ದಕ್ಷಿಣ ಕನ್ನಡ: ಸಾಲ ವಾಪಸ್ ಕೇಳಲು ಹೋದ ಬ್ಯಾಂಕ್ ಮ್ಯಾನೇಜರ್​​ಗೆ ಗನ್ ತೋರಿಸಿ ಬೆದರಿಕೆ

ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ ಸಾಲ ವಾಪಸ್ ಕೇಳಲು ಹೋದ ಬ್ಯಾಂಕ್ ಮ್ಯಾನೇಜರ್​​ಗೆ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಸಾಲ ಮರುಪಾವತಿಸದೆ ಹಿನ್ನಲೆ ಬ್ಯಾಂಕ್ ಮ್ಯಾನೇಜರ್‌ ತನ್ನ ತಂಡದೊಂದಿಗೆ ಸಾಲ ಪಡೆದುಕೊಂಡವರ ಮನೆಗೆ ಹೋದ ವೇಳೆ ಘಟನೆ ನಡೆದಿದ್ದು, ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ: ಸಾಲ ವಾಪಸ್ ಕೇಳಲು ಹೋದ ಬ್ಯಾಂಕ್ ಮ್ಯಾನೇಜರ್​​ಗೆ ಗನ್ ತೋರಿಸಿ ಬೆದರಿಕೆ
ಎಸ್ಪಿ, ಬೆದರಿಕೆ ಹಾಕಿದ ಕೃಷ್ಣ ಕಿಶೋರ್, ಅಖಿಲೇಶ್
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2024 | 4:48 PM

ದಕ್ಷಿಣ ಕನ್ನಡ, ಸೆ.27: ಸಾಲ ವಾಪಸ್ ಕೇಳಲು ಹೋದ ಬ್ಯಾಂಕ್ ಮ್ಯಾನೇಜರ್​​ಗೆ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಬಲ್ನಾಡು ಉಜುರುಪಾದೆ ನಿವಾಸಿ ಕೃಷ್ಣ ಕಿಶೋರ್ ಹಾಗೂ ಅಖಿಲೇಶ್‌ ವಿರುದ್ಧ ಪಿಸ್ತೂಲು ತೋರಿಸಿ ಬೆದರಿಸಿದ ಆರೋಪ ಕೇಳಿಬಂದಿದೆ. ಆರೋಪಿ ಅಖಿಲೇಶ್ ಪತ್ನಿ ಕೀರ್ತಿ ಅಖಿಲೇಶ್ ಎಂಬುವವರು ಎಸ್.ಬಿ.ಐ ಬ್ಯಾಂಕ್​ನಿಂದ 2 ಕೋಟಿ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಸದೆ ಹಿನ್ನಲೆ ಕೀರ್ತಿ ಅಖಿಲೇಶ್ ವಿರುದ್ಧ ಬ್ಯಾಂಕ್ ಮ್ಯಾನೇಜರ್ ಚಿನ್ಮಯ ಹಲವು ಬಾರಿ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದರು.

ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆ ಆರೋಪ

ಇಷ್ಟಾದರೂ ಅವರಿಂದ ಯಾವುದೇ ಸ್ಪಂದನೆ ಸಿಗದ ಹಿನ್ನಲೆ ಬ್ಯಾಂಕ್ ಮ್ಯಾನೇಜರ್‌ ತನ್ನ ತಂಡದೊಂದಿಗೆ ಕೀರ್ತಿ ಅಖಿಲೇಶ್ ಮನೆಗೆ ಭೇಟಿ ನೀಡಿದ್ದರು. ಬ್ಯಾಂಕ್ ಮಂದಿ ಮನೆಗೆ ಬಂದ ಕಾರಣದಿಂದ ಆಕ್ರೋಶಗೊಂಡ ಕೀರ್ತಿ ಪತಿ ಅಖಿಲೇಶ್ ಹಾಗೂ ಆತನ ತಂದೆ ಕೃಷ್ಣ ಕಿಶೋರ್​ ತಗಾದೆ(ಜಗಳ) ತೆಗದಿದ್ದು, ಈ ವೇಳೆ ಕೃಷ್ಣ ಕಿಶೋರ್ ಮನೆಯಲ್ಲಿದ್ದ ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದಾತನಿಗೆ ʼಕೈʼ ನಾಯಕಿ ಕೈಯಿಂದ ಸರಿಯಾಗಿ ಬಿತ್ತು ಗೂಸಾ

ಸರಗಳ್ಳತನ ಮಾಡ್ತಿದ್ದ ಕಳ್ಳನ ಬಂಧನ

ಬೆಂಗಳೂರು: ಸರಗಳನ್ನತನ ಮಾಡ್ತಿದ್ದವನನ್ನು ವೈಟ್ ಫೀಲ್ಡ್​ ಪೊಲೀಸರು ಬಂಧಿಸಿದ್ದಾರೆ. ಹಗದೂರು ರಸ್ತೆಯಲ್ಲಿ ಸೆ.14 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಕ್ಕರೆ ಖರೀದಿ ಮಾಡುವ ನೆಪದಲ್ಲಿ ಅಂಗಡಿಗೆ ಬಂದಿದ್ದ ಆರೋಪಿ, ಮಹಿಳೆ ಸಕ್ಕರೆ ತೂಕ ಮಾಡುವ ವೇಳೆ ಮಹಿಳೆಯ ಕತ್ತಿನಲ್ಲಿದ್ದ 48 ಗ್ರಾಂ ತೂಕದ ಸರ ಎಗರಿಸಿ ಪರಾರಿಯಾಗಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದು, ಬಂಧಿತನಿಂದ 5 ಲಕ್ಷ ಮೌಲ್ಯದ 77 ಗ್ರಾಂನ 02 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ 1 ಬೈಕ್​ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ