Karnataka Rains: ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆ
ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕು ಪಡೆದುಕೊಂಡಿದೆ, ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡಮ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕು ಪಡೆದುಕೊಂಡಿದೆ, ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡಮ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಹಾಗೆಯೇ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲೂ ಮಳೆಯಾಗಲಿದೆ.
ಕ್ಯಾಸಲ್ರಾಕ್, ಪುತ್ತೂರು, ಕುಂದಾಪುರ, ಗೇರುಸೊಪ್ಪ, ಸಿದ್ದಾಪುರ, ಮಾಣಿ, ಕದ್ರಾ, ಗೇರುಸೊಪ್ಪ, ಶೃಂಗೇರಿ, ಕಾರ್ಕಳ, ಧರ್ಮಸ್ಥಳ, ಸುಳ್ಯ, ಬೆಳ್ತಂಗಡಿ, ಸಿದ್ದಾಪುರ, ಜಯಪುರ, ಮಂಗಳೂರು ವಿಮಾನ ನಿಲ್ದಾಣ, ಕುಮಟಾ, ಬೇಲಿಕೇರಿ, ಕೊಟ್ಟಿಗೆಹಾರ, ಕೊಪ್ಪ, ಕಳಸ, ಲಿಂಗನಮಕ್ಕಿ, ಎಚ್ಎಂಎಸ್, ತಾಳಗುಪ್ಪ, ಮಂಚಿಕೆರೆ, ಶಿರಾಲಿ, ಜೋಯ್ಡಾ, ಗೋಕರ್ಣ, ಶಿರಸಿ, ಮಂಕಿ, ಯಲ್ಲಾಪುರ, ಹೊನ್ನಾವರ, ಉಡುಪಿ, ಮಂಗಳೂರು, ಉಪ್ಪಿನಂಗಡಿ, ಪಣಂಬೂರು, ಕೋಟ, ಲೋಂಡ, ಸೇಡಂ, ಯಡ್ರಾಮಿ, ಸೋಮವಾರಪೇಟೆ, ಶನಿವಾರಸಂತೆ, ಬೆಳೆಹೊನ್ನೂರು, ಕಮ್ಮರಡಿ, ತ್ಯಾಗರ್ತಿ, ಮಂಡಗದ್ದೆ, ಹುಂಚದಕಟ್ಟೆ, ಸಕಲೇಶಪುರ, ಚನ್ನಗಿರಿಯಲ್ಲಿ ಮಳೆಯಾಗಿದೆ.
ಮತ್ತಷ್ಟು ಓದಿ: Karnataka Rains: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಚುರುಕು, ಈ ಪ್ರದೇಶಗಳಲ್ಲಿ ಭಾರಿ ಮಳೆ
ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿದ್ದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ, ಎಚ್ಎಎಲ್ನಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ