ಪ್ರಚಾರಕ್ಕೆ ಪ್ಯಾಕೇಜ್, 1ರೂ ಕೊಟ್ಟಿಲ್ಲ! ಇಂತಹ ಸರ್ಕಾರ ಇರಬೇಕಾ? DKShi
ಬೆಂಗಳೂರು: ಕೊರೊನಾ ಸಂಕಷ್ಟದ ಹೆಸರಲ್ಲಿ ಸರ್ಕಾರ ಪ್ಯಾಕೇಜ್ ಘೋಷಿಸಿ ಒಂದೂವರೆ ತಿಂಗಳಾಯ್ತು. ಆದರೆ ಈವರೆಗೆ ಯಾರಿಗೂ ಒಂದು ರೂಪಾಯಿ ತಲುಪಿಲ್ಲ. ಪ್ರಚಾರಕ್ಕಷ್ಟೇ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘೋಷಿಸಿದ ಮೇಲೆ 1 ರೂಪಾಯಿ ಸಹ ಕೊಡಲಾಗಿಲ್ಲ. ಇಂತಹ ಸರ್ಕಾರ ನಮಗೆ ಬೇಕಾ? ಎಂದೂ ಡಿಕೆಶಿ ಪ್ರಶ್ನಿಸಿದ್ದಾರೆ. ಒಂದು ದಿನ ಕೂಡ ಈ ಸರ್ಕಾರ ಇರಬಾರದು. ಕಾರ್ಮಿಕರ ವಿಚಾರವಾಗಿ ನಾವು ಹಣ ಕೊಡುತ್ತೇವೆ ಅಂದರೂ ತೆಗೆದುಕೊಳ್ಳಲಿಲ್ಲ. ನಾನು, ಸಿದ್ದರಾಮಯ್ಯ ಮನವಿ […]
ಬೆಂಗಳೂರು: ಕೊರೊನಾ ಸಂಕಷ್ಟದ ಹೆಸರಲ್ಲಿ ಸರ್ಕಾರ ಪ್ಯಾಕೇಜ್ ಘೋಷಿಸಿ ಒಂದೂವರೆ ತಿಂಗಳಾಯ್ತು. ಆದರೆ ಈವರೆಗೆ ಯಾರಿಗೂ ಒಂದು ರೂಪಾಯಿ ತಲುಪಿಲ್ಲ. ಪ್ರಚಾರಕ್ಕಷ್ಟೇ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘೋಷಿಸಿದ ಮೇಲೆ 1 ರೂಪಾಯಿ ಸಹ ಕೊಡಲಾಗಿಲ್ಲ. ಇಂತಹ ಸರ್ಕಾರ ನಮಗೆ ಬೇಕಾ? ಎಂದೂ ಡಿಕೆಶಿ ಪ್ರಶ್ನಿಸಿದ್ದಾರೆ. ಒಂದು ದಿನ ಕೂಡ ಈ ಸರ್ಕಾರ ಇರಬಾರದು. ಕಾರ್ಮಿಕರ ವಿಚಾರವಾಗಿ ನಾವು ಹಣ ಕೊಡುತ್ತೇವೆ ಅಂದರೂ ತೆಗೆದುಕೊಳ್ಳಲಿಲ್ಲ. ನಾನು, ಸಿದ್ದರಾಮಯ್ಯ ಮನವಿ ಪತ್ರ ನೀಡಿದ್ರು ಏನು ಮಾಡಲಿಲ್ಲ. ಈಗ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿದರು.
Published On - 2:55 pm, Wed, 27 May 20