ಮಂತ್ರಿ ಸ್ಥಾನ ಸಿಗದಿದ್ದರೆ 16 ಶಾಸಕರ ರಾಜೀನಾಮೆ – ಹೈಕಮಾಂಡ್ ಗೆ ವಾರ್ನ್ ಮಾಡಿ ಗೆದ್ದ ಎಂಟಿಬಿ ನಾಗರಾಜ್

| Updated By: ಸಾಧು ಶ್ರೀನಾಥ್​

Updated on: Aug 04, 2021 | 11:55 AM

MTB Nagaraj: ಕೈತಪ್ಪಿ ಹೋಗುತ್ತಿದ್ದ ಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಎಂಟಿಬಿ ನಾಗರಾಜ್ ನೇರವಾಗಿ ಹೈಕಮಾಂಡ್ ನಾಯಕರನ್ನು ಟಚ್ ಮಾಡಿದ್ದಾರೆ. ಜೆ.ಪಿ ನಡ್ಡಾ ಮೇಲೆ ಒತ್ತಡ ಹಾಕಿದ ಎಂಟಿಬಿ ನಾಗರಾಜ್ ಮತ್ತೆ ಸಚಿವಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಮಂತ್ರಿ ಸ್ಥಾನ ಸಿಗದಿದ್ದರೆ 16 ಶಾಸಕರ ರಾಜೀನಾಮೆ - ಹೈಕಮಾಂಡ್ ಗೆ ವಾರ್ನ್ ಮಾಡಿ ಗೆದ್ದ ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್
Follow us on

ನವದೆಹಲಿ: ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದ ಶಾಸಕರಿಗೆ ಮತ್ತೆ ಮಂತ್ರಿಸ್ಥಾನ ಸಿಗುತ್ತೋ ಇಲ್ಲವೋ ಎನ್ನುವ ಆತಂಕ ಇತ್ತು. ಮತ್ತೆ ಮಂತ್ರಿಸ್ಥಾನ ಸಿಗುವುದೇ ಇಲ್ಲ ಎಂದು ಅಂದುಕೊಂಡಿದ್ದ ಎಂಟಿಬಿ ನಾಗರಾಜ್ ಅವರು ಮತ್ತೆ ಸಚಿವರಾಗುತ್ತಿರುವುದು ಅಚ್ಚರಿ ಹುಟ್ಟಿಸಿದೆ. ಕಡೆಗಳಿಗೆಯಲ್ಲಿ ಎಂಟಿಬಿ ನಾಗರಾಜ್ ಗೆ ಮಂತ್ರಿಗಿರಿ ಸಿಕ್ಕಿದ್ದೇಗೆ ಅನ್ನೋದು ರೋಚಕವಾಗಿದೆ.

ಹೈಕಮಾಂಡ್ ಮೇಲೆ ಒತ್ತಡ ಹಾಕಿ ಮಂತ್ರಿ ಸ್ಥಾನ ಪಡೆದ ಎಂಟಿಬಿ ನಾಗರಾಜ್

ಕೈತಪ್ಪಿ ಹೋಗುತ್ತಿದ್ದ ಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಎಂಟಿಬಿ ನಾಗರಾಜ್ ನೇರವಾಗಿ ಹೈಕಮಾಂಡ್ ನಾಯಕರನ್ನು ಟಚ್ ಮಾಡಿದ್ದಾರೆ. ಜೆ.ಪಿ ನಡ್ಡಾ ಮೇಲೆ ಒತ್ತಡ ಹಾಕಿದ ಎಂಟಿಬಿ ನಾಗರಾಜ್ ಮತ್ತೆ ಸಚಿವಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಂತ್ರಿಸ್ಥಾನ ಕೊಡದಿದ್ದರೇ 16 ಮಂದಿ ಶಾಸಕರೊಂದಿಗೆ ಪಕ್ಷ ತೊರೆಯುವ ಎಚ್ಚರಿಕೆ ಜತೆಗೆ ಸುದೀರ್ಘ ಪತ್ರದ ಮೂಲಕ ಅರುಣ್ ಸಿಂಗ್ ಮೂಲಕ ನಡ್ಡಾ ಅವರಿಗೆ ಒತ್ತಡ ಹೇರಿದ್ದರು ಎಂದು ಮೂಲಗಳು ತಿಳಿಸಿವೆ.

ಬಿ.ಎಸ್ ಯಡಿಯೂರಪ್ಪ ನೀಡಿದ ಮಾತು ಮರೆಯುತ್ತಿದ್ದೀರಿ ಎಂದು ಎಚ್ಚರಿಸಿದ ನಾಗರಾಜ್ :
ಬಿಜೆಪಿ ಸರ್ಕಾರ ರಚನೆಗೆಂದು ನಾನು ಮಂತ್ರಿಗಿರಿ ತ್ಯಾಗ ಮಾಡಿ ಕಾಂಗ್ರೆಸ್ ತೊರೆದು ಬಂದಿದ್ದೆ.ಈ ಹಂತದಲ್ಲಿ ನೀವೂ ನಮ್ಮನ್ನು ಮರೆಯುವುದು ದುರದೃಷ್ಟಕರ.ನನ್ನನ್ನು ನಿರ್ಲಕ್ಷ್ಯಿಸಿದರೇ ಪರಿಣಾಮ ಎದುರಿಬೇಕಾಗಬಹುದು.16 ಮಂದಿಯೊಂದಿಗೆ ಬಿಜೆಪಿ ತೊರೆಯುತ್ತೇನೆ ಎಂದು ಎಂಟಿಬಿ ಎಚ್ಚರಿಕೆ ನೀಡಿದ್ದರು.‌ ಎಚ್ಚರಿಕೆ ನೀಡದ ಪರಿಣಾಮವಾಗಿಯೇ ಎಂಟಿಬಿ ನಾಗರಾಜ್ ಅವರಿಗೆ ಕಡೆ ಘಳಿಗೆಯಲ್ಲಿ ಮಂತ್ರಿ ಸ್ಥಾನ ನೀಡಿದೆ.

– ಹರೀಶ್, ಟಿವಿ ನೈನ್, ನವದೆಹಲಿ

(MTB Nagaraj got minister berth in Basavaraj Bommai Cabinet)

Published On - 11:50 am, Wed, 4 August 21