
ಚಾಮರಾಜನಗರ: ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನ ಚುರುಕುಗೊಂಡಿದೆ. ಮತ ಚಲಾಯಿಸಲು ಮತಗಟ್ಟೆಯತ್ತ ಶತಾಯುಷಿ ವೃದ್ಧೆಯರು ತಮ್ಮ ಕುಟುಂಬದ ಸದಸ್ಯರ ಸಹಾಯದಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ನಡೆಯಲಾಗದಿದ್ದರೂ ಸಂಬಂಧಿಕರನ್ನು ಊರುಗೋಲಾಗಿಸಿಕೊಂಡು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
101 ವರ್ಷದ ಶತಾಯುಷಿ ವೃದ್ಧೆಯಿಂದ ಮತದಾನ
101 ವರ್ಷದ ಶತಾಯುಷಿ ವೃದ್ಧೆ ಮುದ್ದಮ್ಮ ಚಾಮರಾಜನಗರ ವಿಧಾನ ಸಭಾ ವ್ಯಾಪ್ತಿಯ ಮಲ್ಲಯ್ಯನಪುರ ಗ್ರಾಮದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ವೃದ್ಧೆಯನ್ನು ವ್ಹೀಲ್ ಚೇರ್ ಮೇಲೆ ಕರೆದು ಕೊಂಡು ಬಂದು ಮತ ಚಲಾಯಿಸಲು ಸಂಬಂಧಿಕರು ಸಹಾಯ ಮಾಡಿದ್ದಾರೆ.
ಮತ ಹಾರಿ ಮಾದರಿಯಾದ ಅಜ್ಜಿ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕನ್ನೇಹಳ್ಳಿಯ ಮತ ಕೇಂದ್ರಕ್ಕೆ ಆಗಮಿಸಿ ಶತಾಯುಷಿ ಅಜ್ಜಿಯೊಬ್ಬರು ಮತ ಹಾಕಿದ್ದಾರೆ. ತಮ್ಮ ಕುಟುಂಬ ಸದಸ್ಯರ ಜೊತೆ ಅಜ್ಜಿ ಜಾನಕಿ ಮಾಸ್ಕ್ ಹಾಕಿಕೊಂಡು ಮತಗಟ್ಟೆಗೆ ನಡೆದುಕೊಂಡು ಬಂದು ಮತ ಚಲಾಯಿಸಿದ್ದಾರೆ. ನೂರು ವರ್ಷ ದಾಟಿದ್ರೂ ಮತ ಚಲಾಯಿಸಿ ಯುವಕರಿಗೆ ಮಾದರಿಯಾದ ಅಜ್ಜಿ.
ಯಾರ ಸಹಾಯವಿಲ್ಲದೆ ಮತಗಟ್ಟೆಗೆ ಬಂದು ಮತ ಹಾಕಿದ ಅಜ್ಜಿ
ಇನ್ನು ಕೋಲಾರದಲ್ಲಿ 90 ವರ್ಷದ ವೃದ್ಧೆಯೊಬ್ಬರು ಉತ್ಸಾಹದಿಂದ ಬಂದು ಮತ ಚಲಾಯಿಸಿದ್ದಾರೆ. 90 ವರ್ಷದ ಸಾಕಮ್ಮ ಯಾರ ಸಹಾಯವಿಲ್ಲದೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಈ ವೇಳೆ ಅಭ್ಯರ್ಥಿಗಳು ಮತದಾರರಿಗೆ ಎಲೆ ಅಡಿಕೆ ಹಂಚಿದ್ರು.
ಮೈ ಕೊರೆಯುವ ಚಳಿಯಲ್ಲಿ ನಡುಗುತ್ತಲೇ ಮತದಾನ ಮಾಡಿದ್ರು
ಚಿತ್ರದುರ್ಗದಲ್ಲೂ ಇದೇ ರೀತಿ ಮಠದಕುರುಬರಹಟ್ಟಿ ಮತಗಟ್ಟೆಗೆ 95ವರ್ಷದ ತಿಪ್ಪಮ್ಮ ಆಗಮಿಸಿ ಮತ ಚಲಾಯಿಸಿದ್ದಾರೆ. ಅಜ್ಜಿಯನ್ನು ಮೊಮ್ಮಗ ಎತ್ತಿಕೊಂಡು ಬಂದು ಮತ ಚಲಾಯಿಸಲು ಸಹಾಯ ಮಾಡಿದ್ದಾನೆ.