12 ಗಂಟೆ ದುಡಿತಕ್ಕೆ Red Signal, ಕಾರ್ಮಿಕನ ಕೈಹಿಡಿಯಲಿದೆ ಕೇಂದ್ರ!
ದೆಹಲಿ: ಕೊರೊನಾ ಕಾಲದಲ್ಲಿ ಸಂಭವಿಸಿರುವ ಆರ್ಥಿಕ ನಷ್ಟ, ಸಂಕಷ್ಟದಿಂದ ಪಾರಾಗಲು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಕೆ ಮಾಡಿರುವುದಕ್ಕೆ ಕೇಂದ್ರ ಕಾರ್ಮಿಕ ಸಚಿವರು ಮತ್ತೊಮ್ಮೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಕಾರ್ಮಿಕ ಕಾಯ್ದೆ ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ರೆಡ್ ಸಿಗ್ನಲ್ ನೀಡುತ್ತದೆ. ಕೊರೊನೊ ಸಂಕಷ್ಟ ಮುಗಿದ ಮೇಲೆ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಸುವ ಕಾರ್ಮಿಕ ಕಾಯ್ದೆ ತಿದ್ದುಪಡಿ ಸಾಧುವಲ್ಲ, ಅದನ್ನು ಕೇಂದ್ರ ಒಪ್ಪಲ್ಲ ಎಂದು […]
ದೆಹಲಿ: ಕೊರೊನಾ ಕಾಲದಲ್ಲಿ ಸಂಭವಿಸಿರುವ ಆರ್ಥಿಕ ನಷ್ಟ, ಸಂಕಷ್ಟದಿಂದ ಪಾರಾಗಲು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಕೆ ಮಾಡಿರುವುದಕ್ಕೆ ಕೇಂದ್ರ ಕಾರ್ಮಿಕ ಸಚಿವರು ಮತ್ತೊಮ್ಮೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತಾದ ಕಾರ್ಮಿಕ ಕಾಯ್ದೆ ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ರೆಡ್ ಸಿಗ್ನಲ್ ನೀಡುತ್ತದೆ. ಕೊರೊನೊ ಸಂಕಷ್ಟ ಮುಗಿದ ಮೇಲೆ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಸುವ ಕಾರ್ಮಿಕ ಕಾಯ್ದೆ ತಿದ್ದುಪಡಿ ಸಾಧುವಲ್ಲ, ಅದನ್ನು ಕೇಂದ್ರ ಒಪ್ಪಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರಗಳ ಜತೆ ಈ ಬಗ್ಗೆ ಮಾತುಕತೆ ನಡೆಸುತ್ತೇವೆ. ಕಾರ್ಮಿಕ ವಿಷಯ ಸಮವರ್ತಿ ಪಟ್ಟಿಯಲ್ಲಿರುವ ಹಿನ್ನೆಲೆ ರಾಜ್ಯಗಳು ಬಯಸುವ ಕಾಯ್ದೆಯ ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರದ ಒಪ್ಪಿಗೆಯೂ ಬೇಕಾಗುತ್ತದೆ. ಹೀಗಾಗಿ ನಮ್ಮ ಅಭಿಪ್ರಾಯ ಕೇಳಿದಾಗ ಇದನ್ನು ಸ್ಪಷ್ಟವಾಗಿ ತಿಳಿಸುತ್ತೇವೆ ಎಂದು ಸಚಿವ ಗಂಗ್ವಾರ್ ತಿಳಿಸಿದ್ದಾರೆ.