಾಗಿದ್ದಾನೆ. ಡಿ.ಜೆ. ಹಳ್ಳಿ ರೌಡಿ ಶೀಟರ್ ಮಜರ್ ಕೊಲೆಯಾದವ ವ್ಯಕ್ತಿ. ಸ್ಥಳಕ್ಕೆ ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಕೊಲೆ ಕೊಲೆಯತ್ನ ಕೇಸ್ ನಲ್ಲಿ ಇಂದು ಹತ್ಯೆಗೀಡಾದ ಮಜರ್ ಅರೋಪಿಯಾಗಿದ್ದ. 

ಡಿ.ಜೆ. ಹಳ್ಳಿ ರೌಡಿ ಶೀಟರ್ ಮಜರ್ ಕೊಲೆಯಾದವ ವ್ಯಕ್ತಿ. ಡಿಜೆ ಹಳ್ಳಿ ಇಂದಿರಾ ಕ್ಯಾಂಟೀನ್ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಶರಣಪ್ಪ ಸಹ ಭೇಟಿ ನೀಡಿದ್ದಾರೆ.

ಬತ್ತಿ ಫೈರೋಜ್ ಮತ್ತು ಆತನ ಹುಡುಗರಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬತ್ತಿ ಫೈರೋಜ್ ಕುಟುಂಬದವರೆಲ್ಲಾ ಸೇರಿ ಮಜರ್ ಗೆ ಹೊಡೆದಿದ್ದಾರೆ. ನಿನ್ನೆ ರಾತ್ರಿ ಎರಡೂ ಕಡೆಯವರು ಗಲಾಟೆ ಮಾಡಿಕೊಂಡಿದ್ದಾರೆ. ನಂತರ ಇಂದು ಬೆಳಗ್ಗೆ ಮನೆಯಲ್ಲಿ ಇದ್ದ ಮಜರ್ ನನ್ನು ಕರೆಯಿಸಿಕೊಂಡಿದ್ದಾರೆ. ಮನೆ ಕಾಂಪೋಂಡ್ ಒಳಗೊಂಡೆ ಸೇರಿಸಿಕೊಂಡು ಹಲ್ಲೆ ಮಾಡಿದ್ದಾರೆ. ಬಳಿಕ, ಮನೆ ಮುಂದೆಯ ರಸ್ತೆಯ ನಡುವೆ ಮಜರ್ ಕೊಲೆಯಾಗಿ ಬಿದ್ದಿದ್ದಾನೆ.

ಫೈರೋಜ್ ಕುಟುಂಬದ ಹುಡುಗಿಯೊಬ್ಬಳ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಪೈರೋಜ್ ಕುಟುಂಬ ಮಜರ್ ಮೇಲೆ ಕೋಪಗೊಂಡಿತ್ತು. ಹೀಗಾಗಿ ಮನೆಯ ಒಳಗೆ ಸೇರಿಸಿಕೊಂಡು ಮನೆಯ ಹೆಂಗಸರು ಮತ್ತು ಗಂಡಸರು ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ. ಡಿಜೆ ಹಳ್ಳಿ ಪೊಲೀಸರು ಅರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಮಹಿಳೆಯರು ಸೇರಿ ನಾಲ್ಕು ಜನ ಅರೋಪಿಗಳನ್ನು ವಶಕ್ಕೆ‌ ಪಡೆದಿದ್ದಾರೆ.

ಮಾಜಿ ಗೃಹ ಸಚಿವರಿಗೆ ಹಾರ ಹಾಕಿ ಜನ್ಮದಿನ ಶುಭಾಶಯ ಕೋರಿದ ರೌಡಿ ಶೀಟರ್, ನೆಲಮಂಗಲದ ಕಡೆ ಹೆಜ್ಜೆ ಹಾಕಿದರಾ ಪರಮೇಶ್ವರ್? (rowdy sheeter mazhar murdered in dj halli bangalore)

Published On - 10:12 am, Sat, 7 August 21