ಹರಿಹರದಲ್ಲಿ ನೈತಿಕ ಪೊಲೀಸ್‌ಗಿರಿ; ಯುವಕನನ್ನ ರೂಮ್​ನಲ್ಲಿ ಕೂಡಿ ಹಾಕಿ ಹಲ್ಲೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 08, 2024 | 6:19 PM

ದಾವಣಗೆರೆ(Davanagere) ಜಿಲ್ಲೆಯಲ್ಲಿ ಉತ್ತರ ಭಾರತದ ರೀತಿಯಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕಟ್ಟಿಗೆ ತುಂಡಿನಿಂದ ಯುವಕನಿಗೆ ಹೊಡೆದು ಹಲ್ಲೆ ಮಾಡಿ, ನಂತರ ತಲೆ ಬೊಳಿಸಿ ಹಿಂಸೆ ನೀಡಿದ ವಿಡಿಯೋ ವೈರಲ್​ ಆಗಿದೆ.

ಹರಿಹರದಲ್ಲಿ ನೈತಿಕ ಪೊಲೀಸ್‌ಗಿರಿ; ಯುವಕನನ್ನ ರೂಮ್​ನಲ್ಲಿ ಕೂಡಿ ಹಾಕಿ ಹಲ್ಲೆ
ಹರಿಹರದಲ್ಲಿ ನೈತಿಕ ಪೊಲೀಸ್‌ಗಿರಿ
Follow us on

ದಾವಣಗೆರೆ, ಜೂ.08: ಉತ್ತರ ಭಾರತದ ರೀತಿಯಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ದಾವಣಗೆರೆ(Davanagere) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹರಿಹರದ ಕಾಳಿದಾಸ ನಗರದಲ್ಲಿ ಈ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು. ಯುವಕನೊಬ್ಬನನ್ನ ರೂಮ್​ನಲ್ಲಿ ಹಾಕಿ ಎಂಟತ್ತು ಜನರು ಸೇರಿಕೊಂಡು ಯುವಕ ಪರಿ ಪರಿಯಾಗಿ ಬೇಡಿಕೊಂಡರು ಬಿಡದೇ  ಹಲ್ಲೆ ಮಾಡಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ

ಇನ್ನು ಹಲ್ಲೆ ಮಾಡಿದವರು ಹಾಗೂ ಹಲ್ಲೆಗೊಳಗಾದ ಯುವಕ ಒಂದೇ ಕೋಮಿಗೆ ಸೇರಿದವರಾಗಿದ್ದು, ಕಟ್ಟಿಗೆ ತುಂಡಿನಿಂದ ಯುವಕನಿಗೆ ಹೊಡೆದು ಹಲ್ಲೆ ಮಾಡಿ, ನಂತರ ತಲೆ ಬೊಳಿಸಿ ಹಿಂಸೆ ನೀಡಿದ ವಿಡಿಯೋ ವೈರಲ್​ ಆಗಿದೆ.  ಈ ಬಗ್ಗೆ ‌ಪೊಲೀಸರಿಗೆ ಹಲ್ಲೆಗೊಳಗಾದ ಯುವಕ ಅಧಿಕೃತ ದೂರು ನೀಡದ ಹಿನ್ನಲೆ ಇದುವರೆಗೂ ಹಲ್ಲೆಗೆ ನಿಖರ ಕಾರಣ ತಿಳಿದಿಲ್ಲ. ಇದೀಗ ಪ್ರಕರಣದ ಪತ್ತೆಗೆ ಮುಂದಾದ ‌ಹರಿಹರದ ಪೊಲೀಸರು, ಹಲ್ಲೆಗೊಳಗಾದ ಯುವಕನ ವಿಳಾಸ ಶೋಧಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ:ನೈತಿಕ ಪೊಲೀಸ್​ಗಿರಿ ತಡೆಗೆ ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭ

ಹೃದಯಾಘಾತದಿಂದ ಕಂಡಕ್ಟರ್ ಕಂ ಚಾಲಕ ಸಾವು

ಹಾವೇರಿ: ನಗರದ ವಾಯುವ್ಯ ಸಾರಿಗೆ ಬಸ್​ ಡಿಪೋದಲ್ಲಿ ಕರ್ತವ್ಯ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತದಿಂದ ಕಂಡಕ್ಟರ್ ಕಂ ಚಾಲಕ ಕಲ್ಲಪ್ಪ ಬೈಲವಾಡ್(45) ಸಾವನ್ನಪ್ಪಿದ್ದಾರೆ. ಇನ್ನು ಹೃದಯಾಘಾತವಾಗುತ್ತಿದ್ದಂತೆ ಸಿಬ್ಬಂದಿಗಳು ಸೇರಿಕೊಂಡು ಅದೇ ಬಸ್​ನಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Sat, 8 June 24