ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಅಧಿಕಾರ ಇದ್ಯಾ? ಕಾನೂನು ಏನು ಹೇಳುತ್ತೆ?

|

Updated on: Jul 31, 2024 | 10:25 PM

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸುಂಟರಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಮುಡಾ ಹಗರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲರು, ವರದಿ ತರಿಸಿಕೊಂಡಿದ್ದಾರೆ. ವಿಚಾರಣೆಗೆ ಅನುಮತಿ ನೀಡುವ ಸಂಬಂಧ ವಿಚಾರ ರಾಜ್ಯಪಾಲರ ಅಂಗಳದಲ್ಲಿದ್ದು, ಪ್ರಾಸಿಕ್ಯೂಷನ್‌ಗೆ ನೀಡಲು ಚಿಂತನೆ ನಡೆಸಿದ್ದಾರೆ. ಹಾಗಾದ್ರೆ, ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರ ಹೊಂದಿದ್ದಾರಾ? ಕಾನೂನಿಲ್ಲೇನಿದೆ? ಎನ್ನುವ ಬಗ್ಗೆ ಕರ್ನಾಟಕ ಹೈಕೋರ್ಟ್ ಹಿರಿಯ ವಕೀಲ ಡಾಕ್ಟರ್ ಬಿವಿ ಆಚಾರ್ಯ ವಿವರಿಸಿದ್ದು, ಅದು ಕೆಳಗಿನಂತಿದೆ ನೋಡಿ.

ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಅಧಿಕಾರ ಇದ್ಯಾ? ಕಾನೂನು ಏನು ಹೇಳುತ್ತೆ?
ಥಾವರ್ ಚಂದ್ ಗೆಹ್ಲೋಟ್, ಬಿವಿ ಆಚಾರ್ಯ, ಸಿದ್ದರಾಮಯ್ಯ
Follow us on

ಬೆಂಗಳೂರು, (ಜುಲೈ 31): ಮುಡಾ ಹಗರಣ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಪಾದಯಾತ್ರೆ ನಡೆಸಲು ಸಜ್ಜಾಗಿದ್ದು, ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದೆ. ಇತ್ತ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ದ ವಿಚಾರಣೆಗೆ ಅನುಮತಿ ನೀಡುವ ಕುರಿತು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವರದಿ ಕೇಳಿದ್ದಾರೆ. ಅಷ್ಟಕ್ಕೂ ವಿಚಾರ ಏನಂದ್ರೆ, ಜುಲೈ 26ರಂದು ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಹಾಂ, ರಾಜ್ಯಪಾಲರಿಗೆ ದೂರು ನೀಡಿದ್ದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ದೂರನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲರು ಇದೀಗ ಕಾನೂನು ತಜ್ಞರ ವರದಿ ಕೇಳಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ಪ್ರಮುಖ ಪ್ರಕರಣಗಳು ಮತ್ತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ್ದ ತೀರ್ಪಿನ ಉಲ್ಲೇಖಿಸಿ ತಜ್ಞರು ವರದಿ ನೀಡಿದ್ದಾರೆ ಎನ್ನಲಾಗಿದೆ.

ಅತ್ತ ರಾಜ್ಯಪಾಲರು ಮುಡಾ ಹಗರಣವನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಂತೆಯೇ ಇತ್ತ ಸಿಎಂ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಕರೆದಿದ್ದು, ಪ್ರಾಸಿಕ್ಯೂಸಿನ್‌ಗೆ ಅನುಮತಿ ನೀಡದಂತೆ ಸಂಪುಟ ಸಭೆಯಲ್ಲಿ ನಿರ್ಣಯ ಅಂಗಿಕರೀಸುವ ಬಗ್ಗೆ ಚರ್ಚಿಸಲಾಗುತ್ತಿದ್ದು. ಒಂದು ಸಾಲಿನ ನಿರ್ಣಯ ಸಂಪುಟದಲ್ಲಿ ಅಂಗೀಕಾರವಾಗುವ ಸಾಧ್ಯತೆ ಇದೆ. ಹೀಗಾಗಿ ದ್ವಂದ್ವ ಉಂಟಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: 2010ರಲ್ಲಿ ಯಡಿಯೂರಪ್ಪಗೆ ಆದಂತೆ ಸಿದ್ದರಾಮಯ್ಯಗೆ ಕುತ್ತು ತರುತ್ತಾ ಪ್ರಾಸಿಕ್ಯೂಷನ್? ಅಂದು ಏನಾಗಿತ್ತು ಗೊತ್ತಾ?

ಪ್ರಾಸಿಕ್ಯೂಷನ್ ಬಗ್ಗೆ ಹಿರಿಯ ವಕೀಲ ಬಿವಿ ಆಚಾರ್ಯ ಹೇಳಿದ್ದಿಷ್ಟು

ಇನ್ನು ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ತಮ್ಮ ಪರ ನಿರ್ಣಯ ಅಂಗೀಕರಿಸಿಕೊಂಡರೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದ್ಯಾ? ಇಲ್ವಾ ಎನ್ನುವ ಗೊಂದಲಗಳು ಉದ್ಭವಿಸಿದ್ದವು. ಈ ಸಂಬಂಧ ಟಿವಿ9 ಕರ್ನಾಟಕ ಹೈಕೋರ್ಟ್​ನ ಹಿರಿಯ ವಕೀಲ ಬಿವಿ ಆಚಾರ್ಯ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ ಸಂಪುಟದಲ್ಲಿ ನಿರ್ಣಯ ಅಂಗೀಕಾರವಾದರೂ ಸಹ ಆರ್ಟಿಕಲ್ 163ರಲ್ಲಿ ಉಲ್ಲೇಖವಾಗಿರುವಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವ ಅಧಿಕಾರಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಗ್ಗೆ ರಾಜ್ಯಪಾಲರು ನೇರವಾಗಿ ತೀರ್ಮಾನ ತೆಗೆದುಕೊಳ್ಳಬಹುದು. ಆರ್ಟಿಕಲ್ 163ರಲ್ಲಿ ಈ ಬಗ್ಗೆ ಉಲ್ಲೇಖ ಆಗಿದೆ. ಕ್ಯಾಬಿನೆಟ್ ಅಭಿಪ್ರಾಯ ಕೊಟ್ಟರೆ ಅನುಮೋದನೆ ಮಾಡಲೇಬೇಕು ಅಂತೇನಿಲ್ಲ. ಅವರಿಗೆ ಕೌನ್ಸಿಲ್ ಮಿನಿಸ್ಟರ್ ವಿರುದ್ಧವಾಗಿ ಕೂಡ ಸ್ಯಾಂಕ್ಷನ್ ಕೂಡ ಮಾಡಬಹುದು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟ ಮುಡಾ ಹಗರಣ: ಮತ್ತೆ ವರದಿ ಕೇಳಿದ ರಾಜ್ಯಪಾಲ

ಕ್ಯಾಬಿನೆಟ್ ಒಪಿನಿಯನ್ ಮಾಡದೇ ಸ್ಯಾಂಕ್ಷನ್ ಕೊಡುವ ಅಧಿಕಾರ ರಾಜ್ಯಪಾಲರಿಗೆ ಇದೆ . ಅಕ್ರಮ ನಡೆದಿದೆ ಕ್ರಿಮಿನಲ್ ಕೇಸ್ ಆಗುತ್ತೆ ಮನವರಿಕೆ ಆಗಿದ್ದರೆ ಕಾನೂನಿನ ಪ್ರಕಾರ ಕ್ಯಾಬಿನೆಟ್ ಅಭಿಪ್ರಾಯ ತೆಗೆದುಕೊಳ್ಳಬಹುದು. ಇಲ್ಲ ಸ್ವತಂತ್ರವಾಗಿ ಕೂಡ ತೀರ್ಮಾನ ಮಾಡಬಹುದು. 2004ರಲ್ಲಿ ಮಧ್ಯಪ್ರದೇಶದ ಇಬ್ಬರು ಮಿನಿಸ್ಟರ್ ಮೇಲೆ ಕೇಸ್ ಇತ್ತು. ಕ್ಯಾಬಿನೆಟ್ ಅಂಗೀಕಾರ ಇರಲಿಲ್ಲ. ರಾಜ್ಯಪಾಲರು ಕ್ಯಾಬಿನೆಟ್ ಒಪ್ಪದೆ ತಾವಾಗಿಯೇ ಅನುಮತಿ ನೀಡಿದ್ದನ್ನು ಸುಪ್ರೀಂಕೋರ್ಟ್ ಒಪ್ಪಿತ್ತು. ಆದ್ರೆ, ನೇರವಾಗಿ ಕೇಂದ್ರದ ತನಿಖಾ ಸಂಸ್ಥೆಗೆ ನೀಡುವ ಹಾಗಿಲ್ಲ ಎಂದು ತಿಳಿಸಿದರು.

ಇದು ಕೇವಲ ನೈತಿಕ ಪ್ರಶ್ನೆ ವಿಚಾರಣೆಯಲ್ಲಿದ್ದಾಗ ಮುಖ್ಯಮಂತ್ರಿ ಆಗಿ ಮುಂದಯವರೆಯಬಹುದು. ದೆಹಲಿ ಮುಖ್ಯಮಂತ್ರಿ ಕಸ್ಟಡಿಯಲ್ಲಿದ್ದರೂ ಅವರು ರಾಜೀನಾಮೆ ನೀಡಿಲ್ಲ. ಸುಪ್ರೀಂ ಕೋರ್ಟ್ ಅವರ ನಿರ್ಧಾರಕ್ಕೆ ಬಿಟ್ಟಿದೆ. ಬೇರೆ ಯಾವ ಕೋರ್ಟ್ ತೀರ್ಪಿಗಿಂತಲೂ ಸುಪ್ರೀಂ ಕೋರ್ಟ್ ಆದೇಶ ಮುಖ್ಯವಾದದ್ದು. ರಾಜ್ಯಪಾಲರಿಗೆ ವಿಚಾರಣೆಗೆ ಅನುಮತಿ ನೀಡುವ ಅಧಿಕಾರ ಇದೆ ಎಂದು ಐದು ಜಡ್ಜ್ ತೀರ್ಮಾನ ಮಾಡಿದ್ದು ಇದೆ. ಇನ್ನು ಕಾನೂನು ತಜ್ಞರೊಂದಿಗೆ ಚರ್ಚೆ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ ಎಂದು ಮಾಹಿತಿ ನೀಡಿದರು.

ಸಿಎಂ ವಿರುದ್ಧ ವಿಚಾರಣಾ ಅನುಮತಿಯನ್ನು ರಾಜ್ಯಪಾಲರು ಕೊಡಬಹುದು ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಅವರು ಸುಪ್ರೀಂಕೋರ್ಟ್​ನ ಆದೇಶವನ್ನು ಕೋಟ್​ ಮಾಡಿ ತಿಳಿಸಿದ್ದಾರೆ. ಈ ಮೂಲಕ ರಾಜ್ಯ ಸಚಿವ ಸಂಪುಟ ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದರೂ ಸಹ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಬಹುದು. ಇದರೊಂದಿಗೆ ಒಂದು ಸಾಲಿನ ನಿರ್ಣಯ ಅಂಗೀಕರಿಸಲಿರುವ ಸಂಪುಟ ರಾಜಭವನದೊಂದಿಗೆ ಸಂಘರ್ಷಕ್ಕೆ ಇಳಿದರೂ ಆಶ್ಚರ್ಯವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ