ಮೈಸೂರು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ

ಮೈಸೂರು ರಾಜ ಮನೆತನದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಅವರ ಹೆಸರುಗಳು ಮೈಸೂರು ಒಂದೇ ಅಲ್ಲದೆ ಕರ್ನಾಟಕದ ಜನರಿಗೇ ಚಿರಪರಿಚಿತವಾಗಿದೆ. ಅಲ್ಲದೆ ಸಂವಹನದ ದೃಷ್ಟಿಯಿಂದಲೂ ಈ ಮರುನಾಮಕರಣ ಅವಶ್ಯವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮನವಿಯಲ್ಲಿ ತಿಳಿಸಿದ್ದಾರೆ.

ಮೈಸೂರು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ
ಪ್ರತಾಪ್​ ಸಿಂಹ (ಸಂಗ್ರಹ ಚಿತ್ರ)
Updated By: guruganesh bhat

Updated on: Jul 03, 2021 | 5:40 PM

ಮೈಸೂರು: ಅರಮನೆ ನಗರಿಯ ವಿಮಾನ ನಿಲ್ದಾಣಕ್ಕೆ ಜಯಚಾಮರಾಜ ಒಡೆಯರ್ ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಕೇಂದ್ರ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಈ ಕುರಿತು ಮನವಿ ಮಾಡಿದ್ದಾರೆ. ಜತೆಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವಂತೆಯೂ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. 

ಮೈಸೂರು ರಾಜ ಮನೆತನದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಅವರ ಹೆಸರುಗಳು ಮೈಸೂರು ಒಂದೇ ಅಲ್ಲದೆ ಕರ್ನಾಟಕದ ಜನರಿಗೇ ಚಿರಪರಿಚಿತವಾಗಿದೆ. ಅಲ್ಲದೆ ಸಂವಹನದ ದೃಷ್ಟಿಯಿಂದಲೂ ಈ ಮರುನಾಮಕರಣ ಅವಶ್ಯವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮನವಿಯಲ್ಲಿ ತಿಳಿಸಿದ್ದಾರೆ.

ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸ್ಥಾನವೇ ಸಾಕು: ಮೈಸೂರು ಸಂಸದ ಪ್ರತಾಪ್ ಸಿಂಹ
ಕ್ಷೇತ್ರದ ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸಂಸದನ ಸ್ಥಾನವೇ ಸಾಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಮಾರ್ಮಿಕವಾಗಿ ಹೇಳಿದ್ದಾರೆ. ಕೇಂದ್ರ ಸಚಿವ ಸಂಪುಟಕ್ಕೆ ಸಂಸದ ಪ್ರತಾಪ್ ಸಿಂಹ ಹೆಸರು ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಮೈಸೂರು-ಕೊಡಗು ಜನ ನನಗೆ ಸಂಸದನ ಸ್ಥಾನ ನೀಡಿದ್ದಾರೆ, ನನಗಿಷ್ಟೇ ಸಾಕು ಎಂದು ಹೇಳಿದ್ದರು.

ಸಂಸದನಾದ ಮೇಲೆ ಮಿನಿಸ್ಟರ್ ಆಗಬೇಕು. ಮಿನಿಸ್ಟರ್ ನಂತರ ಸಿಎಂ ಆಗಬೇಕು ಅನ್ನೋ ಆಸೆಗಿಂತ ಕೊಟ್ಟಿರುವ ಸ್ಥಾನದಲ್ಲಿ ಮುಂದುವರಿಯುವುದು ಉತ್ತಮ. ಜನರ ಕೆಲಸ ಮಾಡಲಿ ಅಂತ ನಮ್ಮನ್ನು ನೇಮಕ ಮಾಡುವುದು. ಒಂದರ ನಂತರ ಒಂದು ಸ್ಥಾನಕ್ಕೆ ಆಸೆ ಪಡುವ ಬದಲು ಇರುವ ಹುದ್ದೆಯಲ್ಲೇ ಕೆಲಸ ಮಾಡಬೇಕು. ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸ್ಥಾನವೇ ಸಾಕು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ: 

Delta Variant: ಡೆಲ್ಟಾ ಮಾದರಿ ಕೊರೊನಾ ಸೋಂಕಿನ ಲಕ್ಷಣಗಳು ಈ ಮೊದಲ ಕೊವಿಡ್ ರೋಗಲಕ್ಷಣಕ್ಕಿಂತ ಭಿನ್ನವಾಗಿರಬಹುದು: ಅಧ್ಯಯನ

Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ

(MP Pratap Simha requests naming of Nalwadi Krishnaraja Wodeyar for Mysuru railway station)