ಮೈಸೂರು: ಸಹೋದರಿ ಪರ ನ್ಯಾಯ ಕೇಳಲು ತೆರಳಿದ್ದವನಿಗೆ ಇರಿದು ಕೊಂದ ಭಾವ
ಪ್ರತ್ಯೇಕ ಘಟನೆ: ಮೈಸೂರಿನ ಕುವೆಂಪುನಗರ(Kuvempu Nagar)ದ ಐ ಬ್ಲಾಕ್ನಲ್ಲಿ ಸಹೋದರಿ ಪರ ನ್ಯಾಯ ಕೇಳಲು ತೆರಳಿದ್ದವನಿಗೆ ಭಾವನೇ ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದೆ. ಇತ್ತ ಬಸವನಬಾಗೇವಾಡಿ ತಾಲೂಕಿನ ಗುಳಬಾಳ ಬಳಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಮೈಸೂರು, ಜೂ.08: ಸಹೋದರಿ ಪರ ನ್ಯಾಯ ಕೇಳಲು ತೆರಳಿದ್ದವನಿಗೆ ಭಾವನೇ ಚಾಕುವಿನಿಂದ ಇರಿದು ಕೊಂದ ಘಟನೆ ಮೈಸೂರಿನ ಕುವೆಂಪುನಗರ(Kuvempu Nagar)ದ ಐ ಬ್ಲಾಕ್ನಲ್ಲಿ ನಡೆದಿದೆ. ಅಭಿಷೇಕ್(27) ಸಾವನ್ನಪ್ಪಿದ ಯುವಕ. ಬಾಮೈದನಿಗೆ ಚಾಕುವಿನಿಂದ ಇರಿದು ಹತ್ಯೆಗೈದು ಆರೋಪಿ ಭಾವ ರವಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕುವೆಂಪುನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಗುಳಬಾಳ ಬಳಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ದುಷ್ಕರ್ಮಿಗಳು ಯುವಕನನ್ನು ಕೊಂದು ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಜಮೀನಿನಲ್ಲಿ ಮಹಾಂತೇಶ ಬಿರಾದಾರ(25) ಎಂಬುವವರ ಮೃತದೇಹ ಪತ್ತೆಯಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೃತನ ಸಹೋದರ ಮಂಜುನಾಥ್, ಮಹಾಂತೇಶನನ್ನು ಕೊಂದಿದ್ದಾರೆಂದು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಬಸವನಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಎರಡು ಸಾವಿರ ಸಾಲಕ್ಕೆ ನಡೆದೆ ಹೋಯ್ತು ಕೊಲೆ; ಸ್ನೇಹಿತನನ್ನ ಕೊಂದು ಅಪಘಾತದ ಕಥೆ ಕಟ್ಟಿದರು
ಆಟೋ ಪಲ್ಟಿಯಾಗಿ ಆಟೋದಲ್ಲಿದ್ದ ಓರ್ವ ಸಾವು
ಕೋಲಾರ: ಮಾಲೂರು ತಾಲೂಕಿನ ಅಂಚೆ ಮುಸ್ಕೂರು ಗ್ರಾಮದ ಬಳಿ ಆಟೋ ಪಲ್ಟಿಯಾಗಿ ವೃದ್ಧನೋರ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ 6 ಜನರಿಗೆ ಗಾಯವಾಗಿದ್ದು, ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಟ್ಟಕೋಡಿ ಗ್ರಾಮದ ಚಿನ್ನಪ್ಪ(70) ಮೃತ ದುರ್ದೈವಿ. ಘಟನೆಗೆ ಕುಡಿದು ವಾಹನ ಚಾಲನೆ ಮಾಡಿದ್ದೇ ಕಾರಣ ಎನ್ನಲಾಗಿದೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ