ಯಾದಗಿರಿಗೆ ಕಾಲಿಟ್ಟ ನೈತಿಕ್​ ಪೊಲೀಸ್​​​ಗಿರಿ: ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಬಜರಂಗದಳ ಮುಖಂಡರು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2024 | 11:28 AM

ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಬಜರಂಗದಳ ಮುಖಂಡರು ಯುವಕನಿಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆ ಮೂಲಕ ಕರಾವಳಿ ಬಳಿಕ ಇದೀಗ ಯಾದಗಿರಿಯಲ್ಲೂ ನೈತಿಕ್​ ಪೊಲೀಸ್​​​ಗಿರಿ ಶುರುವಾಗಿದೆ. ಸದ್ಯ ನಗರ ಠಾಣೆಯಲ್ಲಿ 9 ಜನರ ವಿರುದ್ಧ ದೂರು ದಾಖಲಾಗಿದೆ.

ಯಾದಗಿರಿಗೆ ಕಾಲಿಟ್ಟ ನೈತಿಕ್​ ಪೊಲೀಸ್​​​ಗಿರಿ: ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಬಜರಂಗದಳ ಮುಖಂಡರು
ಪ್ರಾತಿನಿಧಿಕ ಚಿತ್ರ
Follow us on

ಯಾದಗಿರಿ, ಮಾರ್ಚ್​ 20: ಕರಾವಳಿ ಬಳಿಕ ಇದೀಗ ಯಾದಗಿರಿಯಲ್ಲೂ ನೈತಿಕ್​ ಪೊಲೀಸ್​​​ಗಿರಿ (Moral Policing)  ಶುರುವಾಗಿದೆ. ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಬಜರಂಗದಳ ಮುಖಂಡರು ಯುವಕನಿಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಿವಕುಮಾರ್, ತಾಯಪ್ಪ, ಮಲ್ಲು, ಅಂಬರೀಶ್ ಸೇರಿ 9 ಜನರಿಂದ ಹಲ್ಲೆ ಮಾಡಲಾಗಿದ್ದು, ನಗರ ಠಾಣೆಯಲ್ಲಿ 9 ಜನರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 307, 323, 341, 342, 363, 504 ಹಾಗೂ 506ರ ಅಡಿ ಪ್ರಕರಣ ದಾಖಲಾಗಿದೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ನಡೆದಿದ್ದೇನು?

ಕಾಲೇಜಿನಿಂದ ಮನೆಗೆ ಬರುತ್ತಿದ್ದ ವೇಳೆ ನಗರದ ಗೋಗಿ ಮೊಹಲ್ಲಾ ನಿವಾಸಿ ವಾಹಿದ್​​ ಎಂಬಾತನನ್ನು ಅಪಹರಿಸಲಾಗಿದೆ. 5 ಗಂಟೆ ಕಾಲ ಕೋಣೆಯಲ್ಲಿ ಕೂಡಿ ಹಾಕಿ ವಾಹಿದ್ ಮೇಲೆ ಹಲ್ಲೆ ಮಾಡಿದ್ದಾರೆ. ಬೆನ್ನಿಗೆ ಬಾಸುಂಡೆ ಬರುವ ಹಾಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್; ಗ್ಯಾಂಗ್ ರೇಪ್ ಆರೋಪ

ಹೊಟ್ಟೆಗೆ ಚಾಕು ಹಾಕಿ ಕೊಲೆ ಮಾಡಲು ಗ್ಯಾಂಗ್​​ ಯತ್ನಿಸಿದ್ದು, ತಪ್ಪಾಗಿದೆ ಅಂತ ಕಾಲಿಗೆ ಬಿದ್ದು ಯುವಕ ಜೀವ ಉಳಿಸಿಕೊಂಡು ಬಂದಿದ್ದಾನೆ. ಯುವತಿಗೆ ಹಾಗೂ ಹಲ್ಲೆ ಮಾಡಿದ ಗ್ಯಾಂಗ್​​ಗೆ ಯಾವುದೇ ಸಂಬಂಧವಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಎರಡನೇ ಬಾರಿ ನಡೆದ ನೈತಿಕ ಪೊಲೀಸ್ ಗಿರಿ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ವಿವೇಕನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದ ಅನ್ಯಕೋಮಿನ ಯುವಕ ಹಾಗೂ ಯುವತಿ ಚಿಂತಾಮಣಿ ನಗರದ ಮೆಹಬೂಬ್ ನಗರದಲ್ಲಿ ತಿರುಗಾಡುತಿದ್ದ ವೇಳೆ ಅನ್ಯಕೋಮಿನ ಯುವಕರು, ಅವರಿಬ್ಬರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ಪ್ರದರ್ಶನ ತೋರಿ ದೌರ್ಜನ್ಯ ಎಸಗಿದ್ದ ಘಟನೆ ಚಿಂತಾಮಣಿ ನಗರದ ಮೆಹಬೂಬ್ ನಗರದಲ್ಲಿ ಇತ್ತೀಚೆಗೆ ನಡೆದಿತ್ತು.

ಇದನ್ನೂ ಓದಿ: ಮಂಗಳೂರಿನಲ್ಲಿ ಮುಂದುವರೆದ ನೈತಿಕ ಪೊಲೀಸ್​ಗಿರಿ: ಅನ್ಯ ಕೋಮಿನ ಯುವತಿಯೊಂದಿಗೆ ತಿರುಗಾಡುತ್ತಿದ್ದ ಯುವಕನಿಗೆ ಥಳಿತ

ನಾವಿಬ್ಬರು ಸ್ನೇಹಿತರು ಎಂದು ಅಂಗಲಾಚಿ ಬೇಡಿಕೊಂಡರೂ ಬಿಡದೆ ಅನ್ಯಕೋಮಿನ ಯುವಕರ ಗುಂಪು, ಯುವಕ -ಯುವತಿ ಮೇಲೆ ದಾಂದಲೆ ನಡೆಸಿ ಹಲ್ಲೆಗೆ ಯತ್ನಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.