ಬೇಗೂರು: ಅಪಾರ್ಟ್ಮೆಂಟ್ ಬಳಿ ಆಟವಾಡ್ತಿದ್ದ ಬಾಲಕ ನೀರು ತುಂಬಿದ ಗುಂಡಿಗೆ ಬಿದ್ದು ಸಾವು
ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರು ತಮ್ಮ ಮಕ್ಕಳನ್ನ ಮನೆಯಲ್ಲೇ ಬಿಟ್ಟು ಹೋಗಲಾಗದೆ ಕೆಲಸದ ಸ್ಥಳಕ್ಕೆ ಮಕ್ಕಳನ್ನ ಕರೆದುಕೊಂಡು ಹೋಗ್ತಾರೆ. ಆದರೆ ಆ ಮಕ್ಕಳನ್ನ ಯಾರು ನೋಡಿಕೊಳ್ಳುವವರಿಲ್ಲದೆ ಮಣ್ಣಿನಲ್ಲಿ ಆಟವಾಡಿ ಅಲ್ಲಿ ಇಲ್ಲಿ ಬಿದ್ದು ಗಲೀಜು, ಗಾಯ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಎಂತಹ ಅನಾಹುತವಾಗಬಹುದು ಗೊತ್ತೇ? ಅದಕ್ಕೆ ಇಲ್ಲಿದೆ ಸಾಕ್ಷಿ.. ಕೆಲಸ ನಡೆಯುತ್ತಿದ್ದ ಅಪಾರ್ಟ್ಮೆಂಟ್ ಬಳಿ ಆಟವಾಡುತ್ತಿದ್ದ 7 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ನಗರದ ಬೇಗೂರಿನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ ಕಟ್ಟಡ ಕೆಲಸಕ್ಕಾಗಿ ಗುಂಡಿ ತೆಗೆದು […]

ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರು ತಮ್ಮ ಮಕ್ಕಳನ್ನ ಮನೆಯಲ್ಲೇ ಬಿಟ್ಟು ಹೋಗಲಾಗದೆ ಕೆಲಸದ ಸ್ಥಳಕ್ಕೆ ಮಕ್ಕಳನ್ನ ಕರೆದುಕೊಂಡು ಹೋಗ್ತಾರೆ. ಆದರೆ ಆ ಮಕ್ಕಳನ್ನ ಯಾರು ನೋಡಿಕೊಳ್ಳುವವರಿಲ್ಲದೆ ಮಣ್ಣಿನಲ್ಲಿ ಆಟವಾಡಿ ಅಲ್ಲಿ ಇಲ್ಲಿ ಬಿದ್ದು ಗಲೀಜು, ಗಾಯ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಎಂತಹ ಅನಾಹುತವಾಗಬಹುದು ಗೊತ್ತೇ? ಅದಕ್ಕೆ ಇಲ್ಲಿದೆ ಸಾಕ್ಷಿ..
ಕೆಲಸ ನಡೆಯುತ್ತಿದ್ದ ಅಪಾರ್ಟ್ಮೆಂಟ್ ಬಳಿ ಆಟವಾಡುತ್ತಿದ್ದ 7 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ನಗರದ ಬೇಗೂರಿನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ ಕಟ್ಟಡ ಕೆಲಸಕ್ಕಾಗಿ ಗುಂಡಿ ತೆಗೆದು ಬಿಡಲಾಗಿತ್ತು. ಮೊನ್ನೆ ಸುರಿದ ಭಾರಿ ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು.
ಅಲ್ಲಿಯೇ ಆಟವಾಡುತ್ತಿದ್ದ ಹುಡುಗ ಗುಂಡಿಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಮಗನನ್ನು ಕಂಡು ದಿಕ್ಕುತೋಚದೆ ತಂದೆ ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ಒಂದು ಚಿಕ್ಕ ನಿರ್ಲಕ್ಷ್ಯಕ್ಕೆ ಮಗು ಪ್ರಾಣ ಕಳೆದುಕೊಂಡಿದೆ. ಕೆಲ ದಿನಗಳ ಹಿಂದೆ ಇದೇ ರೀತಿ ತಾಯಿ ಊಟ ಮಾಡಿಸುತ್ತಿದ್ದ ಪುಟ್ಟ ಮಗು ಬಿದ್ದು ಮೃತಪಟ್ಟ ಘಟನೆ ಮಂಡ್ಯದಲ್ಲಿ ನಡೆದಿತ್ತು.