ಕೊರೊನಾ ಸಂಕಷ್ಟದಲ್ಲೂ ವಿಮ್ಸ್​ ಆಸ್ಪತ್ರೆಯ ಮಹಾ ಯಡವಟ್ಟು!

ಬಳ್ಳಾರಿ: ಮಹಾಮಾರಿ ಕೊರೊನಾ ವಕ್ಕರಿಸಿರುವ ಸಂದರ್ಭದಲ್ಲೂ ವಿಮ್ಸ್ ಆಸ್ಪತ್ರೆ ಮಹಾ ಯಡವಟ್ಟು ಮಾಡಿಕೊಂಡಿದೆ. ಶವಾಗಾರದ ಕೋಲ್ಡ್ ಸ್ಟೋರೇಜ್ ಕೆಟ್ಟಿರುವ ಪರಿಣಾಮ ದೊಡ್ಡ ಅವಾಂತರವಾಗಿದೆ. ವಿಮ್ಸ್ ಶವಗಾರದಲ್ಲಿ ಶವಗಳನ್ನು ಹೊರಗೆ ಇಡೋ ದುಸ್ತಿತಿಗೆ ಬಂದಿದೆ. ಇದು ವಿಮ್ಸ್ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ. ಕೋಲ್ಡ್ ಸ್ಟೋರೇಜ್ ಬಾಕ್ಸ್ ರಿಪೇರಿಗೆ ಕೊಡಲಾಗಿದೆ. ಹಾಗಾಗಿ ಶವಗಳನ್ನು ಕೆಡುವ ಹಾಗೆ ಇಡಬೇಕಂದ್ರೆ ಖಾಸಗಿಯವರಿಗೆ ಹಣ ಕೊಟ್ಟು ಕೋಲ್ಡ್ ಸ್ಟೋರೇಜ್ ಬಾಕ್ಸ್​ ತರಲೇ ಬೇಕೆಂದು ವಿಮ್ಸ್ ವೈದ್ಯರು ಹೇಳುತ್ತಿದ್ದಾರೆ. ಕೊರೋನಾ […]

ಕೊರೊನಾ ಸಂಕಷ್ಟದಲ್ಲೂ ವಿಮ್ಸ್​ ಆಸ್ಪತ್ರೆಯ ಮಹಾ ಯಡವಟ್ಟು!
sadhu srinath

| Edited By:

May 27, 2020 | 3:40 PM

ಬಳ್ಳಾರಿ: ಮಹಾಮಾರಿ ಕೊರೊನಾ ವಕ್ಕರಿಸಿರುವ ಸಂದರ್ಭದಲ್ಲೂ ವಿಮ್ಸ್ ಆಸ್ಪತ್ರೆ ಮಹಾ ಯಡವಟ್ಟು ಮಾಡಿಕೊಂಡಿದೆ. ಶವಾಗಾರದ ಕೋಲ್ಡ್ ಸ್ಟೋರೇಜ್ ಕೆಟ್ಟಿರುವ ಪರಿಣಾಮ ದೊಡ್ಡ ಅವಾಂತರವಾಗಿದೆ. ವಿಮ್ಸ್ ಶವಗಾರದಲ್ಲಿ ಶವಗಳನ್ನು ಹೊರಗೆ ಇಡೋ ದುಸ್ತಿತಿಗೆ ಬಂದಿದೆ. ಇದು ವಿಮ್ಸ್ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.

ಕೋಲ್ಡ್ ಸ್ಟೋರೇಜ್ ಬಾಕ್ಸ್ ರಿಪೇರಿಗೆ ಕೊಡಲಾಗಿದೆ. ಹಾಗಾಗಿ ಶವಗಳನ್ನು ಕೆಡುವ ಹಾಗೆ ಇಡಬೇಕಂದ್ರೆ ಖಾಸಗಿಯವರಿಗೆ ಹಣ ಕೊಟ್ಟು ಕೋಲ್ಡ್ ಸ್ಟೋರೇಜ್ ಬಾಕ್ಸ್​ ತರಲೇ ಬೇಕೆಂದು ವಿಮ್ಸ್ ವೈದ್ಯರು ಹೇಳುತ್ತಿದ್ದಾರೆ.

ಕೊರೋನಾ ಪರೀಕ್ಷೆ ಮಾಡಬೇಕಾದ ಶವಗಳನ್ನು ಕನಿಷ್ಠ ಒಂದರಿಂದ ಎರಡು ದಿನ ಕಾಯ್ದಿರಿಸಿ ಇಡಬೇಕು. ಅವುಗಳನ್ನ ಸೂಕ್ತ ಭದ್ರತೆಯಲ್ಲಿಡೋದು ನಿಯಮ. ವಿಮ್ಸ್​ನಲ್ಲಿ ಎಂಟು ಶವಗಳನ್ನ ಇಡೋ ರೆಪ್ರಿಜರೇಟರ್​ಗಳೂ ಕೆಟ್ಟಿವೆ. ಈಗಾಗಲೇ ಒಂದು ಕೆಟ್ಟಿದ್ದು, ಇದೀಗ ಮತ್ತೊಂದು ಕೂಡ ಕೆಟ್ಟಿದೆ. ಹಾಗಾಗಿ ಶವಗಳನ್ನು ಹೊರಗೆ ಇಡುವ ಪರಿಸ್ಥಿತಿ ಬಂದಿದೆ. ಸದ್ಯ ಶವಗಳನ್ನು ಹೊರಗೆ ಇಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada