ಜಮಖಂಡಿಯ ಆರ್ಟ್ ಟೀಚರ್ ಸಂಗಮೇಶರ ‘ಕೊರೊನಾ ಕಲೆ’!

  • TV9 Web Team
  • Published On - 17:56 PM, 27 May 2020
ಜಮಖಂಡಿಯ ಆರ್ಟ್ ಟೀಚರ್ ಸಂಗಮೇಶರ ‘ಕೊರೊನಾ ಕಲೆ’!

ಕೊರೊನಾ ಬಗ್ಗೆ ಬಾಗಲಕೋಟೆಯ ಚಿತ್ರಕಲಾ ಶಿಕ್ಷಕರೊಬ್ಬರು ಅಪರೂಪದ ಚಿತ್ರ ಬಿಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ನಿವಾಸಿಯಾಗಿರುವ ಚಿತ್ರಕಲಾ ಶಿಕ್ಷಕರ ಸಂಗಮೇಶ್ ಬಗಲಿ ಅಪರೂಪದ ಚಿತ್ರ ಬಿಡಿಸಿದ್ದಾರೆ‌.

ಸಂಗಮೇಶ್ ಬಗಲಿ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಹೊಸೂರು ಗ್ರಾಮದ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಸಂಗಮೇಶ್ ಬಗಲಿ ಅವರು ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಮೈಲಿಗಲ್ಲಿನ ಪಕ್ಕ ಕೊರೊನಾ ಜೊತೆ ಓಡುತ್ತಿರುವ ಕುದುರೆಯ ವಿಶೇಷ ಚಿತ್ರ ಬಿಡಿಸಿದ್ದಾರೆ.

ಕುದುರೆ ಮೇಲೆ ಭಾರತ‌ದ ನಕ್ಷೆ, ಬಾವುಟ, ಕುದುರೆಗೆ ಮಾಸ್ಕ್, ಕುದುರೆ ಕೊರಳಲ್ಲಿ ಮೋದಿ ಚಿತ್ರ ಬಿಡಿಸಿ, ಕುದುರೆ ಬೆನ್ನ ಮೇಲೆ ಕೊರೊನಾ ವಾರಿಯರ್ಸ್ ಚಿತ್ರ ರಚಿಸಿದ್ದಾರೆ. ಆಕ್ರಾಲಿಕ್ ಕ್ಯಾನ್ವಾಸ್ ಪೇಂಟಿಂಗ್ ಮೂಲಕ ಈ ಅಪರೂಪದ ಚಿತ್ರ ಬಿಡಿಸಿದ್ದಾರೆ.