ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ: ರೂಪುರೇಷ ಸಿದ್ಧ
ಬೆಂಗಳೂರು, ಜುಲೈ 26: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆಗೆ ಬಿಜೆಪಿ ಸಿದ್ಧತೆ ಮಾಡುತ್ತಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಒಟ್ಟು 8 ದಿನಗಳ ರೂಪುರೇಷೆಯನ್ನು ಪಕ್ಷದ ನಾಯಕರು ತಯಾರಿಸಿದ್ದಾರೆ.
ಪಾದಯಾತ್ರೆ ಎಲ್ಲಿಂದ ಶುರು?
- ನೈಸ್ ರಸ್ತೆ ಜಂಕ್ಷನ್ನಲ್ಲಿರುವ ಕೆಂಪಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಬಿಜೆಪಿ ನಾಯಕರ ಪಾದಯಾತ್ರೆ ಆರಂಭವಾಗಲಿದೆ.
- ಮೊದಲ ದಿನ 12 ಕಿಮೀ ಪಾದಯಾತ್ರೆ ನಡೆಸಲಿರುವ ಬಿಜೆಪಿ ನಾಯಕರು ಅಂದು ರಾತ್ರಿ ಮಂಜುನಾಥ್ ಚೌಲ್ಟ್ರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
- 2ನೇ ದಿನ 20.5 ಕಿಮೀ ಪಾದಯಾತ್ರೆ ನಡೆಸಲಿರುವ ನಾಯಕರು ಬಳಿಕ ಕೆಂಗಲ್ ಆಂಜನೇಯ ದೇಗುಲದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
- 3ನೇ ದಿನ 19 ಕಿಮೀ ಪಾದಯಾತ್ರೆ ನಡೆಸುವ ಬಿಜೆಪಿ ನಾಯಕರು, ನಿಡಗಟ್ಟದ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
- 4ನೇ ದಿನ 21.5 ಕಿಮೀ ಪಾದಯಾತ್ರೆ ನಡೆಸಿ ಶಶಿಕಿರಣ್ ಸಭಾಂಗಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
- 5ನೇ ದಿನ 16.5 ಕಿಮೀ ಪಾದಯಾತ್ರೆ ನಡೆಸಿ ಮಂಡ್ಯ ಜಿಲ್ಲೆಗೆ ತಲುಪಲಿದ್ದಾರೆ. ಅಂದು ರಾತ್ರಿ ಇಂಡವಾಳ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
- 6ನೇ ದಿನ 17 ಕಿಮೀ ಪಾದಯಾತ್ರೆ ನಡೆಸಿ ಮಂಜುನಾಥ ಚೌಲ್ಟ್ರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
- 7ನೇ ದಿನ 9 ಕಿಮೀ ಮತ್ತು 8ನೇ ದಿನ 17 ಕಿಮೀ ಪಾದಯಾತ್ರೆ ಮಾಡಿ ಮೈಸೂರು ತಲುಪಲಿದ್ದಾರೆ.
ಇದನ್ನೂ ಓದಿ: ಕೊನೆಗೂ ಆ ತಪ್ಪನ್ನು ಒಪ್ಪಿಕೊಂಡ ಸಿದ್ದರಾಮಯ್ಯ: ಆದರೆ…
ಬಿಜೆಪಿ ನಾಯಕರ ಪಾದಯಾತ್ರೆಯ ರೂಟ್ಮ್ಯಾಪ್ಗೆ ಭಾನುವಾರ ಅಂತಿಮ ಮುದ್ರೆ ಬೀಳಲಿದೆ. ಅಂದು ನಡೆಯಲಿರುವ ಎನ್ಡಿಎ ಸಭೆಯಲ್ಲಿ ರೂಟ್ ಮ್ಯಾಪ್ ಅಂತಿಮಗೊಳ್ಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ