ಹೊಲದಲ್ಲಿ ಚಿರತೆಗಳ ಕಾಳಗ, ಒಂದು ಚಿರತೆ ಸ್ಥಳದಲ್ಲೇ ಸಾವು
ಎರಡು ಚಿರತೆಗಳು ಹೊಡೆದಾಡಿಕೊಂಡ ಪರಿಣಾಮ ಒಂದು ಚಿರತೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬದನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರ ವಲಯದಲ್ಲಿನ ಹೊಲವೊಂದರ ಬಳಿ ಚಿರತೆ ಶವ ಬಿದ್ದಿರುವುದನ್ನ ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಕಳೆಬರವನ್ನ ಪರಿಶೀಲಿಸಿದಾಗ ಎರಡು ಚಿರೆತೆಗಳು ಹೊಡೆದಾಡಿಕೊಂಡ ಪರಿಣಾಮ ಚಿರತೆ ಸಾವು ಸಂಭವಿಸಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಹುಪಾಲು ಪ್ರದೇಶ ಕಾಡಿನಿಂದ ಸುತ್ತುವರೆದಿದ್ದು ಕಾಡು […]
ಎರಡು ಚಿರತೆಗಳು ಹೊಡೆದಾಡಿಕೊಂಡ ಪರಿಣಾಮ ಒಂದು ಚಿರತೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬದನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರ ವಲಯದಲ್ಲಿನ ಹೊಲವೊಂದರ ಬಳಿ ಚಿರತೆ ಶವ ಬಿದ್ದಿರುವುದನ್ನ ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಕಳೆಬರವನ್ನ ಪರಿಶೀಲಿಸಿದಾಗ ಎರಡು ಚಿರೆತೆಗಳು ಹೊಡೆದಾಡಿಕೊಂಡ ಪರಿಣಾಮ ಚಿರತೆ ಸಾವು ಸಂಭವಿಸಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಹುಪಾಲು ಪ್ರದೇಶ ಕಾಡಿನಿಂದ ಸುತ್ತುವರೆದಿದ್ದು ಕಾಡು ಪ್ರಾಣಿಗಳು ಆಹಾರ ಅರಸಿ ಆಗಾಗ್ಗೆ ಊರಿನತ್ತ ಬರುವುದು ಮಾಮೂಲಿಯಾಗಿದೆ. ಮಳವಳ್ಳಿ ತಾಲೂಕಿನ ಬಿಜಿಪುರ ಹೋಬಳಿ ವ್ಯಾಪ್ತಿಯಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು ಚಿರತೆ ಹಾವಳಿ ನಿಯಂತ್ರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಲೇ ಬಂದಿದ್ದರು. ಹೀಗಿರುವಾಗಲೇ ಬದನಕೆರೆ ಗ್ರಾಮದ ಹೊರ ವಲಯದಲ್ಲಿನ ಹೊಲದ ಬಳಿ ಸುಮಾರು 5 ವರ್ಷದ ಗಂಡು ಚಿರತೆಯೊಂದು ಸತ್ತುಬಿದ್ದಿರುವುದನ್ನ ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಚಿರತೆ ಸಾವಿಗೆ ನಿಖರ ಕಾರಣ ಏನು ಅನ್ನೋದನ್ನ ತಿಳಿದುಕೊಳ್ಳುವ ತವಕದಲ್ಲಿದ್ದರು. ಸ್ಥಳಕ್ಕಾಗಮಿಸಿದ ಮಳವಳ್ಳಿ ತಾಲೂಕು ಅರಣ್ಯಾಧಿಕಾರಿಗಳ ತಂಡ ಸತ್ತು ಬಿದ್ದಿದ್ದ ಚಿರತೆಯ ಮೃತದೇಹವನ್ನ ಪರಿಶೀಲಿಸಿದಾಗ ಎರಡು ಚಿರತೆಯ ನಡುವೆ ಕಾಳಗ ನಡೆದು ಈ ಚಿರತೆ ಮೃತಪಟ್ಟಿದೆ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.
ಮೃತಪಟ್ಟಿರುವ ಚಿರತೆಯ ದೇಹದ ಮೇಲೆ ಮತ್ತೊಂದು ಚಿರತೆ ಪರಚಿದ ಗುರುತುಗಳಿದ್ದು ಎರಡು ಸಮಬಲದ ಚಿರತೆಗಳು ಮುಖಾಮುಖಿಯಾದ ಕೆಲವು ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತವೆ. ವನ್ಯ ಪ್ರಾಣಿಗಳಲ್ಲಿ ಇದು ಸಹಜ ಪ್ರಕ್ರಿಯೆಯಾಗಿದೆ ಎಂದು ಮಾಹಿತಿ ನೀಡಿರುವ ಅರಣ್ಯಾಧಿಕಾರಿಗಳು ಮೃತ ಚಿರತೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಲ್ಲದೆ ತಾಲೂಕಿನಲ್ಲಿ ಚಿರತೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗದದಿರುವಂತೆ ಮನವಿ ಮಾಡಿದ್ದಾರೆ.
Published On - 4:59 pm, Wed, 27 May 20