BJP ಟಿಕೆಟ್ ಸಿಗಲಿಲ್ಲ ಅಂದ್ರೆ.. ಮುನಿರತ್ನ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ?

| Updated By: ಸಾಧು ಶ್ರೀನಾಥ್​

Updated on: Oct 12, 2020 | 3:14 PM

ಬೆಂಗಳೂರು: ಶಿರಾ ಮತ್ತು RR ನಗರ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಲಾಬಿ ಜೋರಾಗಿ ಸಾಗಿದೆ. ಈ ನಡುವೆ RR ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಮುನಿರತ್ನಗೆ ಟಿಕೆಟ್ ಕೈ ತಪ್ಪುವ ಆತಂಕ ಹೆಚ್ಚಾಗಿದೆ. ಹೀಗಾಗಿ ಲಗ್ಗೆರೆ ಬಳಿಯ ಲಕ್ಷ್ಮೀದೇವಿ ನಗರದಲ್ಲಿ ಬೆಂಬಲಿಗ ಕಾರ್ಪೋರೆಟರ್ ನಿವಾಸದಲ್ಲಿ ಮುನಿರತ್ನ ಸಭೆ ನಡೆಸಿ ಇತರೆ ಬೆಂಬಲಿಗರ ಜೊತೆ ಚರ್ಚೆ ನಡೆಸಿದ್ದಾರೆ. ಟಿಕೆಟ್ ಖಚಿತವಾಗದ ಹಿನ್ನೆಲೆ, ಆತಂಕದಲ್ಲಿ ಮುನಿರತ್ನ  ಸದ್ಯದ ಬೆಳವಣಿಗೆಗಳ ಪ್ರಕಾರ ಮುನಿರತ್ನಗೆ […]

BJP ಟಿಕೆಟ್ ಸಿಗಲಿಲ್ಲ ಅಂದ್ರೆ.. ಮುನಿರತ್ನ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ?
Follow us on

ಬೆಂಗಳೂರು: ಶಿರಾ ಮತ್ತು RR ನಗರ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಲಾಬಿ ಜೋರಾಗಿ ಸಾಗಿದೆ. ಈ ನಡುವೆ RR ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಮುನಿರತ್ನಗೆ ಟಿಕೆಟ್ ಕೈ ತಪ್ಪುವ ಆತಂಕ ಹೆಚ್ಚಾಗಿದೆ. ಹೀಗಾಗಿ ಲಗ್ಗೆರೆ ಬಳಿಯ ಲಕ್ಷ್ಮೀದೇವಿ ನಗರದಲ್ಲಿ ಬೆಂಬಲಿಗ ಕಾರ್ಪೋರೆಟರ್ ನಿವಾಸದಲ್ಲಿ ಮುನಿರತ್ನ ಸಭೆ ನಡೆಸಿ ಇತರೆ ಬೆಂಬಲಿಗರ ಜೊತೆ ಚರ್ಚೆ ನಡೆಸಿದ್ದಾರೆ.

ಟಿಕೆಟ್ ಖಚಿತವಾಗದ ಹಿನ್ನೆಲೆ, ಆತಂಕದಲ್ಲಿ ಮುನಿರತ್ನ 
ಸದ್ಯದ ಬೆಳವಣಿಗೆಗಳ ಪ್ರಕಾರ ಮುನಿರತ್ನಗೆ ಇನ್ನೂ ಬಿಜೆಪಿ ಟಿಕೆಟ್ ಖಚಿತವಾಗಿಲ್ಲ. ಅದಕ್ಕಾಗಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಸದ್ಯ ಟಿಕೆಟ್ ಖಚಿತವಾಗದ ಹಿನ್ನೆಲೆಯಲ್ಲಿ ಮುನಿರತ್ನ ಆತಂಕದಲ್ಲಿದ್ದಾರೆ.