ಕರಾಳ ಕೊರೊನಾದಿಂದ ಸುಮಾರು 300 ಖಾಸಗಿ ಶಾಲೆ ಮಾರಾಟಕ್ಕೆ!

|

Updated on: May 27, 2020 | 2:33 PM

ಬೆಂಗಳೂರು: ಕೊರೊನಾ ಸೋಂಕು ರಾಜ್ಯದಲ್ಲಿ ಅನೇಕ ಚಿತ್ರವಿಚಿತ್ರ ತೊಂದರೆಗಳನ್ನು ಸೃಷ್ಟಿಸುತ್ತಿದೆ. ಕೊರೊನಾ ಕರಾಳತೆಗೆ ಎಲ್ಲಾ ಕ್ಷೇತ್ರಗಳು ನಲುಗಿವೆ. ಕೊರೊನಾ ಹೊಡೆತಕ್ಕೆ ಬಂದ್ ಆದ ಶಾಲೆಗಳು ಬಾರ್ ಓಪನ್ ಆದ್ರೂ ತೆರೆದಿಲ್ಲ. ಈ ಮಧ್ಯೆ 300ಕ್ಕೂ ಹೆಚ್ಚು ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ. ಬೆಂಗಳೂರು ನಗರದಲ್ಲಿಯೇ 40ರಿಂದ 50 ಸಾವಿರ ಶಾಲೆಗಳಿವೆ. ಸದ್ಯ ಇರುವ ಪರಿಸ್ಥಿತಿ ನೋಡಿದ್ರೆ ಶಾಲೆಗಳನ್ನು ನಡೆಸುವುದು ಕಷ್ಟವಾಗಿದೆ. ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಕ್ಕೆ ಪೋಷಕರು ಮುಂದೆ ಬರುತ್ತಿಲ್ಲ. ಹೀಗಾಗಿ ಸಿಬ್ಬಂದಿಗೆ […]

ಕರಾಳ ಕೊರೊನಾದಿಂದ ಸುಮಾರು 300 ಖಾಸಗಿ ಶಾಲೆ ಮಾರಾಟಕ್ಕೆ!
ಸಂಗ್ರಹ ಚಿತ್ರ
Follow us on

ಬೆಂಗಳೂರು: ಕೊರೊನಾ ಸೋಂಕು ರಾಜ್ಯದಲ್ಲಿ ಅನೇಕ ಚಿತ್ರವಿಚಿತ್ರ ತೊಂದರೆಗಳನ್ನು ಸೃಷ್ಟಿಸುತ್ತಿದೆ. ಕೊರೊನಾ ಕರಾಳತೆಗೆ ಎಲ್ಲಾ ಕ್ಷೇತ್ರಗಳು ನಲುಗಿವೆ. ಕೊರೊನಾ ಹೊಡೆತಕ್ಕೆ ಬಂದ್ ಆದ ಶಾಲೆಗಳು ಬಾರ್ ಓಪನ್ ಆದ್ರೂ ತೆರೆದಿಲ್ಲ. ಈ ಮಧ್ಯೆ 300ಕ್ಕೂ ಹೆಚ್ಚು ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ. ಬೆಂಗಳೂರು ನಗರದಲ್ಲಿಯೇ 40ರಿಂದ 50 ಸಾವಿರ ಶಾಲೆಗಳಿವೆ. ಸದ್ಯ ಇರುವ ಪರಿಸ್ಥಿತಿ ನೋಡಿದ್ರೆ ಶಾಲೆಗಳನ್ನು ನಡೆಸುವುದು ಕಷ್ಟವಾಗಿದೆ.

ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಕ್ಕೆ ಪೋಷಕರು ಮುಂದೆ ಬರುತ್ತಿಲ್ಲ. ಹೀಗಾಗಿ ಸಿಬ್ಬಂದಿಗೆ ಸಂಬಳ ನೀಡುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಮಾರಾಟಕ್ಕೆ ಮಾಲೀಕರು ಮುಂದಾಗಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ 30ಕ್ಕೂ ಹೆಚ್ಚು ಮಕ್ಕಳು ಇರುವುದಿಲ್ಲ. ನಾವು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಶಾಲೆ ನಡೆಸ್ತೇವೆ. ಈ ಬಗ್ಗೆ ಸರ್ಕಾರಕ್ಕೆ ನಾವು ಮನವಿಯನ್ನು ಸಲ್ಲಿಸಿದ್ದೇವೆ. ಆದರೆ ಸರ್ಕಾರದಿಂದ ನಮಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಶಾಲೆ ಮಾರಾಟಕ್ಕೆ ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಕೌನ್ಸಿಲ್ ಆಫ್ ಪ್ರೀ ಸ್ಕೂಲ್ ಕಾರ್ಯದರ್ಶಿ ಪೃಥ್ವಿ ಬನವಾಸಿ ಹೇಳಿದ್ರು.

Published On - 2:21 pm, Wed, 27 May 20