ಬೆಂಗಳೂರು ವಾಹನ ಸವಾರರೇ ಎಚ್ಚರ! ನಿಮ್ಮೇಲಿದೆ ಕ್ಯಾಮರಾ ಕಣ್ಣು: ರೂಲ್ಸ್​ ಬ್ರೇಕ್​ ಆದ್ರೆ ದಂಡ ಫಿಕ್ಸ್

|

Updated on: Sep 27, 2024 | 4:11 PM

ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಟ್ರಾಫಿಕ್. ಈ ಟ್ರಾಫಿಕ್ ಕಂಟ್ರೊಲ್ ಮಾಡಲು ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವಾಗಿದೆ. ಇದ್ದಕ್ಕಾಗಿ ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ಎ1 ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಆ ಮೂಲಕ ಆ ಮೂಲಕ ವಾಹನ ಸವಾರ ಮೇಲೆ ಎ1 ಕ್ಯಾಮರಾ ಕಣ್ಣಿಡಲಿದೆ.

ಬೆಂಗಳೂರು ವಾಹನ ಸವಾರರೇ ಎಚ್ಚರ! ನಿಮ್ಮೇಲಿದೆ ಕ್ಯಾಮರಾ ಕಣ್ಣು: ರೂಲ್ಸ್​ ಬ್ರೇಕ್​ ಆದ್ರೆ ದಂಡ ಫಿಕ್ಸ್
ಬೆಂಗಳೂರು ವಾಹನ ಸವಾರರೇ ಎಚ್ಚರ! ನಿಮ್ಮೇಲಿದೆ ಕ್ಯಾಮರಾ ಕಣ್ಣು: ರೂಲ್ಸ್​ ಬ್ರೇಕ್​ ಆದ್ರೆ ದಂಡ ಫಿಕ್ಸ್
Follow us on

ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯ ರಾಜಧಾನಿ ಬೆಂಗಳೂರು ಉದ್ಯಾನ ನಗರಿ, ಸಿಲಿಕಾನ್​ ವ್ಯಾಲಿ, ಐಟಿ ಹಬ್​ನಿಂದ ಎಷ್ಟೂ ಫೇಮಸ್​ ಅಷ್ಟೇ ಟ್ರಾಫಿಕ್ (traffic)​ ಸಮಸ್ಯೆ ವಿಚಾರಕ್ಕೂ ಅಷ್ಟೇ ಫೇಮಸ್. ರಾಜ್ಯ ಸರ್ಕಾರ ಈ ಟ್ರಾಫಿಕ್​ ಸಮಸ್ಯೆಯಿಂದ ಜನರಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ತಂದರೂ ಪ್ರಯೋಜನವಾಗಿಲ್ಲ. ಟ್ರಾಫಿಕ್ ​ಸಮಸ್ಯೆ ಇನ್ನು ಹೆಚ್ಚುಲ್ಲೇ ಇದೆ. ಟ್ರಾಫಿಕ್​ನಲ್ಲಿ ಸಿಲುಕಿ ಅದರಿಂದ ಹೊರಬರುವಷ್ಟರಲ್ಲಿ ಜೀವನ ಸಾಕಾಗಿ ಹೋಗಿರುತ್ತೆ. ಸದ್ಯ ಈ ಸಂಚಾರ ನಿಯಂತ್ರಣಕ್ಕೆ ಎ1 ಕ್ಯಾಮರಾ (A1 camera) ಅಳವಡಿಕೆ ಮಾಡಲಾಗಿದೆ.

ವಾಹನ ಸವಾರರೇ ಎಚ್ಚರ! 

ಬೆಂಗಳೂರಿನ ಪ್ರಮುಖ 90 ಜಂಕ್ಷನ್​ಗಳಲ್ಲಿ 90 ಎ1 ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಆ ಮೂಲಕ ವಾಹನ ಸವಾರ ಮೇಲೆ ಎ1 ಕ್ಯಾಮರಾ ಕಣ್ಣಿಡಲಿದೆ. ಯಾವುದೇ ಒಂದು ಸಂಚಾರಿ ನಿಯಮವನ್ನು ಉಂಘಿಸಿದರೆ ದಂಡ ಬೀಳುವುದು ಗ್ಯಾರಂಟಿ.

ಇದನ್ನೂ ಓದಿ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನ ಸವಾರರಿಂದ ನಿಯಮ ಉಲ್ಲಂಘನೆ!

ಸುಮಾರು 13 ರೀತಿ ಟ್ರಾಫಿಕ್ ವೈಯಲೇಶನ್​ ಅನ್ನು ಈ ಎ1 ಕ್ಯಾಮರಾಗಳು ಗುರುತಿಸುತ್ತವೆ. ಅಂದರೆ ಅತೀ ವೇಗ, ಮೊಬೈಲ್ ಫೋನ್​ ಬಳಕೆ, ಸಿಗ್ನಲ್ ಜಂಪ್ ಸೇರಿದಂತೆ ಸೀಟ್ ಬೆಲ್ಟ್ ಹಾಕದೆ ಇರೋದು, ತ್ರಿಬಲ್ ರೈಡಿಂಗ್, ಮಿರರ್ ಡ್ಯಾಮೆಜ್, ರಾಂಗ್ ಸೈಡ್ ಡ್ರೈವಿಂಗ್ ಗೂಡ್ಸ್ ವಾಹನಗಳ ಓವರ್ ಲೋಡಿಂಗ್, ಇಲ್ಲಿಗಲ್ ನಂಬರ್ ಪ್ಲೇಟ್, ನೋ ಪಾರ್ಕಿಂಗ್ ಪತ್ತೆ ಹಚ್ಚುತ್ತೆ. ಬಳಿಕ ನೇರವಾಗಿ ವಾಹನಗಳ ಮಾಲೀಕರ ಮೊಬೈಲ್​ಗೆ ದಂಡದ ಚಲನ್ ತಲುಪಲಿದೆ.

ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಟ್ರಾಫಿಕ್. ಈ ಟ್ರಾಫಿಕ್ ಕಂಟ್ರೊಲ್ ಮಾಡಲು ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವಾಗಿದೆ. ಇದ್ದಕ್ಕಾಗಿ ಟ್ರಾಫಿಕ್ ಕಂಟ್ರೋಲ್‌ ನಿಭಾಯಿಸಲು ಇತ್ತೀಚೆಗೆ ವಿದ್ಯಾರ್ಥಿಗಳಿಂದ ಹೊಸ ಅನ್ವೇಷಣೆ ಕೂಡ ಮಾಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಟ್ಯಾಕ್ಸಿಗಳಿಗೆ ಒಂದು ನಗರ ಒಂದು ದರ ಜಾರಿ, ಈಗೆಷ್ಟಿದೆ ಬಾಡಿಗೆ? ಇಲ್ಲಿದೆ ವಿವರ

ಡ್ರೋನ್ ಕಣ್ಗಾವಲು ಮೂಲಕ ಟ್ರಾಫಿಕ್ ಸಮಸ್ಯೆ ನಿಭಾಯಿಸಲು ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಏರೋನಾಟಿಕ್ಸ್ ವಿಭಾಗದ 40 ವಿದ್ಯಾರ್ಥಿಗಳ ತಂಡದಿಂದ ಸಾಫ್ಟವೇರ್ ರಚನೆ ಮಾಡಿದ್ದು, ಡ್ರೋನ್‌ಗೆ ಅಳವಡಿಸಿದ ಕ್ಯಾಮರಾ ಮೂಲಕ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಇನಪುಟ್ ಕೊಡುವುದರಿಂದ ನಗರದಲ್ಲಿರುವ ಟ್ರಾಫಿಕ್ ಕಂಟ್ರೋಲ್ ಮಾಡಬಹುದಾದಂತಹ ಸಾಫ್ಟವೇರ್ ಡೆವಲಪ್ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.