‘ತಿರುಪತಿ ಆಸ್ತಿ ಮಾರಾಟ ಮಾಡಿದ್ರೆ ತಂದೆ ರೀತಿಯಲ್ಲೇ ಜಗನ್ ಸಾವು ಖಚಿತ’
ಧಾರವಾಡ: ತಿರುಪತಿ ದೇವಾಲಯದ ಆಸ್ತಿಯನ್ನು ಮಾರಾಟ ಮಾಡಿದ್ರೆ ತಂದೆಯ ರೀತಿಯಲ್ಲೇ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಾಯುತ್ತಾರೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಜಗನ್ ತಂದೆ ರಾಜಶೇಖರ್ ರೆಡ್ಡಿ ಸಹ ಇದೇ ರೀತಿ ಮಾಡಿದ್ರು. ಹಾಗೆ ಮಾಡಿ ಶಾಪಕ್ಕೆ ಒಳಗಾಗಿದ್ದರು. ಆದ್ರೆ ಅವರ ಸಾವಿನ ರಹಸ್ಯ ಈವರೆಗೂ ಯಾರಿಗೂ ತಿಳಿದಿಲ್ಲ. ಆಂಧ್ರ ಸಿಎಂ ಜಗನ್‌ಗೂ ಅದೇ ಗತಿ ಬರುತ್ತದೆ ಎಂದು ತಿರುಪತಿ ದೇವಾಲಯದ ಆಸ್ತಿ ಮಾರಾಟಕ್ಕೆ ಮುತಾಲಿಕ್ ವಿರೋಧಿಸಿದರು. ಜಗನ್ […]
ಧಾರವಾಡ: ತಿರುಪತಿ ದೇವಾಲಯದ ಆಸ್ತಿಯನ್ನು ಮಾರಾಟ ಮಾಡಿದ್ರೆ ತಂದೆಯ ರೀತಿಯಲ್ಲೇ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಾಯುತ್ತಾರೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಜಗನ್ ತಂದೆ ರಾಜಶೇಖರ್ ರೆಡ್ಡಿ ಸಹ ಇದೇ ರೀತಿ ಮಾಡಿದ್ರು. ಹಾಗೆ ಮಾಡಿ ಶಾಪಕ್ಕೆ ಒಳಗಾಗಿದ್ದರು. ಆದ್ರೆ ಅವರ ಸಾವಿನ ರಹಸ್ಯ ಈವರೆಗೂ ಯಾರಿಗೂ ತಿಳಿದಿಲ್ಲ. ಆಂಧ್ರ ಸಿಎಂ ಜಗನ್‌ಗೂ ಅದೇ ಗತಿ ಬರುತ್ತದೆ ಎಂದು ತಿರುಪತಿ ದೇವಾಲಯದ ಆಸ್ತಿ ಮಾರಾಟಕ್ಕೆ ಮುತಾಲಿಕ್ ವಿರೋಧಿಸಿದರು.
ಜಗನ್ ಮತಾಂತರ ಹೊಂದಿರುವ ಕ್ರಿಶ್ಚಿಯನ್. ಅವರು ವಕ್ಫ್ ಬೋರ್ಡ್, ಚರ್ಚ್‌ಗಳನ್ನು ಮುಟ್ಟುವುದಿಲ್ಲ. ದೇವಾಲಯಗಳ ಮೇಲಷ್ಟೇ ಅವರ ಕಣ್ಣು. ತಿರುಪತಿ ದೇವಸ್ಥಾನ ಆಂಧ್ರಪ್ರದೇಶದ ಆಸ್ತಿ ಅಲ್ಲ, ಅದು ಇಡೀ ದೇಶದ ಜನರ ಆಸ್ತಿ. ತಿರುಪತಿ ಆಸ್ತಿ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳ ಮೂಲಕ ಆಂಧ್ರಪ್ರದೇಶ ರಾಜ್ಯಪಾಲರಿಗೆ ಮುತಾಲಿಕ್ ಮನವಿ ಸಲ್ಲಿಸಿದರು.
Published On - 2:17 pm, Wed, 27 May 20