ಮಾನವರಂತೆ ವಿಶಿಷ್ಟ ರೀತಿಯಲ್ಲಿ ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಮಾಡಿ, ಮುದ್ದುಗೆರೆದ ಮುದ್ದಗೆರೆ ಗ್ರಾಮಸ್ಥರು!

| Updated By: ಸಾಧು ಶ್ರೀನಾಥ್​

Updated on: Aug 14, 2023 | 12:30 PM

ರೈತರಿಗೆ ಸಾಕು ಪ್ರಾಣಿಗಳು ಮನೆಯ ಸದಸ್ಯರಿದ್ದಂತೆ. ಅವುಗಳನ್ನು ಚೆನ್ನಾಗಿ ನೋಡಿಕೊಂಡರೆ ನಾವು ಸಮೃದ್ಧವಾಗಿರುತ್ತೇವೆ, ಬದುಕು ಬಂಗಾರವಾಗುತ್ತದೆ. ನಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳನ್ನು ನಮ್ಮ ಮನೆಯ ಸದಸ್ಯರಂತೆ ನಾವು ಭಾವಿಸಿದ್ದೇವೆ. ನಮ್ಮ ಮನೆಯಲ್ಲಿ ಸೀಮಂತ ಮಾಡುತ್ತಿರುವುದರಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ - ಮುದ್ದಗೆರೆ ಗ್ರಾಮಸ್ಥರ ಮೆಚ್ಚುಗೆ

ಮಾನವರಂತೆ ವಿಶಿಷ್ಟ ರೀತಿಯಲ್ಲಿ ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಮಾಡಿ, ಮುದ್ದುಗೆರೆದ ಮುದ್ದಗೆರೆ ಗ್ರಾಮಸ್ಥರು!
ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಮಾಡಿದ ಮುದ್ದುಗೆರೆದ ಮುದ್ದಗೆರೆ ಗ್ರಾಮಸ್ಥರು!
Follow us on

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮುದ್ದಗೆರೆ ಗ್ರಾಮದ ಕುಟುಂಬವೊಂದು (muddagere villagers) ಗರ್ಭಿಣಿಗೆ (pregnant) ಸೀಮಂತ (seemantha) ಮಾಡುವ ರೀತಿ ಹಸುವಿಗೆ ವಿಶಿಷ್ಟ ರೀತಿಯಲ್ಲಿ ಸೀಮಂತ ನೆರವೇರಿಸಿ ಗಮನ ಸೆಳೆದಿದೆ. ಗ್ರಾಮದ ರಾಜಪ್ಪ ಎಂಬುವವರ ಮನೆಯಲ್ಲಿ ಈ ಸಂಭ್ರಮದ ಕಾರ್ಯ ನಡೆದಿದೆ. ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಮಾಡಿದ ಕುಟುಂಬಸ್ಥರು ಕೊಬ್ಬರಿ, ಬೆಲ್ಲ, ಹೂವು, ಹಣ್ಣು, ಕಲ್ಲುಸಕ್ಕರೆ, ಕರ್ಜೂರ, ದ್ರಾಕ್ಷಿ, ಗೋಡಂಬಿ, ಬಳೆ, ಅರಿಶಿಣ-ಕುಂಕುಮ, ಸೀರೆ ಇಟ್ಟು ವಿಶೇಷ ಪೂಜೆ‌ ನೆರವೇರಿಸಿತು. ಸದರಿ ಕುಟುಂಬಸ್ಥರು ಬಂಧು ಬಾಂದವರನ್ನ ಕರೆಸಿ ಗ್ರಾಮಸ್ಥರೆಲ್ಲರಿಗೂ ಅಡುಗೆ ಮಾಡಿಸಿ ಉಣಬಡಿಸಿದರು.

ರೈತರಿಗೆ ಸಾಕು ಪ್ರಾಣಿಗಳು ಮನೆಯ ಸದಸ್ಯರಿದ್ದಂತೆ. ಅವುಗಳನ್ನು ಚೆನ್ನಾಗಿ ನೋಡಿಕೊಂಡರೆ ನಾವು ಸಮೃದ್ಧವಾಗಿರುತ್ತೇವೆ, ಬದುಕು ಬಂಗಾರವಾಗುತ್ತದೆ. ನಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳನ್ನು ನಮ್ಮ ಮನೆಯ ಸದಸ್ಯರಂತೆ ನಾವು ಭಾವಿಸಿದ್ದೇವೆ. ನಮ್ಮ ಮನೆಯಲ್ಲಿ ಸೀಮಂತ ಮಾಡುತ್ತಿರುವುದರಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

Also Read: ಚಿಕ್ಕಮಗಳೂರು: ವರ್ಷದಿಂದ ಗದ್ದೆಯಲ್ಲಿ ಮನೆ ಮಾಡಿ, ಬೆಚ್ಚಗೆ ಮಲಗಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಉರಗ ತಜ್ಞ

ಹಸುವಿನ ಸೀಮಂತ ಮಾಡುತ್ತಿರುವುದು ವಿಶೇಷ ಮತ್ತು ವಿಶಿಷ್ಟವಾಗಿದೆ. ಇದೊಂದು ಮಾದರಿ ಕಾರ್ಯವಾಗಿದೆ. ಹೆಣ್ಣುಮಕ್ಕಳಿಗೆ ಮಾಡುವ ಸೀಮಂತ ಕಾರ್ಯದ ರೀತಿ ಮಾಡಿದ್ದೇವೆ. ಸಾಕು ಪ್ರಾಣಿಗಳನ್ನು ನಾವು ಗೌರವ ಮತ್ತು ಭಕ್ತಿಯಿಂದ ಕಾಣಬೇಕಾದದ್ದು ನಮ್ಮ ಧರ್ಮ ಎಂದು ಕುಟುಂಬಸ್ಥರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:30 pm, Mon, 14 August 23