ಚಿಕ್ಕಮಗಳೂರು: ವರ್ಷದಿಂದ ಗದ್ದೆಯಲ್ಲಿ ಮನೆ ಮಾಡಿ, ಬೆಚ್ಚಗೆ ಮಲಗಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಉರಗ ತಜ್ಞ
ಕಾಳಿಂಗ ಸರ್ಪ ಕಾಣಿಸಿಕೊಂಡ ಹಿನ್ನೆಲೆ, ಗದ್ದೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕಿದ್ದು, 15 ಅಡಿಗೂ ಉದ್ದದ ಬಿಲದಲ್ಲಿ ಮನೆ ಮಾಡಿ ಈ ಕಾಳಿಂಗ ಸರ್ಪ ವಾಸವಾಗಿತ್ತು.ಕೂಡಲೆ ಉರಗ ತಜ್ಞ ಹರಿಂದ್ರಗೆ ಫೋನ್ ಮಾಡಿ ಕೊಪ್ಪ ತಾಲೂಕಿನ ಕೋಡಿಹಿತ್ಲು ಸಮೀಪದ ಹೊಸೂರು ಗ್ರಾಮದಲ್ಲಿ ಗದ್ದೆ ಮಾಲೀಕ ಸ್ಥಳಕ್ಕೆ ಕರೆಸಿ ಕೊಂಡಿದ್ದು, ಸತತ ನಾಲ್ಕು ಗಂಟೆಯ ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪ ಸೆರೆ ಹಿಡಿಯಲಾಗಿದೆ.
ಚಿಕ್ಕಮಗಳೂರು : ಒಂದು ವರ್ಷದಿಂದ ಗದ್ದೆಯಲ್ಲಿ ಮನೆ ಮಾಡಿ, ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು (king cobra) ಸೆರೆ ಹಿಡಿಯಲಾಗಿದೆ. ಬರೋಬ್ಬರಿ 14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ, ಚಿದಂಬರ ಹೆಬ್ಬಾರ್ ಗದ್ದೆಯಲ್ಲಿ ಕಳೆದ ಒಂದು ವರ್ಷದಿಂದ ಕಾಳಿಂಗ ಸರ್ಪ ವಾಸವಾಗಿತ್ತು. ಒಂದು ವರ್ಷದಿಂದ ಗದ್ದೆ ಕೃಷಿ ಮಾಡದೆ ಈ ಕೃಷಿಕ ಪಾಳು ಬಿಟ್ಟಿದ್ದರು. ಈ ವರ್ಷ ಗದ್ದೆ ಕೃಷಿ ಮಾಡಲು ರೈತ ಮುಂದಾಗಿದ್ದ ವೇಳೆ ಈ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಕೃಷಿ ಮಾಡುವ ವೇಳೆ ಕಾರ್ಮಿಕರಿಗೆ, ಪದೇ ಪದೇ,ರೌದ್ರಾವತಾರವನ್ನು ಈ ಕಾಳಿಂಗ ಸರ್ಪ ತೋರಿಸಿದೆ. ಕೊಪ್ಪ ತಾಲೂಕಿನ (Koppa, Chikkamagaluru) ಕೋಡಿಹಿತ್ಲು ಸಮೀಪದ, ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗದ್ದೆ ಉಳಿಮೆ ವೇಳೆ, ಪದೇ ಪದೇ ಕಾರ್ಮಿಕರಿಗೆ ಕಾಳಿಂಗ ಸರ್ಪ ಕಾಣಿಸಿ ಕೊಂಡು ಭಯದ ವಾತಾವರಣ ನಿರ್ಮಾಣ ಮಾಡಿತ್ತು.
ಕಾಳಿಂಗ ಸರ್ಪ ಕಾಣಿಸಿಕೊಂಡ ಹಿನ್ನೆಲೆ, ಗದ್ದೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕಿದ್ದು, 15 ಅಡಿಗೂ ಉದ್ದದ ಬಿಲದಲ್ಲಿ ಮನೆ ಮಾಡಿ ಈ ಕಾಳಿಂಗ ಸರ್ಪ ವಾಸವಾಗಿತ್ತು.ಕೂಡಲೆ ಉರಗ ತಜ್ಞ ಹರಿಂದ್ರಗೆ (snake charmer) ಫೋನ್ ಮಾಡಿ ಗದ್ದೆ ಮಾಲೀಕ ಸ್ಥಳಕ್ಕೆ ಕರೆಸಿ ಕೊಂಡಿದ್ದು, ಸತತ ನಾಲ್ಕು ಗಂಟೆಯ ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪ ಸೆರೆ ಹಿಡಿಯಲಾಗಿದೆ. ಬರೋಬ್ಬರಿ 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಯಾಗಿದ್ದು, ಕಾಳಿಂಗ ಸರ್ಪ ಸೆರೆ ಬಳಿಕ ಗದ್ದೆಯ ಮಾಲೀಕ,ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.ನಂತರ ಅರಣ್ಯ ಇಲಾಖೆಯ ಸಮ್ಮುಖದಲ್ಲಿ, ಕೊಪ್ಪ ಹೊರ ವಲಯದ ಅರಣ್ಯದಲ್ಲಿ ಸೆರೆ ಹಿಡಿದು ಕಾಳಿಂಗ ಸರ್ಪವನ್ನು ಬಿಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ