AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮುಸಲ್ಮಾನ ಗೂಂಡಾಗಳು ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ’ – ಸಚಿವ ಕೆ ಎಸ್​ ಈಶ್ವರಪ್ಪ ಗಂಭೀರ ಆರೋಪ

ಶಿವಮೊಗ್ಗದಲ್ಲಿ ನಮ್ಮ ಸಜ್ಜನ ಕಾರ್ಯಕರ್ತನ ಕೊಲೆ ಆಗಿದೆ. ನಿನ್ನೆ ಮುಸಲ್ಮಾನ ಗೂಂಡಾಗಳು ಕೊಲೆ ಮಾಡಿದ್ದಾರೆ ಬೆಂಗಳೂರಿನಲ್ಲಿ ಸಚಿವ ಕೆ ಎಸ್​ ಈಶ್ವರಪ್ಪ ಗಂಭೀರ ಆರೋಪ

‘ಮುಸಲ್ಮಾನ ಗೂಂಡಾಗಳು ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ’ - ಸಚಿವ ಕೆ ಎಸ್​ ಈಶ್ವರಪ್ಪ ಗಂಭೀರ ಆರೋಪ
ಸಚಿವ ಕೆ.ಎಸ್.ಈಶ್ವರಪ್ಪ
TV9 Web
| Edited By: |

Updated on:Feb 21, 2022 | 10:53 AM

Share

ಬೆಂಗಳೂರು/ ಶಿವಮೊಗ್ಗ: ಶಿವಮೊಗ್ಗದಲ್ಲಿ ನಮ್ಮ ಸಜ್ಜನ ಕಾರ್ಯಕರ್ತನ ಕೊಲೆ ಆಗಿದೆ. ನಿನ್ನೆ ಮುಸಲ್ಮಾನ ಗೂಂಡಾಗಳು ಕೊಲೆ ಮಾಡಿದ್ದಾರೆ. ಹತ್ಯೆಗೀಡಾದ ವ್ಯಕ್ತಿ ಬಹಳ ಪ್ರಾಮಾಣಿಕ, ತುಂಬಾ ಒಳ್ಳೆಯ ಯುವಕ. ಇನ್ನೂ ಮದುವೆಯನ್ನೂ ಆಗಿರಲಿಲ್ಲ. ಅಂತಹವ ಹತ್ಯೆ ಆಗಿದೆ. ಮುಸಲ್ಮಾನ ಗೂಂಡಾಗಳಿಗೆ ಇಷ್ಟು ಧೈರ್ಯ ಬಂದಿದೆ ಎಂದು ಸರ್ಕಾರ ತನಿಖೆ ಮಾಡ್ತಿದೆ. ಶಿವಮೊಗ್ಗದಲ್ಲಿ ಈ ಮುಸಲ್ಮಾನ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರಚೋದನಕಾರಿ ಹೇಳಿಕೆಗಳಿಂದ ಈ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ಬೆಂಗಳೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಶಿವಮೊಗ್ಗಕ್ಕೆ ಪ್ರಯಾಣ ಮಾಡುವುದಾಗಿ ಈಶ್ವರಪ್ಪ ಹೇಳಿದ್ದಾರೆ.

ಇದರ ಬಗ್ಗೆ ಸಿಎಂ ಮತ್ತು ಹೋಂ ಮಿನಿಸ್ಟರ್ ಜತೆ ಮಾತಾಡಿದೀನಿ. ಶಿವಮೊಗ್ಗದಲ್ಲಿ ಮುಸ್ಲಿಮರು ಬಾಲ ಬಿಚ್ಚಿರಲಿಲ್ಲ. ಡಿಕೆ ಶಿವಕುಮಾರ್ ಧ್ವಜದ ವಿಚಾರದಲ್ಲಿ ಪ್ರಚೋದನಾ ಹೇಳಿಕೆ ನೀಡಿದ್ದರು. ಸೂರತ್‌ನಿಂದ ಕೇಸರಿ ಶಾಲು ತರಿಸಿದ್ದಾಗಿ ಹೇಳಿಕೆ ನೀಡಿದ್ದರು. ಡಿಕೆ ಶಿವಕುಮಾರ್ ಆ ಹೇಳಿಕೆಯಿಂದ ಪ್ರೇರಣೆ ಪಡೆದು ಮುಸ್ಲಿಂ ಗೂಂಡಾಗಳು ನಿನ್ನೆ ರಾತ್ರಿ ನಮ್ಮ ಪ್ರಾಮಾಣಿಕ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ್ದಾರೆ. ಯುವಕನ ಕಾರ್ಯವನ್ನು ನಾವೇ ಮುಂದೆ ನಿಂತು ಮಾಡ್ತೇವೆ. ಈಗಾಗಲೇ ಗೃಹ ಸಚಿವರಿಗೆ ಮಾತಾಡಿದ್ದೇನೆ. ಕೇಸರಿ ಶಾಲೆ ಹಚ್ಚಿದ್ದಾರೆ, ರಾಷ್ಟ್ರ ಧ್ವಜ ತೆಗೆದು ಭಗಧ್ವಜ ಹಾರಿಸಿದ್ದಾರೆ ಎಂಬಂತಹ ಡಿಕೆ ಶಿವಕುಮಾರ್ ಹೇಳಿಕೆಯಿಂದ ಕುಮ್ಮಕ್ಕು ಪಡೆದ ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ನೇರ ಆರೋಪ ಮಾಡಿದ್ದಾರೆ.

6 ಜನರ ಗುಂಪು ಹರ್ಷನ ಮೇಲೆ ದಾಳಿ ಮಾಡಿತ್ತು- ಟಿವಿ9 ಗೆ ಪ್ರತ್ಯಕ್ಷದರ್ಶಿಗಳ ಮಾಹಿತಿ: ಇನ್ನು ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಗೂ ಮುನ್ನ ನಡೆದ ಘಟನಾವಳಿಗಳ ಬಗ್ಗೆ ಟಿವಿ9 ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಹರ್ಷ ಊಟ ಮಾಡಬೇಕಿತ್ತು. ಮನೆಯಲ್ಲಿ ತಂಗಳ ಸಾರು ಇತ್ತು. ಅದಕ್ಕೆ ಹೊರಗಡೆಯಿಂದ ಎಗ್​ರೈಸ್​ ತರುತ್ತೇನೆ ಎಂದು ಹರ್ಷ ಹೊರಗೆ ಹೋದ. ಸ್ನೇಹಿತ ಜೊತೆ ಹೋದ. ಭಾರತಿ ಕಾಲೋನಿಗೆ ಬಂದಿದ್ದಾನೆ. ಈ ಸಮಯದಲ್ಲಿ ಗಲಾಟೆ ಆಗುತ್ತಿರುತ್ತೆ. ಈ ಸಮಯದಲ್ಲಿ ಸ್ನೇಹಿತರಿಗೆ ಕಳುಹಿಸಿ ಏನು ನೋಡಿ ಅಂತ ಹರ್ಷ ಹೇಳುತ್ತಾನೆ. ಅಷ್ಟರಲ್ಲೇ ಸ್ವಿಫ್ಟ್ ​ಕಾರಿನಲ್ಲಿ ಬಂದ 6 ಜನರ ಗುಂಪು ಹರ್ಷನ ಮೇಲೆ ದಾಳಿ ಮಾಡುತ್ತಾರೆ. ಹರ್ಷನ ಮೇಲೆ ದಾಳಿ ಮಾಡಿದವರ ಮೇಲೆ ಪ್ರತಿದಾಳಿ ದಾಳಿ ಮಾಡಲು ಹರ್ಷ ಮುಂದಾಗುತ್ತಾನೆ. ನನಗೆ ಬ್ಯಾಟ್​ ಕೊಡಿ ಎಂದು ಹರ್ಷ ಕೂಗಿ ಕೇಳಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈಶ್ವರಪ್ಪ ಹರಕು ಬಾಯಿ ಅಂತ ಗೊತ್ತಿದೆ- ಶಿವಕುಮಾರ್​ ಪ್ರತಿಕ್ರಿಯೆ: ಈಶ್ವರಪ್ಪ ಹರಕು ಬಾಯಿ ಅಂತ ಗೊತ್ತಿದೆ‌. ಅವನ ಬಗ್ಗೆ ನಮ್ಮ ನಾಯಕರೆ ಹೇಳಿದ್ದಾರೆ. ಈ ಕೊಲೆ ನಮಗೂ ನೋವಾಗಿದೆ, ಇದನ್ನ ನಾನು, ನಮ್ಮ ಪಕ್ಷದ ವತಿಯಿಂದ ಖಂಡಿಸುತ್ತೇವೆ. ಈ ರೀತಿ ಹೇಳಿಕೆ ಕೊಟ್ಟ ಅವನ ಮೇಲೆ ಮೊದಲು ಕೇಸು ದಾಖಲಿಸಬೇಕು. ವೈಯುಕ್ತಿಕ ವಿಚಾರಗಳಿಗೆ ಕೊಲೆ ನಡೆದಿದೆ ಎಂದು ಮಾಧ್ಯಮದಲ್ಲಿ ಬರುತ್ತಿದೆ‌. ಗೃಹ ಸಚಿವರ ಹೇಳಿಕೆಯನ್ನು ಗಮನಿಸಿದ್ದೇನೆ. ದೇಶ ದ್ರೋಹಿ ಹೇಳಿಕೆ ಕೊಟ್ಟ ಅವನ ಮೇಲೆ ಮೊದಲು ಕ್ರಮ ಆಗಬೇಕು ಎಂದು ಕೆಪಿಸಿಸಿ ಅಧ್ಯಲ್ಷ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.‌

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ ಮಾಧ್ಯಮಗಳಿಂದ ನನಗೆ ತಿಳಿಯಿತು. ಕೊಲೆ ಪ್ರಕರಣ ಸಂಬಂಧ ಸೂಕ್ತ ತನಿಖೆಯಾಗಬೇಕು. ಯಾವುದೇ ಕಾರಣಕ್ಕೂ ತಪ್ಪಿತಸ್ಥರಿಗೆ ರಕ್ಷಣೆ ಸಿಗಬಾರದು. ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Shivamogga: ಮಲೆನಾಡು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ! ಬೆಚ್ಚಿಬಿದ್ದ ಮಲೆನಾಡು ಜನ

Bajrang Dal Activist Harsha Murder Case: ಶಿವಮೊಗ್ಗದಲ್ಲಿ ಅವರು ಬಾಲ ಬಿಚ್ಚಿರಲಿಲ್ಲ- ಸಚಿವ ಕೆ ಎಸ್​ ಈಶ್ವರಪ್ಪ

Published On - 9:15 am, Mon, 21 February 22

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ