ಮಂಗಳೂರು ಫೈರಿಂಗ್, ಅಪರಾಧಿಗಳಿಗೆ ಪರಿಹಾರ ಕೊಡೋಲ್ಲ: ಶೋಭಾ ಘೋಷಣೆ

|

Updated on: Dec 25, 2019 | 11:07 AM

ಮಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ- ಸಿಎಎ ವಿರೋಧಿಸಿ, ಇತ್ತೀಚೆಗೆ ನಗರದಲ್ಲಿ ಪ್ರತಿಭಟನೆಗಳು ನಡೆದ ಸಂದರ್ಭದಲ್ಲಿ ಗೋಲಿಬಾರ್​ ನಡೆದಿತ್ತು. ಪೊಲೀಸರ ಗುಂಡಿಗೆ ಇಬ್ಬರು ಯುವಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ, ಅಪರಾಧಿಗಳಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೊಸ ಬಾಂಬ್ ಸಿಡಿಸಿದ್ದಾರೆ. ಸರ್ಕಾರ ಪರಿಹಾರ ಘೋಷಣೆ ಮಾಡಿದೆ ಅಷ್ಟೆ. ಪರಿಹಾರ ನೀಡಿಲ್ಲ. ಮಂಗಳೂರು ಗಲಭೆಯಲ್ಲಿ ಮೃತಪಟ್ಟವರು ಅಪರಾಧಿಗಳು ಅಂತಾ ಸಾಬೀತಾದ್ರೆ ಪರಿಹಾರ ವಾಪಾಸ್ ಪಡೆಯುವ ಬಗ್ಗೆ ಚಿಂತಿಸಲಾಗುವುದು. ತನಿಖೆಯ ಬಳಿಕ ಪರಿಹಾರದ ವಿಚಾರವನ್ನು ಆಲೋಚಿಸುವ ಬಗ್ಗೆ […]

ಮಂಗಳೂರು ಫೈರಿಂಗ್, ಅಪರಾಧಿಗಳಿಗೆ ಪರಿಹಾರ ಕೊಡೋಲ್ಲ: ಶೋಭಾ ಘೋಷಣೆ
Follow us on

ಮಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ- ಸಿಎಎ ವಿರೋಧಿಸಿ, ಇತ್ತೀಚೆಗೆ ನಗರದಲ್ಲಿ ಪ್ರತಿಭಟನೆಗಳು ನಡೆದ ಸಂದರ್ಭದಲ್ಲಿ ಗೋಲಿಬಾರ್​ ನಡೆದಿತ್ತು. ಪೊಲೀಸರ ಗುಂಡಿಗೆ ಇಬ್ಬರು ಯುವಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ, ಅಪರಾಧಿಗಳಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೊಸ ಬಾಂಬ್ ಸಿಡಿಸಿದ್ದಾರೆ.

ಸರ್ಕಾರ ಪರಿಹಾರ ಘೋಷಣೆ ಮಾಡಿದೆ ಅಷ್ಟೆ. ಪರಿಹಾರ ನೀಡಿಲ್ಲ. ಮಂಗಳೂರು ಗಲಭೆಯಲ್ಲಿ ಮೃತಪಟ್ಟವರು ಅಪರಾಧಿಗಳು ಅಂತಾ ಸಾಬೀತಾದ್ರೆ ಪರಿಹಾರ ವಾಪಾಸ್ ಪಡೆಯುವ ಬಗ್ಗೆ ಚಿಂತಿಸಲಾಗುವುದು. ತನಿಖೆಯ ಬಳಿಕ ಪರಿಹಾರದ ವಿಚಾರವನ್ನು ಆಲೋಚಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Published On - 11:06 am, Wed, 25 December 19