ಹಾವೇರಿ: ಗ್ಯಾಂಗ್ ರೇಪ್ ಪ್ರಕರಣವಾಗಿ ಬದಲಾದ ಹಾನಗಲ್ ನೈತಿಕ ಪೊಲೀಸ್ಗಿರಿ ಕೇಸ್
ಹಾನಗಲ್ನಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣ ಇದೀಗ ಗ್ಯಾಂಗ್ ರೇಪ್ ಅಡಿ ಕೇಸ್ ದಾಖಲಾಗಿದೆ. ನ್ಯಾಯಾಧೀಶರ ಮುಂದೆ ಸಂತ್ರಸ್ತೆ 164 ಹೇಳಿಕೆ ನೀಡದ ಬಳಿಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ನೈತಿಕ ಪೊಲೀಸ್ಗಿರಿ ನಡೆಸಿದ್ದ ಆರೋಪಿಗಳ ವಿರುದ್ಧ ಈಗ ಪೊಲೀಸರು ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾವೇರಿ, ಜನವರಿ 11: ಜಿಲ್ಲೆಯ ಹಾನಗಲ್ನಲ್ಲಿ ನೈತಿಕ ಪೊಲೀಸ್ಗಿರಿ (Moral Police) ಪ್ರಕರಣ ಇದೀಗ ಗ್ಯಾಂಗ್ ರೇಪ್ ಅಡಿ ಕೇಸ್ ದಾಖಲಾಗಿದೆ. ನ್ಯಾಯಾಧೀಶರ ಮುಂದೆ ಸಂತ್ರಸ್ತೆ 164 ಹೇಳಿಕೆ ನೀಡದ ಬಳಿಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ನೈತಿಕ ಪೊಲೀಸ್ಗಿರಿ ನಡೆಸಿದ್ದ ಆರೋಪಿಗಳ ವಿರುದ್ಧ ಈಗ ಪೊಲೀಸರು ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಂದು ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ.
ಅಫ್ತಾಬ್, ಮಾದರಸಾಬ್, ಅಬ್ದುಲ್ ಖಾದರ್ನನ್ನು ಹಾನಗಲ್ನ CJ&JMFC ಕೋರ್ಟ್ಗೆ ಪೊಲೀಸರು ಹಾಜರುಪಡಿಸಿದ್ದು, ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿ, ಜಡ್ಜ್ ಅನಿತಾ ಆದೇಶ ಹೊರಡಿಸಿದ್ದಾರೆ. ಕೆರೆಮತ್ತಿಹಳ್ಳಿಯ ಸಬ್ ಜೈಲಿಗೆ ಮೂವರು ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಗ್ಯಾಂಗ್ರೇಪ್ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ: ಎಸ್ಪಿ ಅಂಶುಕುಮಾರ್
ಎಸ್ಪಿ ಅಂಶುಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ತೆ ಸಿಆರ್ಪಿಸಿ ಸೆಕ್ಷನ್ 164ರಡಿ ನ್ಯಾಯಾಧೀಶರು ಎದುರು ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಸಂತ್ರಸ್ತೆ ಹೇಳಿಕೆ ಪ್ರಕಾರ ಐಪಿಸಿ ಸೆಕ್ಷನ್ 376D ಸೇರಿಸುತ್ತೇವೆ. ಗ್ಯಾಂಗ್ರೇಪ್ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. ಸಂತ್ರಸ್ತ ಮಹಿಳೆಗೆ ಸೂಕ್ತ ರಕ್ಷಣೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್; ಗ್ಯಾಂಗ್ ರೇಪ್ ಆರೋಪ
ಸಂತ್ರಸ್ತೆ ಹೇಳಿಕೆಯಲ್ಲಿ 7 ಜನರ ವಿರುದ್ಧ ಆರೋಪವಿದೆ. ಮೂವರನ್ನು ಬಂಧಿಸಲಾಗಿದೆ, ಉಳಿದವರನ್ನೂ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.
ನಿನ್ನೆ ಸಂತ್ರಸ್ಥೆಯ 161 ಹೇಳಿಕೆಯಲ್ಲಿ ಯಾವುದೇ ಗ್ಯಾಂಗ್ ರೇಪ್ ಆಗಿಲ್ಲ ಎಂದು ಹೇಳಿದ್ದರು. ಲಿಖಿತ ಹೇಳಿಕೆ ಕೂಡ ಮಾಡಿದ್ದೇವೆ. ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ನಿನ್ನೆವರೆಗೂ ರೇಪ್ ಆಗಿದೆ ಅಂತ ಆರೋಪ ಮಾಡಿಲ್ಲ. ಹೇಳಿಕೆಯಲ್ಲಿ ಬಂದಿಲ್ಲ. ಮ್ಯಾಜಿಸ್ಟ್ರೇಟ್ ಮುಂದೆ ಇಂದು 164 ಸ್ಟೇಟ್ಮೆಂಟ್ ಕೂಡ ಮಾಡಲಾಗುತ್ತೆ. ಮ್ಯಾಜಿಸ್ಟ್ರೇಟ್ ಮುಂದೆ ಏನು ಹೇಳುತ್ತಾರೆ ಅದರ ಮೇಲೆ ತನಿಖೆ ಮಾಡಲಾಗತ್ತೆ. ನಿನ್ನೆ ತನಕ ಅತ್ಯಾಚಾರ ಅಂತ ನಮಗೆ ಹೇಳಿಲ್ಲ ಎಂದು ಹೇಳಿದ್ದರು.
ವರದಿ: ರವಿ ಹೂಗಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.